»   » ಬೆಳ್ಳಿಪರದೆ ಮೇಲಿನ ಒದ್ದೆಮುದ್ದೆ ಮಳೆ ಚಿತ್ರಗಳು

ಬೆಳ್ಳಿಪರದೆ ಮೇಲಿನ ಒದ್ದೆಮುದ್ದೆ ಮಳೆ ಚಿತ್ರಗಳು

By ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಮುಂಗಾರು ಮಳೆ' ಎಂದರೆ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಮಾಗಿ ಕಾಲ. ಆಹಾ ಆ ಚಳಿ, ಆ ಬಿಸಿಯಪ್ಪುಗೆಯನ್ನು ನೆನಪಿಸಿಕೊಂಡರೆ ಮೈಯಲ್ಲಾ ಒದ್ದೆಮುದ್ದೆ. ಅಂದಹಾಗೆ ಸಿನಿಮಾ ತಾರೆಗಳಿಗೂ ಈ ಮುಂಗಾರುಮಳೆಗೂ ಎಲ್ಲಿಲ್ಲದ ನಂಟು.

  ಈ ಮಳೆ ಹಾಡುಗಳಂತೂ ಬಾಲಿವುಡ್ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಳೆದ ಕೆಲವರ್ಷಗಳಿಂದ ಬೆಳ್ಳಿಪರದೆ ಮೇಲೆ ಸಾಕಷ್ಟು ಮಳೆ ಹಾಡುಗಳು ಹರಿದಾಡಿವೆ. 'ಕಪ್ಪು ಬಿಳುಪು' ಚಿತ್ರಗಳ ಜಮಾನಾದಿಂದ ಹಿಡಿದು ಇಂದಿನ ಬಣ್ಣದ ಚಿತ್ರಗಳವರೆಗೂ ಮುಂಗಾರುಮಳೆ ಸಾಕಷ್ಟು ಪ್ರಭಾವ ಬೀರಿದೆ.

  ಮುಂಗಾರು ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಚುರುಕಾಗುವಂತೆ ನಮ್ಮ ಬಾಲಿವುಡ್ ಮಂದಿಯೂ ಲೈಟ್ಸ್ ಕ್ಯಾಮೆರಾ ಹಿಡಿದು ಚುರುಕಾಗುತ್ತಾರೆ. ಈ ಮಳೆಯಲ್ಲಿ ಹಾಟ್ ಸೀನ್ ಗಳನ್ನು ತೆಗೆದು ಬಾಕ್ಸ್ ಆಫೀಸಲ್ಲಿ ಒಳ್ಳೆಯ ಬೆಳೆಯನ್ನೇ ತೆಗೆಯುತ್ತಾರೆ.

  ಅಂದಿನ 'ಶ್ರೀ 420'ಯ "ಪ್ಯಾರ್ ಹುವಾ ಇಕ್ ರಾರ್ ಹುವಾ.." ಹಾಡಿನಿಂದ ಹಿಡಿದು '1942: ಎ ಲವ್ ಸ್ಟೋರಿ' ಚಿತ್ರದ "ರಿಮ್ ಜಿಮ್ ರಿಮ್ ಜಿಮ್..." ಚಿತ್ರಗಳ ತನಕ ಹಲವಾರು ಚಿತ್ರಗಳ ಹಾಡುಗಳನ್ನು ಇಲ್ಲಿ ಧಾರಾಕಾರವಾಗಿ ನೆನಯಬಹುದು. ಕಾಲ ಬದಲಾದಂತೆ ಹಾಡುಗಳ ವರಸೆಯೂ ಬದಲಾಗುತ್ತಾ ಬಂದಿದೆ.

  ಬೇಡಿಕೆಗೆ ತಕ್ಕಂತೆ ಅಗತ್ಯ ಬದಲಾವಣೆಗಳೂ ಈ ಹಾಡುಗಳಲ್ಲಿ ಇಣುಕುತ್ತಿವೆ. ಆರಂಭದಲ್ಲಿ ಒಂಚೂರು ಬಿಂಕ ಬಿಗುಮಾನ ಇತ್ತು. ಈಗ ಅವೆಲ್ಲವೂ ಮಳೆನೀರಿನೊಂದಿಗೆ ಕೊಚ್ಚಿಹೋಗಿವೆ. ಹೆಚ್ಚು ಹೆಚ್ಚಾಗಿ ಹಾಟ್ ಆಗುತ್ತಾ ಪಡ್ಡೆಗಳನ್ನು ಕುಳಿತಲ್ಲೇ ತಣಿಸುತ್ತಿವೆ. ಇಲ್ಲಿವೆ ನೋಡಿ ಬಾಲಿವುಡ್ ನಲ್ಲಿ ಸುರಿದ ವ್ಯಾಪಕ ಮಳೆಯ ಹಾಟ್ ದೃಶ್ಯಗಳು.

  ಆಜ್ ನಬೀಯ ಬಿಗಿ ಬಿಗಿ ರಾಥೋ ಮೇ

  ರಾಜೇಶ್ ಖನ್ನಾ ಹಾಗೂ ಜೀನತ್ ಅಮನ್ ಅಭಿನಯದ 'ಆಜ್ ನಬೀ' ಚಿತ್ರದ ಈ ಹಾಡು ಕಿವಿಗೆ ಬಿದ್ದರೆ ಇಂದಿಗೂ ಚಿತ್ರ ಪ್ರೇಮಿಗಳ ಹೃದಯದಲ್ಲಿ ಜಡಿಮಳೆ ಸುರಿದ ಅನುಭವಾಗುತ್ತದೆ. ಕಿಶೋರ್ ಕುಮಾರ್ ಮತ್ತು ಲತಾ ಮಂಗೇಷ್ಕರ್ ಕಂಠಸಿರಿಯಲ್ಲಿ ಈ ಹಾಡು ಅದ್ಭುತವಾಗಿ ಹೊರಹೊಮ್ಮಿದೆ.

  ಚಾಂದಿನಿ ಚಿತ್ರದ ಸೂಪರ್ ಹಿಟ್ ಹಾಡು

  ಲಗಿ ಆಜ್ ಸವನ್ ಕಿ ಫಿರ್ ವೋ ಝಡಿ ಎಂಬ ಹಾಡು ಬ್ಲ್ಯಾಕ್ ಬಸ್ಟರ್ ಚಿತ್ರವಾದ 'ಚಾಂದಿನಿ' ಚಿತ್ರದ್ದು. ಸುರೇಶ್ ವಡ್ಕರ್ ಹಾಡಿರುವ ಈ ಹಾಡು ಕ್ಲಾಸಿಕ್ ಶೈಲಿಯಲ್ಲಿದ್ದು ಕೇಳುಗರ ಹೃನ್ಮನಕ್ಕೆ ಇರಚಲು ಎರಚುತ್ತದೆ.

  ಬೇಟಾ ಚಿತ್ರದ ಬಾದಲ್ ಯು ಗರಾಜ್ ತಾ ಹೈ

  ಎರಡು ಯುವ ಹೃದಯಗಳ ಪ್ರೇಮಕಾವ್ಯ ಇದು. ಸನ್ನಿ ಡಿಯೋಲ್ ಹಾಗೂ ಅಮೃತಾ ಸಿಂಗ್ ಮುಖ್ಯಭೂಮಿಕೆಯಲ್ಲಿರುವ ಈ ಹಾಡು ಬೇಟಾ ಚಿತ್ರದ್ದು. ಸನ್ನಿ ಹಾಗೂ ಅಮೃತಾ ಸಿಂಗ್ ಪಡ್ಡೆಗಳ ಹೃದಯದಲ್ಲಿ ಕುಂಭದ್ರೋಣ ಮಳೆ ಸುರಿಸಿದ್ದಾರೆ.

  ಎಲೆಕ್ಟ್ರಿಕ್ ಬ್ಲೂ ಸ್ಯಾರಿಯಲ್ಲಿ ಶ್ರೀದೇವಿ

  ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಅಪ್ರತಿಮ ಚೆಲುವೆ ಶ್ರೀದೇವಿ ಹಾಗೂ ಅನಿಲ್ ಕಪೂರ್ ಹೆಜ್ಜೆ ಹಾಕಿರುವ ಈ ಹಾಡು ಇಂದಿಗೂ ಯುವ ಪ್ರೇಮಿಗಳ ಮೈಯಲ್ಲಿ ಮಿಂಚಿನ ಸಂಚಾರ ಉಂಟು ಮಾಡುತ್ತದೆ. ಎಲೆಕ್ಟ್ರಿಕ್ ಬ್ಲೂ ಸ್ಯಾರಿಯಲ್ಲಿ ಶ್ರೀದೇವಿಯ ಮೈಮಾಟ ಕಣ್ಣಿಗೆ ಕಾಮನಬಿಲ್ಲು. ಬೆಳ್ಳಿಪರದೆ ಮೇಲೆ ಅತಿವೃಷ್ಟಿ ಸುರಿಸಿದ ಹಾಡಿದು.

  ಮೊಹ್ರಾ ಚಿತ್ರದ ಟಿಪ್ ಟಿಪ್ ಬರ್ಸಾ ಪಾನಿ

  ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ನಡುವಿನ ಈ ಗೀತೆಗೆ ಪರವಶವಾಗದ ಪ್ರೇಮಿಗಳಿಲ್ಲ. ರವೀನಾ ಟಂಡನ್ ಅವರ ಬಳುಕುವ ಮೈಗೆ ತಕ್ಕಂತೆ ಹಾಡಿನ ಪಲ್ಲವಿ ಕಿವಿಗೆ ಹಿತವಾಗಿದೆ. ಈ ಹಾಡಿಗೆ ಇಬ್ಬರೂ ಮೈಮರೆತು ಹೆಜ್ಜೆ ಹಾಕಿರುವ ರೀತಿ ನೋಡುತ್ತಿದ್ದರೆ ಕುಳಿತಲ್ಲೇ ತುಂತುರು ಮಳೆ ಶುರುವಾದಂತಾಗುತ್ತದೆ.

  ದಿಲ್ ತೋ ಪಾಗಲ್ ಹೈ ಚಿತ್ರದ ಹಾಡು

  ಈ ಚಿತ್ರದ ಕೋಯಿ ಲಡ್ ಕಿ ಹೈ ಹಾಡು ಬಾಲಿವುಡ್ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ. ಲತಾ ಮಂಗೇಷ್ಕರ್ ಹಾಗೂ ಉದಿತ್ ನಾರಾಯಣ್ ಕಂಠಸಿರಿಯಲ್ಲಿ ಈ ಹಾಡು ಅದ್ಭುತವಾಗಿ ಹೊರಹೊಮ್ಮಿದೆ. ಮಾಧುರಿ ದೀಕ್ಷಿತ್ ಹಾಗೂ ಶಾರುಖ್ ಖಾನ್ ತೆರೆಯ ಮೇಲಿನ ಕೆಮಿಸ್ಟ್ರಿ ಮುಸಲಧಾರೆಯಾಗಿ ಪ್ರವಹಿಸಿದೆ.

  ನಮಕ್ ಹಲಾಲ್ ಚಿತ್ರದ ರೊಮ್ಯಾಂಟಿಕ್ ಗೀತೆ

  ಆಜ್ ರಪತ್ ಜಾಯೀ...ಎಂಬ ಹಾಡಿಗೆ ಅಮಿತಾಬ್ ಬಚ್ಚನ್ ಹಾಗೂ ಸ್ಮಿತಾ ಪಾಟೀಲ್ ಮಾಡಿರುವ ಮೋಡಿ ನೋಡಿಯೇ ಆಸ್ವಾದಿಸಬೇಕು. ಈ ಜೋಡಿ ಬೆಳ್ಳಿತೆರೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಕಿಶೋರ್ ಕುಮಾರ್ ಹಾಗೂ ಆಶಾ ಬೋಂಸ್ಲೆ ಹಾಡು ಭರಣಿ ಮಳೆಯಂತೆ ಬಿರುಸಾಗಿದೆ.

  ಗುಲಾಂ ಚಿತ್ರದ ಮತ್ತೊಂದು ರೊಮ್ಯಾಂಟಿಕ್ ಹಾಡು

  ಆಂಕೋಂನ್ ಸೆ ತುನೆ ಕ್ಯಾ ಕೆಹ್ ದಿಯಾ ಎಂಬ ಹಾಡಿನ ಮೂಲಕ ಅಮೀರ್ ಖಾನ್ ಹಾಗೂ ರಾಣಿ ಹಾಟೆಸ್ಟ್ ಜೋಡಿಯಾಗಿ ಹೊರಹೊಮ್ಮಿದ್ದಾರೆ. ಗುಲಾಂ ಚಿತ್ರದ ಈ ಹಾಡಿನ ಮೂಲಕ ಇಬ್ಬರೂ ಮೈಮರೆತು ಕುಣಿದಿರುವ ರೀತಿ ನೋಡುಗರ ಕಣ್ಣಲ್ಲಿ ಆಲಿಕಲ್ಲು ಮಳೆ ಸುರಿದಂತಾಗುತ್ತದೆ.

  ಸರ್ಫ್ ರೋಶ್ ಚಿತ್ರದ ಹಿಟ್ ಸಾಂಗ್

  ಅಮೀರ್ ಖಾನ್ ಹಾಗೂ ಸೋನಾಲಿ ಬೇಂದ್ರೆ ಅಭಿನಯದ ಸರ್ಫ್ ರೋಶ್ ಚಿತ್ರದ ಜೋ ಹಾಲ್ ದಿಲ್ ಕಾ ಎಂಬ ಮಳೆ ಹಾಡಿನಲ್ಲಿ ಇಬ್ಬರೂ ಹೆಜ್ಜೆ ಹಾಕಿರುವ ರೀತಿ ಅಮೋಘವಾಗಿದೆ. ಬೆಳ್ಳಿಪರದೆಯ ಮೇಲೆ ಇಬ್ಬರೂ ಸುವರ್ಣ ವೃಷ್ಟಿ ಸುರಿಸಿದ್ದಾರೆ.

  ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ

  ಈ ಚಿತ್ರದಲ್ಲಿನ ಕಾಜೋಲ್ ಅವರ ಹಾಟ್ ಡಾನ್ಸ್ ಮರೆಯಲು ಸಾಧ್ಯವೆ. ಮಳೆ ಹನಿಗಳ ಲೀಲೆ ಜೊತೆಗೆ ಕಾಜೋಲ್ ಅವರ ಬಿಸಿಬಿಸಿ ದೃಶ್ಯಗಳು ಮೇರೆ ಖವಾಬೋ ಮೇ ಎಂಬ ಹಾಡಿಗೆ ವಿಚಿತ್ರ ಕಳೆ ತಂದಿತ್ತು. ಸ್ವಾತಿಮುತ್ತಿನ ಮಳೆಯಂತೆ ಕಣ್ಣಿಗೆ ಹಿತವಾದ ಅನುಭವ ನೀಡುತ್ತದೆ.

  English summary
  Monsoon is considered as one of most romantic, enticing and mesmerizing season. It is the season for the lovers and romance. This lovely, sexy season also plays a very important role in the Bollywood movies. Not only is this the most photogenic seasons, but also considered as the best season for the actors to get hot and naughty onscreen.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more