»   » ಪ್ರಿಯಾಂಕಾಗೆ ಜಾನ್ ಟ್ರವೋಲ್ಟಾ ಹೈವೋಲ್ಟೇಜ್ ಕಿಸ್

ಪ್ರಿಯಾಂಕಾಗೆ ಜಾನ್ ಟ್ರವೋಲ್ಟಾ ಹೈವೋಲ್ಟೇಜ್ ಕಿಸ್

By: ಉದಯರವಿ
Subscribe to Filmibeat Kannada

ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ಸುಮಾರು ವರ್ಷಗಳ ಹಿಂದೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಹಾಗೂ ಹಾಲಿವುಡ್ ನಟ ರಿಚರ್ಡ್ ಗೇರ್ ಚುಂಬನ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕರ ಸಭೆಯೊಂದರಲ್ಲಿ ಶಿಲ್ಪಾ ಶೆಟ್ಟಿಯನ್ನು ರಿಚರ್ಡ್ ಗೇರ್ ಬರಸೆಳೆದು ಮತ್ತೆ ಮತ್ತೆ ಚುಂಬಿಸಿದ್ದರು.

ಆ ಪ್ರಕರಣ ನಡೆದು ವರ್ಷಗಳೇ ಉರುಳಿಹೋಗಿವೆ. ತಾರೆ ಶಿಲ್ಪಾ ಶೆಟ್ಟಿ ಮದುವೆಯಾಗಿ ಮಗುವಾಗಿ ಹಾಯಾಗಿ ತನ್ನ ಪತಿ ರಾಜ್ ಕುಂದ್ರಾ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಈಗ ಆ ಚುಂಬನ ಪ್ರಕರಣವನ್ನು ಮರೆಸುವಂತಹ ಮತ್ತೊಂದು ಅಂತಹದ್ದೇ ಆಲಿಂಗನ, ಚುಂಬನ ಫೋಟೋ ತೇಲಿಬಂದಿದೆ.

Hollywood star John Travolta dances with Priyanka Chopra

ಆದರೆ ಈ ಫೋಟೋಗೆ ಯಾರ ಆಕ್ಷೇಪಣೆ ಇಲ್ಲ ಬಿಡಿ. ಹಾಗಾಗಿ ಇದು ವಿವಾದಿತ ಚುಂಬನ ಸಾಲಿಗೂ ಬರಲ್ಲ. ಹದಿನೈದನೇ IIFA ಪ್ರಶಸ್ತಿ ಸಂಭ್ರಮದಲ್ಲಿ ತೇಲಾಡಿದ ಕ್ಷಣಗಳವು. ಹಾಲಿವುಡ್ ನಟ ಜಾನ್ ಟ್ರವೋಲ್ಟಾ ಜೊತೆ ಹೆಜ್ಜೆ ಹಾಕಿದಾಗ ಒಂದು ಹಂತದಲ್ಲಿ ಥೇಟ್ ಶಿಲ್ಪಾ ಶೆಟ್ಟಿ ಹಾಗೂ ಗೇರ್ ಅವರನ್ನು ನೆನಪಿಸಿದರು.

ಬಾಲಿವುಡ್ ಚಿತ್ರರಂದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಬೆಡಗಿ ಹೀಗೆ ಮಾಡಿದ್ದು ಹಲವರ ಹೃದಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ಫ್ಲೋರಿಡಾದ ತಾಂಪ ಬೇನಲ್ಲಿ IIFA ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಇಡೀ ಬಾಲಿವುಡ್ ಪರಿವಾರವೇ ಅಲ್ಲಿ ನೆರೆದಿದ್ದು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.

English summary
Hollywood star John Travolta dances with Bollywood actress Priyanka Chopra at the 15th IIFA Awards in Tampa Bay, Florida on Saturday.
Please Wait while comments are loading...