»   » ಬಾಲಿವುಡ್ ನಲ್ಲಿ ಇಲಿಯಾನ ಚುಂಬನದೋಕುಳಿ

ಬಾಲಿವುಡ್ ನಲ್ಲಿ ಇಲಿಯಾನ ಚುಂಬನದೋಕುಳಿ

Posted By:
Subscribe to Filmibeat Kannada

ನಟಿ ಇಲಿಯಾನಾ ಡಿಕ್ರೂಸ್ ವಿಶಾಲವಾದ ದಖನ್ ಪ್ರಸ್ತಭೂಮಿ ಬಿಟ್ಟು ಉತ್ತರದ ಕಡೆಗೆ ವಲಸೆ ಹೋಗಿದ್ದು ಗೊತ್ತೇ ಇದೆ. ಇದೀಗ ಅವರು ಬಾಲಿವುಡ್ ನಲ್ಲಿ ಬಣ್ಣ ಹಚ್ಚಿರುವ ತಾರೆ. ಇನ್ನೇನು ಹೋಳಿ ಹಬ್ಬ (ಮಾ.17) ಬರುತ್ತಿದೆ. ಅದಕ್ಕೂ ಮುನ್ನವೇ ಇಲಿಯಾನಾ ಚುಂಬನದೋಕುಳಿ ಆಡಿದ್ದಾರೆ.

ಇಲಿಯಾನಾ ಅಭಿನಯದ ರೊಮ್ಯಾಂಟಿಕ್ ಆಕ್ಷನ್ ಕಾಮಿಡಿ ಚಿತ್ರ 'ಮೇ ತೇರಾ ಹೀರೋ' ಏಪ್ರಿಲ್ 4ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಲಿಪ್ ಲಾಕ್ ಫೋಟೋಗಳು ಬಿಡುಗಡೆಯಾಗಿದ್ದು ಚಿತ್ರರಸಿಕರ ಹೃದಯಕ್ಕೆ ನಾಟುತ್ತಿವೆ. [ಡಿಂಗ್ ಡಾಂಗ್ ಡಾನ್ಸ್ ನೋ ಎಂದ ಇಲಿಯಾನಾ]

ಚುಂಬನ ದೃಶ್ಯಗಳಲ್ಲೂ ಇಲಿಯಾನಾ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಡೇವಿಡ್ ಧವನ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ವರುಣ್ ಧವನ್ ಹೀರೋ. ಚಿತ್ರದಲ್ಲಿ ನರ್ಗೀಸ್ ಫಕ್ರಿ ಸಹ ಅಭಿನಯಿಸಿದ್ದಾರೆ. ಶೋಭಾ ಕಪೂರ್, ಏಕ್ತಾ ಕಪೂರ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಸ್ಲೈಡ್ ನಲ್ಲಿ ಇಲಿಯಾನಾ ಚುಂಬನ ಸನ್ನಿವೇಶಗಳು...

ಲಿಪ್ ಲಾಕ್ ನಲ್ಲಿ ರೊಚ್ಚಿಗೆದ್ದ ನಟಿ ಇಲಿಯಾನಾ

ಇಲಿಯಾನಾ, ವರುಣ್ ಧವನ್ ಲಿಪ್ ಲಾಕ್ ಸನ್ನಿವೇಶಗಳು ಎಲ್ಲರ ಗಮನಸೆಳೆಯುತ್ತಿವೆ. ಅಂದಹಾಗೆ ಈ ಚಿತ್ರ ತೆಲುಗಿನ 'ಕಂದಿರೀಗ' ರೀಮೇಕ್. ಒಂದಷ್ಟು ಮಸಾಲೆಗಳನ್ನು ಬೆರೆಸಿ ಬಾಲಿವುಡ್ ನಲ್ಲಿ ತೆರೆಗೆ ತರುತ್ತಿದ್ದಾರೆ ಡೇವಿಡ್ ಧವನ್.

ಯುವ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ

ಮುಖ್ಯವಾಗಿ ಲಿಪ್ ಲಾಕ್ ಸನ್ನಿವೇಶಗಳಿದ್ದರೆ ಯುವ ಪ್ರೇಕ್ಷಕರನ್ನು ಸುಲಭವಾಗಿ ಚಿತ್ರಮಂದಿರಕ್ಕೆ ಸೆಳೆಬಹುದು ಎಂಬ ಲೆಕ್ಕಾಚಾರ ಈಗ ಚಿತ್ರೋದ್ಯಮದಲ್ಲಿ ಬಲವಾಗಿದೆ. ಅದು ತಕ್ಕಮಟ್ಟಿಗೆ ವರ್ಕ್ ಔಟ್ ಕೂಡ ಆಗುತ್ತಿದೆ.

ಕಾಮಿಡಿ, ರೊಮ್ಯಾನ್ಸ್, ಆಕ್ಷನ್ ಮಸಾಲೆ ಬೆರೆತ ಚಿತ್ರ

ಕಾಮಿಡಿ, ರೊಮ್ಯಾನ್ಸ್, ಆಕ್ಷನ್ ಮಸಾಲೆಗಳನ್ನು ಬೆರೆಸಿ ಪ್ರೇಕ್ಷಕರ ಮುಂದಿಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಚಿತ್ರ 'ಮೇ ತೇರಾ ಹೀರೋ'.

ಏಪ್ರಿಲ್ 4ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ

ಏಪ್ರಿಲ್ 4ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ ಚಿತ್ರ. ಈಗಾಗಲೆ ಚಿತ್ರದ ಹಾಡುಗಳು ಕೇಳುಗರ ಕಿವಿಯನ್ನು ಬೆಚ್ಚಗೆ ಮಾಡಿವೆ. ಹಾಗಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿಲ್ಲದಿದ್ದರೂ ಕುತೂಹಲವಂತೂ ಇದ್ದೇ ಇದೆ.

ಬೆಂಗಳೂರು, ಬ್ಯಾಂಕಾಕ್ ನಲ್ಲಿ ಚಿತ್ರೀಕರಣ

ಬೆಂಗಳೂರು, ಬ್ಯಾಂಕಾಕ್ ಹಾಗೂ ಲಂಡನ್ ನಲ್ಲಿ ಚಿತ್ರವನ್ನು ಶೂಟ್ ಮಾಡಲಾಗಿದೆ. ಅನುಪಮ್ ಖೇರ್ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Actress Ileana D'Cruz is much focused on Bollywood and eagerly waiting to score a hit film in Bollywood. Ileana’s forthcoming film “Main Tera Hero” is set to release on April 4th. Ileana also acted in a hot lip-lock scene with Varun Dhawan in the movie.
Please Wait while comments are loading...