For Quick Alerts
  ALLOW NOTIFICATIONS  
  For Daily Alerts

  ಅವಕಾಶಕ್ಕಾಗಿ ನಾಯಕ ನಟರ ಪಕ್ಕ ಮಲಗಲಿಲ್ಲ: ರವೀನಾ ಟಂಡನ್ ಬಿರುಸು ಮಾತು

  |

  ಕೆಜಿಎಫ್‌ ನಟಿ ರವೀನಾ ಟಂಡನ್ ಬಿರುಸು ಮಾತುಗಳಿಗೆ ಸಖತ್ ಖ್ಯಾತರು. ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

  ನಟಿ ರವೀನಾ ಟಂಡನ್ ಇತ್ತೀಚೆಗೆ ವೆಬ್ ತಾಣವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ನ ಹುಳುಕುಗಳನ್ನು ತೆರೆದಿಟ್ಟಿದ್ದಾರೆ. ತಾವು ಬಾಲಿವುಡ್‌ ನ ರಾಜಕೀಯವನ್ನು ಎದುರಿಸಿದ ರೀತಿಯನ್ನು ಸಹ ನಿರ್ಭಿಡೆಯಿಂದ ತೆರೆದಿಟ್ಟಿದ್ದಾರೆ.

  90 ರ ದಶಕದಲ್ಲಿ ಟಾಪ್ ನಾಯಕಿಯಾಗಿದ್ದ ರವೀನಾ ಟಂಡನ್ ವಿರುದ್ಧದ ಆಗೆಲ್ಲಾ ಕೆಟ್ಟ-ಕೆಟ್ಟ ಆರ್ಟಿಕಲ್‌ಗಳು ಕೆಲವು ಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿದ್ದವಂತೆ. ನಾನು ನನ್ನದೇ ಆದ ವೃತ್ತಿ ಶಿಸ್ತು ಪಾಲಿಸುತ್ತಿದ್ದೆ. ಯಾರೊಬ್ಬರ ಕೈಗೊಂಬೆ ಆಗಿರಲಿಲ್ಲ ಹಾಗಾಗಿ ನನ್ನ ಮೇಲೆ ಉದ್ಯಮದವರೇ ಕೆಟ್ಟದಾಗಿ ಬರೆಸುತ್ತಿದ್ದರು ಎಂದಿದ್ದಾರೆ ರವೀನಾ.

  ಅವಕಾಶಕ್ಕಾಗಿ ನಟರೊಂದಿಗೆ ಮಲಗಲಿಲ್ಲ: ರವೀನಾ

  ಅವಕಾಶಕ್ಕಾಗಿ ನಟರೊಂದಿಗೆ ಮಲಗಲಿಲ್ಲ: ರವೀನಾ

  ನಾನು ಎಂದಿಗೂ ಅವಕಾಶಕ್ಕಾಗಿ ನಾಯಕ ನಟರ ಜೊತೆ ಮಲಗಲಿಲ್ಲ. ಯಾರೊಂದಿಗೂ ಅಫೇರ್ ಇಟ್ಟುಕೊಳ್ಳಲಿಲ್ಲ. ನನ್ನ ಪ್ರತಿಭೆಗೆ ಸಿಕ್ಕ ಪಾತ್ರಗಳನ್ನಷ್ಟೆ ಮಾಡಿದೆ. ಪಾತ್ರ ಗಿಟ್ಟಿಸಿಕೊಳ್ಳಲು ಪಲ್ಲಂಗ ಏರಲಿಲ್ಲ ಎಂದಿದ್ದಾರೆ ಕೆಜಿಎಫ್ ನಟ ರವೀನಾ ಟಂಡನ್.

  ಯಾವ ಗಾಡ್‌ಫಾದರ್ ಸಹ ನನಗೆ ಇರಲಿಲ್ಲ: ರವೀನಾ

  ಯಾವ ಗಾಡ್‌ಫಾದರ್ ಸಹ ನನಗೆ ಇರಲಿಲ್ಲ: ರವೀನಾ

  ನಾನು ಯಾವ ಬಾಲಿವುಡ್‌ ಗ್ಯಾಂಗ್‌ಗೂ ಸೇರಿರಲಿಲ್ಲ. ನನಗೆ ಯಾರೂ ಗಾಡ್‌ಫಾದರ್‌ಗಳು ಸಹ ಇರಲಿಲ್ಲ. ನಾಯಕ ನಟರು ಕೇಳಿದ್ದು ಮಾಡಲಿಲ್ಲವೆಂಬ ಕಾರಣಕ್ಕೆ ನನ್ನನ್ನು ದುರಹಂಕಾರಿ ಎಂದು ಸಹ ಕರೆಯಲಾಯಿತು. ಕೆಲವು ಅವಕಾಶಗಳು ಸಹ ಕೈತಪ್ಪಿದವು ಎಂದಿದ್ದಾರೆ ರವೀನಾ.

  ಮಹಿಳಾ ಪತ್ರಕರ್ತರು ತುಳಿಯಲು ಯತ್ನಿಸಿದರು

  ಮಹಿಳಾ ಪತ್ರಕರ್ತರು ತುಳಿಯಲು ಯತ್ನಿಸಿದರು

  ಕೆಲವು ಮಹಿಳಾ ಪತ್ರಕರ್ತರೇ ನನ್ನ ವಿರುದ್ಧ ಪಿತೂರಿ ಮಾಡಿದರು ಎಂದ ರವೀನಾ. ನಾನು ನನಗನ್ನಿಸಿದಂತೆ ಬಾಲಿವುಡ್‌ನಲ್ಲಿ ಬದುಕಿದೆ. ನನ್ನ ನಿಜವಂತಿಕೆಯಿಂದಾಗಿ ಕೆಲವು ಅವಕಾಶಗಳನ್ನು ನಾನು ಕಳೆದುಕೊಂಡೆ, ಪ್ರತಿಫಲವಾಗಿ ಕೆಲವು ಕಳಂಕಗಳನ್ನೂ ಸಹ ಹೊರಬೇಕಾಗಿ ಬಂತು ಎಂದಿದ್ದಾರೆ ರವೀನಾ.

  ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ

  ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ

  ಮೊಹ್ರಾ, ದೂಲೆ ರಾಜಾ, ಅಂದಾಜ್ ಅಪ್ನಾ ಅಪ್ನಾ, ಶೂಲ್, ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ರವೀನಾ ಕನ್ನಡದಲ್ಲಿ ಸಹ ಉಪೇಂದ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ರವೀನಾ.

  English summary
  Actress Raveena Tandon said i did not compromise with heroes to get chance in movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X