»   » ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳು

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳು

Posted By:
Subscribe to Filmibeat Kannada

ಕಳೆದ ವರ್ಷದ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಸಖತ್ ರೋಮ್ಯಾಂಟಿಕ್ ಕಪಲ್.

ಹೇಳಿ ಕೇಳಿ ಇಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮುದ್ದಾದ ಈ ಜೋಡಿ ಸತಿ-ಪತಿಗಳಾದ್ಮೇಲಿಂದ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೋಮ್ಯಾಂಟಿಕ್ ಫೋಟೋಗಳನ್ನ ಈ ಕ್ಯೂಟ್ ಕಪಲ್ ಶೇರ್ ಮಾಡುತ್ತಿದ್ದಾರೆ.

ವಿರುಷ್ಕಾ ರೋಮ್ಯಾಂಟಿಕ್ ಫೋಟೋಗಳನ್ನ ನೋಡಿ ಎಷ್ಟೋ ಜನ, 'ವಾವ್.. ಗಂಡ-ಹೆಂಡತಿ ಅಂದ್ರೆ ಹೀಗಿರಬೇಕು' ಅಂತ ಹೇಳಿದ್ರೆ, ಮಡಿವಂತರು ಮಾತ್ರ ವೈಯುಕ್ತಿಕವಾಗಿ ಇರಬೇಕಿದ್ದ ಫೋಟೋಗಳನ್ನ ವಿರಾಟ್-ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದರು.

ಅದೇನೇ ಇರಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆದ 'ವಿರುಷ್ಕಾ' ದಂಪತಿಯ ನಾಲ್ಕು ರೋಮ್ಯಾಂಟಿಕ್ ಫೋಟೋಗಳು ಇಲ್ಲಿವೆ ನೋಡಿ...

ಲೇಟೆಸ್ಟ್ ಫೋಟೋ ಇದೇ.!

ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮಾ ದಂಪತಿಯ ಲೇಟೆಸ್ಟ್ ರೋಮ್ಯಾಂಟಿಕ್ ಫೋಟೋ ಇದೇ. ವಿರಾಟ್ ಕೆನ್ನೆಗೆ ಅನುಷ್ಕಾ ಸಿಹಿ ಮುತ್ತು ನೀಡುತ್ತಿರುವಾಗ ಕ್ಲಿಕ್ ಆದ ಫೋಟೋ ಇದು. ತಮ್ಮ ದಾಂಪತ್ಯದ ಸುಂದರ ಕ್ಷಣವನ್ನ ಅನುಷ್ಕಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋನ 25 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಿರಾಟ್-ಅನುಷ್ಕಾ ನೆಲೆಸಿರುವ ಮುಂಬೈ ಫ್ಲಾಟ್ ಬಾಡಿಗೆ ಅಬ್ಬಬ್ಬಾ ಅಷ್ಟೊಂದಾ!?

ದಂಪತಿಯ ಬಿಗಿದಪ್ಪುಗೆ

ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮಾ ಬಿಗಿದಪ್ಪಿರುವ ಫೋಟೋ ಇದು. 'ವಿರುಷ್ಕಾ' ದಂಪತಿ ಒಬ್ಬರನ್ನೊಬ್ಬರು ಇಷ್ಟೊಂದು ಪ್ರೀತಿಸುವುದನ್ನು ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ಫೋಟೋನ ಕಳೆದ ತಿಂಗಳು ವಿರಾಟ್ ಕೋಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಈ ಫೋಟೋಗೆ 35 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಹೊಸ ವರ್ಷಕ್ಕೆ ಶುಭಾಶಯಗಳು

ಹೊಸ ವರ್ಷದ ಶುಭ ಸಂದರ್ಭದಂದು ವಿರಾಟ್-ಅನುಷ್ಕಾ ಕ್ಲಿಕ್ ಮಾಡಿಕೊಂಡ ಸೆಲ್ಫಿ ಇದು. ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಶರ್ಮಾ ಶೇರ್ ಮಾಡಿದ್ದ ಈ ಫೋಟೋಗೆ 23 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಮದುವೆಯ ನಂತರ ಮೊದಲ ಸೆಲ್ಫಿ

ಕಳೆದ ವರ್ಷದ ಡಿಸೆಂಬರ್ ನಲ್ಲಿ ವಿರುಷ್ಕಾ ಮದುವೆ ಆದರು. ವಿವಾಹವಾದ ಬಳಿಕ ದಂಪತಿ ಕ್ಲಿಕ್ ಮಾಡಿಕೊಂಡ ಮೊದಲ ಸೆಲ್ಫಿ ಇದು. ಇದಕ್ಕೆ ಇನ್ಸ್ಟಾ ಗ್ರಾಮ್ ನಲ್ಲಿ 36 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

English summary
Take a look at Virat Kohli and Anushka Sharma's love struck romantic pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada