ಅಪ್ಪನ ಸಮಾಧಿ ಅಂದಗೊಳಿಸಿ ಚಿತ್ರ ಹಂಚಿಕೊಂಡ ಇರ್ಫಾನ್ ಖಾನ್ ಪುತ್ರ
ನಟ ಇರ್ಫಾನ್ ಖಾನ್ ಸಮಾಧಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದಷ್ಟೆ ಹರಿದಾಡಿತ್ತು. ಇರ್ಫಾನ್ ಸಮಾಧಿಯನ್ನು ಸರಿಯಾಗಿ ನೋಡಿಕೊಳ್ಳದೇ ಇರುವುದಕ್ಕೆ ಕುಟುಂಬ ಸದಸ್ಯರ ಮೇಲೆ ಆಕ್ರೋಶ ಹೊರಹಾಕಲಾಗಿತ್ತು.
ಆದರೆ ಈಗ ಇರ್ಫಾನ್ ಪುತ್ರ ಅಪ್ಪನ ಸಮಾಧಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಾಧಿಯು ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತಿದೆ. ಹಳೆಯ ಕೆಟ್ಟ ಸ್ಥಿತಿಯಿಂದ ಸುಧಾರಿತ ಸ್ಥಿತಿಗೆ ಬಂದಿದೆ ಇರ್ಫಾನ್ ಸಮಾಧಿ.
ಇರ್ಫಾನ್ ಖಾನ್ ಅನ್ನು ಮಣ್ಣು ಮಾಡಿದ ಜಾಗದಲ್ಲಿ ಸಮಾಧಿ ನಿರ್ಮಿಸಲಾಗಿರಲಿಲ್ಲ, ಮಣ್ಣು ಮಾಡಿದ ಜಾಗದ ಸುತ್ತೆಲ್ಲಾ ಕಳೆ ಬೆಳೆದಿತ್ತು. ಇರ್ಫಾನ್ ಖಾನ್ ಮಣ್ಣು ಮಾಡಿದ ಜಾಗದಲ್ಲಿ ಮಣ್ಣು ಕುಸಿದು ಕೆಟ್ಟದಾಗಿ ಕಾಣುತ್ತಿತ್ತು. ಈ ಬಗ್ಗೆ ಹಲವರು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದರು.

Recommended Video
ಇದನ್ನೆಲ್ಲಾ ಗಮನಕ್ಕೆ ತೆಗೆದುಕೊಂಡ ಇರ್ಫಾನ್ ಖಾನ್ ಪುತ್ರ ಬಾಬಿಲ್, ಅಪ್ಪನ ಮಣ್ಣು ಮಾಡಿದ ಜಾಗದಲ್ಲಿ ಬಿಳಿಯ ಮಾರ್ಬಲ್ ಕಲ್ಲಿನಿಂದ ಸಮಾಧಿ ನಿರ್ಮಿಸಿದ್ದಾರೆ. ಅದರ ಮೇಲೆ ಗುಲಾಬಿಗಳನ್ನು ಸುರಿದು ಅಲಂಕರಿಸಿ ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











