»   » ಶಾರುಖ್ 'ಜಬ್ ಹ್ಯಾರಿ ಮೆಟ್ ಸೆಜಲ್' ರಿಲೀಸ್ ಮೊದಲು ಭಾರತದಲ್ಲಿ ಅಲ್ಲ..

ಶಾರುಖ್ 'ಜಬ್ ಹ್ಯಾರಿ ಮೆಟ್ ಸೆಜಲ್' ರಿಲೀಸ್ ಮೊದಲು ಭಾರತದಲ್ಲಿ ಅಲ್ಲ..

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಕಾಂಬಿನೇಷನ್ ನ ಮೂರನೇ ಸಿನಿಮಾ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರ ಹಾಡುಗಳಿಂದ ಹೆಚ್ಚು ಕುತೂಹಲ ಮೂಡಿಸಿದೆ. ಈ ಚಿತ್ರದ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಪ್ರಪಂಚದಾದ್ಯಂತ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಬಿಡುಗಡೆ ವಿಷಯದಲ್ಲಿ ಈಗ ಭಾರತೀಯ ಶಾರುಖ್ ಖಾನ್ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೇಳಿಬಂದಿದೆ. ಭಾರತದಲ್ಲಿ ಕಿಂಗ್ ಖಾನ್ ಅಭಿಮಾನಿಗಳು ಮತ್ತು 'ಪಿಕೆ' ಚಿತ್ರ ಖ್ಯಾತಿಯ ಅನುಷ್ಕಾ ಶರ್ಮಾ ಅಭಿಮಾನಿಗಳು ಚಿತ್ರ ನೋಡಲು ನಾ ಮೊದಲು ತಾ ಮೊದಲು ಎಂದು ಟಿಕೆಟ್ ಬುಕ್ ಮಾಡಲು ಕಾತುರರಾಗಿರುವ ಈ ವೇಳೆಯಲ್ಲಿ ಚಿತ್ರ ಭಾರತಕ್ಕಿಂತ ಮೊದಲು ಅರಬ್ ರಾಷ್ಟ್ರಗಳು(ಯುಎಇ) ಮತ್ತು ಗಲ್ಫ್ ದೇಶಗಳಲ್ಲಿ ಬಿಡುಗಡೆ ಆಗಲಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

'Jab Harry Met Sejal' movie to release in UAE, Gulf countries before India

ಸಿನಿಮಾ ಯುಎಇ ಮತ್ತು ಗಲ್ಫ್ ನಾಡಲ್ಲಿ ಆಗಸ್ಟ್ 3 ರಂದು ಬಿಡುಗಡೆ ಆಗುವ ಬಗ್ಗೆ ಸ್ವತಃ ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ಅನಂತರ ಭಾರತದಲ್ಲಿ ಚಿತ್ರ ತೆರೆಕಾಣಲಿದೆ.

ಅಂದಹಾಗೆ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರವು ಭಾರತಕ್ಕಿಂತ ಮೊದಲು ಯುಎಇ'ನಲ್ಲಿ ಬಿಡುಗಡೆ ಆಗಲು ಅಲ್ಲಿಯೂ ಸಹ ಶಾರುಖ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇರುವುದೇ ಕಾರಣ ಎಂದು ತಿಳಿದಿದೆ. ಶಾರುಖ್ ಅಭಿನಯದ 'ರಯೀಸ್' ಚಿತ್ರವು ಈ ಹಿಂದೆ ಈಜಿಪ್ಟ್, ಜೋರ್ಡನ್ ಮತ್ತು ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಿತ್ತು.

'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರಕ್ಕೆ ಇಮ್ತಿಯಾಜ್ ಅಲಿ ಆಕ್ಷನ್ ಕಟ್ ಹೇಳಿದ್ದು, ಚಿತ್ರ ಭಾರತದಲ್ಲಿ ಆಗಸ್ಟ್ 4 ರಂದು ಬಿಡುಗಡೆ ಆಗಲಿದೆ.

English summary
Shah Rukh Khan starrer 'Jab Harry Met Sejal' to release in UAE, Gulf countries before India
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada