For Quick Alerts
  ALLOW NOTIFICATIONS  
  For Daily Alerts

  ಜಾನ್ವಿ ಕಪೂರ್ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುವುದು EMI ಕಟ್ಟೋಕಂತೆ!

  |

  ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಿನಿಮಾಗಳಿಗಿಂತ ಜಾಸ್ತಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಹಾಟ್ ಹಾಟ್ ಫೋಟೊಶೂಟ್‌ಗಳ ಮೂಲಕ ಪಡ್ಡೆ ಹುಡುಗರ ಹೃದಯ ಬೆಚ್ಚಗಾಗುವಂತೆ ಮಾಡುತ್ತಿರುತ್ತಾರೆ. ಸಿನಿಮಾಗಳಲ್ಲಿ ಅಷ್ಟೇನು ಬೋಲ್ಡ್ ಆಗಿ ನಟಿಸಿದ ಜಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಈ ಪಾಟಿ ಮಾದಕವಾಗಿ ಕಾಣಿಸೋದು ಯಾಕೆ ಎನ್ನುವ ಪ್ರಶ್ನೆಗೆ ಖುದ್ದು ಆಕೆಯೇ ಉತ್ತರ ಕೊಟ್ಟಿದ್ದಾರೆ.

  ಅಸಲಿಗೆ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾವನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲವಂತೆ. ಆದರೆ ಅಲ್ಲಿ ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡರೆ ಮತ್ತೊಂದಷ್ಟು ಬ್ರ್ಯಾಂಡ್ಸ್ ಸಿಗುತ್ತೆ. ಇನ್ನು ಕೆಲವರು ಫೋಟೊ ಲೈಕ್ ಮಾಡುತ್ತಾರೆ. ಇದರಿಂದ ಎಎಂಐ ಕಟ್ಟೋಕೆ ಸಹಾಯಕವಾಗುತ್ತದೆ ಎಂದಿದ್ದಾರೆ. ಸೆಲೆಬ್ರೆಟಿಗಳು ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಂದ ಲಕ್ಷ ಲಕ್ಷ ಎಣಿಸೋದು ಗೊತ್ತೇಯಿದೆ. ಹೆಚ್ಚು ಫಾಲೋವರ್ಸ್ ಹೊಂದಿರುವವರಿಗೆ ಹೆಚ್ಚು ಆದಾಯ ಕೂಡ ಬರುತ್ತದೆ. ಅದೇ ಕಾರಣಕ್ಕೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.

  ಹೊಸ ಐಶಾರಾಮಿ ಮನೆ ಖರೀದಿಸಿದ ಜಾನ್ಹವಿ ಕಪೂರ್: ಬೆಲೆ ಅಷ್ಟಿಷ್ಟಲ್ಲಹೊಸ ಐಶಾರಾಮಿ ಮನೆ ಖರೀದಿಸಿದ ಜಾನ್ಹವಿ ಕಪೂರ್: ಬೆಲೆ ಅಷ್ಟಿಷ್ಟಲ್ಲ

  ಜಾನ್ವಿ ಕಪೂರ್ ನಟನೆಯ 'ಮಿಲಿ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಸಿನಿಮಾ ಪ್ರಮೋಷನ್ ಭಾಗವಾಗಿ ಒಂದಷ್ಟು ಸಂದರ್ಶನಗಳಲ್ಲಿ ಜಾನ್ವಿ ಕಪೂರ್ ಭಾಗಿಯಾಗಿದ್ದಾರೆ. ಇದೇ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

  ಇನ್‌ಸ್ಟಾ ಪೋಸ್ಟ್‌ಗಳಿಂದ ಒಳ್ಳೆ ಆದಾಯ

  ಇನ್‌ಸ್ಟಾ ಪೋಸ್ಟ್‌ಗಳಿಂದ ಒಳ್ಳೆ ಆದಾಯ

  "ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿ ಗ್ಲಾಮರಸ್‌ ಆಗಿ ಕಂಡು ಎಲ್ಲರೂ ಆಕರ್ಷಿತರಾದರೆ ನನ್ನ ಖಾತೆಗೆ ಮತ್ತಷ್ಟು ಬ್ರ್ಯಾಂಡ್‌ಗಳು ಜಮಾವಣೆ ಆಗುತ್ತದೆ. ಆಗ ನನ್ನ ಇನ್‌ವೆಸ್ಟ್‌ಮೆಂಟ್‌ಗೆ ಇಎಂಐ ಕಟ್ಟಬಹುದು. ನಾನು ನಟಿಸುವ ಸಿನಿಮಾಗಳು ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್ ಎರಡೂ ಭಿನ್ನವಾಗಿರುತ್ತದೆ. ಸೋಷಿಯಲ್ ಮೀಡಿಯಾ ಇಮೇಜ್ ತನ್ನ ಆನ್‌ಸ್ಕ್ರೀನ್ನ ಕ್ಯಾರೆಕ್ಟರ್ ಜೊತೆ ಸಿಂಕ್ ಆಗುತ್ತದೆ" ಎಂದಿದ್ದಾರೆ. ಸಿನಿಮಾಗಳಿಗಿಂತ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಂದ ಒಳ್ಳೆ ಆದಾಯ ಬರುತ್ತದೆ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.

  ಈ ಸಿನಿಮಾ ಶೂಟಿಂಗ್ ಬಳಿಕ 'ಪೈನ್‌ಕಿಲ್ಲರ್' ಮಾತ್ರೆ ಸೇವಿಸುತ್ತಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್!ಈ ಸಿನಿಮಾ ಶೂಟಿಂಗ್ ಬಳಿಕ 'ಪೈನ್‌ಕಿಲ್ಲರ್' ಮಾತ್ರೆ ಸೇವಿಸುತ್ತಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್!

  20 ಮಿಲಿಯನ್ ಫಾಲೋವರ್ಸ್

  20 ಮಿಲಿಯನ್ ಫಾಲೋವರ್ಸ್

  ಜಾನ್ವಿ ಕಪೂರ್ ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ನೋಡುತ್ತಿದ್ದರೆ ಬೇಕಂತಲೇ ಎಕ್ಸ್‌ಪೋಸ್ ಮಾಡುತ್ತಿರುವುದು ಗೊತ್ತಾಗುತ್ತಿದೆ. ಸೀರೆ ಆಗಲಿ ಬಿಕಿನಿ ಆಗಲಿ ಸ್ಕಿನ್‌ ಶೋ ಮಾಡುವುದನ್ನು ಮರೆಯೋದಿಲ್ಲ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಆಕೆಯನ್ನಯ 20 ಮಿಲಿಯನ್‌ಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಎರಡು ದಿನಕ್ಕೆ ಒಮ್ಮೆ ಆದರೂ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡುತ್ತಿರುತ್ತಾರೆ. ಅದಕ್ಕೆ ಸಾಕಷ್ಟು ಲೈಕ್ಸ್ ಸಿಗುತ್ತದೆ. ಇದಕ್ಕೆಲ್ಲಾ ಕಾರಣ ಏನು ಎನ್ನುವುದನ್ನು ಈಗ ಆಕೆಯೇ ಹೇಳಿದ್ದಾರೆ.

  ಸುಳ್ಳು ಹೇಳಬೇಡ ಎಂದು ವ್ಯಂಗ್ಯ

  ಸುಳ್ಳು ಹೇಳಬೇಡ ಎಂದು ವ್ಯಂಗ್ಯ

  ಇನ್ನು ಜಾನ್ವಿ ಕಪೂರ್ ಹೇಳಿಕೆಗೆ ಕೆಲವರು ವ್ಯಂಗ್ಯವಾಡಿದ್ದಾರೆ. ಕೋಟ್ಯಾಧೀಶ್ವರನ ಮಗಳು ಇಎಂಐ ಯಾಕೆ ಕಟ್ಟಬೇಕು. ಇದೆಲ್ಲಾ ಸುಳ್ಳು. ಬೋನಿ ಕಪೂರ್ ಖ್ಯಾತ ಸಿನಿಮಾ ನಿರ್ಮಾಪಕರು. ದಶಕಗಳಿಂದ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗಲೂ ಅವರ ನಿರ್ಮಾಣದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ. ಬೋನಿ ಕಪೂರ್ ಮಗಳಾಗಿ ಹೀಗೆ ದೇಶ ಪ್ರದರ್ಶಿಸಿ ಹಣ ಮಾಡುವ ಅವಶ್ಯಕತೆ ಏನಿತ್ತು. ಅದು ಕೂಡ ಇಎಂಐ ಕಟ್ಟೋಕೆ ಎಂದು ಯಾಕೆ ಸುಳ್ಳು ಹೇಳುತ್ತೀತಾ ಎಂದು ಕೇಳುತ್ತಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಮಿಲಿ'

  ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಮಿಲಿ'

  ಮಧುಕುಟಿ ಕ್ಸೇವಿಯರ್ ನಿರ್ದೇಶನದ 'ಮಿಲಿ' ಚಿತ್ರದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆ. ಮಲಯಾಳಂನ 'ಹೆಲೆನ್' ಸಿನಿಮಾ ರೀಮೆಕ್ ಇದಾಗಿದ್ದು, ಮೂಲಕ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕರೇ ಹಿಂದಿ ಚಿತ್ರ ಕಟ್ಟಿಕೊಟ್ಟಿದ್ದಾರೆ. ಸನ್ನಿ ಕುಶಾಲ್, ಮನೋಜ್ ಪಾವ, ಸೀಮಾ ಪಾವ ಚಿತ್ರದ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಬಾಕ್ಸಾಫೀಸ್‌ನಲ್ಲಿ 'ಮಿಲಿ' ಸಿನಿಮಾ ಮುಗ್ಗರಿಸಿದೆ. ಬಾಲಿವುಡ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲ ಆಗ್ತಿದ್ದು, ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ.

  English summary
  Janhvi kapoor Intresting Comments on Her Instagram posts Revenue. Janhvi Kapoor enjoys a huge fan following of 20.4 million on Instagram. Know More.
  Wednesday, November 9, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X