For Quick Alerts
  ALLOW NOTIFICATIONS  
  For Daily Alerts

  ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

  By Rajendra
  |

  ಬಾಲಿವುಡ್ ತಾರೆ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತಮ್ಮ ಪುತ್ರಿಯದು ಆತ್ಮಹತ್ಯೆಯಲ್ಲ ಕೊಲೆ ಎಂದು ಜಿಯಾ ಅವರ ತಾಯಿ ರಬಿಯಾ ಅಮಿನ್ ಅವರು ಆರೋಪಿಸಿದ್ದು, ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

  ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈಗ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ಕಾರ್ಯದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಸೂರತ್ ಪಾಂಚೋಲಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಎಷ್ಟು ಸರಿ ಎಂದಿದ್ದಾರೆ.

  ನೇಣಿಗೆ ಮೊದಲೇ ಜಿಯಾ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ಜಿಯಾ ಅವರ ತಾಯಿಯ ಮತ್ತೊಂದು ಗಂಭೀರ ಆರೋಪ. ಅರ್ಜಿಯಲ್ಲಿ ಜಿಯಾ ಸಾವಿನ ಬಗ್ಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅವರ ಪ್ರಶ್ನೆಗಳು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದನ್ನು ಚುಚ್ಚಿಚುಚ್ಚಿ ಕೇಳಿವೆ. ಇಲ್ಲಿವೆ ನೋಡಿ ಹತ್ತು ಪ್ರಶ್ನೆಗಳು.

  ನೇಣು ಬಿಗಿದುಕೊಂಡಿದ್ದರೆ ಈ ರೀತಿ ಇರುತ್ತಿರಲಿಲ್ಲ

  ನೇಣು ಬಿಗಿದುಕೊಂಡಿದ್ದರೆ ಈ ರೀತಿ ಇರುತ್ತಿರಲಿಲ್ಲ

  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವವರ ಕಣ್ಣುಗುಡ್ಡೆ ಹಾಗೂ ನಾಲಿಗೆ ಹೊರಕ್ಕೆ ಚಾಚಿರುತ್ತದೆ. ಆದರೆ ಜಿಯಾ ಪ್ರಕರಣದಲ್ಲಿ ಈ ರೀತಿಯಾಗಿಲ್ಲ.

  ಕುತ್ತಿಗೆಗೆ ಆಗಿರುವ ಕಲೆಗಳು ತಾಳೆಯಾಗುತ್ತಿಲ್ಲ

  ಕುತ್ತಿಗೆಗೆ ಆಗಿರುವ ಕಲೆಗಳು ತಾಳೆಯಾಗುತ್ತಿಲ್ಲ

  ಫ್ಯಾನಿಗೆ ನೇಣು ಬಿಗಿದುಕೊಂಡಾಗ ಕುತ್ತಿಗೆಯಲ್ಲಿ ಆಗುವ ಕಲೆಗಳಿಗೂ ಜಿಯಾ ಕುತ್ತಿಗೆಗೆ ಆಗಿರುವ ಕಲೆಗಳಿಗೂ ತಾಳೆಯಾಗುತ್ತಿಲ್ಲ.

  ಕುತ್ತಿಗೆ ಮೇಲೆನ ಕಲೆಗಳು ಭಿನ್ನವಾಗಿವೆ

  ಕುತ್ತಿಗೆ ಮೇಲೆನ ಕಲೆಗಳು ಭಿನ್ನವಾಗಿವೆ

  ಜಿಯಾ ಕುತ್ತಿಗೆಯಲ್ಲಿರುವ ಕಲೆಗಳು ಆತ್ಮಹತ್ಯೆ ಮಾಡಿಕೊಂಡಿರುವಂತಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವವರಿಗೆ ಹೋಲಿಸಿದೆ ಇವು ಭಿನ್ನವಾಗಿವೆ.

  ಆಕೆಯನ್ನು ಯಾರೋ ಬಿಗಿಯಾಗಿ ಹಿಡಿದಿದ್ದರು

  ಆಕೆಯನ್ನು ಯಾರೋ ಬಿಗಿಯಾಗಿ ಹಿಡಿದಿದ್ದರು

  ಜಿಯಾಗೆ ಆಗಿರುವ ಗಾಯಗಳನ್ನು ಗಮನಿಸಿದರೆ ಆಕೆಯನ್ನು ಯಾರೋ ಬಿಗಿಯಾಗಿ ಹಿಡಿದುಕೊಂಡಿದ್ದರು ಎಂಬ ಅನುಮಾನ ಬರುತ್ತದೆ. ಆಕೆಯ ಬಲಗಡೆಯ ಗಲ್ಲಕ್ಕೆ ಹಾಗೂ ತೋಳುಗಳಿಗೆ ಆಗಿರುವ ಗಾಯಗಲೇ ಇದಕ್ಕೆ ಪುರಾವೆ.

  ರಕ್ತದ ಕಲೆಗಳು ಮ್ಯಾಚ್ ಆಗುತ್ತಿಲ್ಲ

  ರಕ್ತದ ಕಲೆಗಳು ಮ್ಯಾಚ್ ಆಗುತ್ತಿಲ್ಲ

  ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಪತ್ತೆಯಾಗಿರುವ ರಕ್ತದ ಕಲೆಗೂ ದೇಹ ಬಳಿ ಸಿಕ್ಕಿರುವ ರಕ್ತದ ಕಲೆಗಳಿಗೆ ಸಾಮ್ಯತೆ ಇಲ್ಲ.

  ದುಪ್ಪಟದಲ್ಲಿ ನೇಣು ಬಿಗಿದುಕೊಂಡಿದ್ದರೆ?

  ದುಪ್ಪಟದಲ್ಲಿ ನೇಣು ಬಿಗಿದುಕೊಂಡಿದ್ದರೆ?

  ದುಪ್ಪಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸ್ಥಿತಿಯಲ್ಲಿ ಜಿಯಾ ಇದ್ದರು. ಆದರೆ ಅಷ್ಟೊಂದು ಮೆತ್ತಗಿನ ವಸ್ತ್ರದಲ್ಲಿ ನೇಣು ಬಿಗಿದುಕೊಂಡರೆ ಆಗುವ ಕಲೆಗಳಿಗೂ ಜಿಯಾ ಕುತ್ತಿಗೆ ಮೇಲೆ ಆಗಿರುವ ಕಲೆಗಳಿಗೂ ತಾಳೆಯಾಗುತ್ತಿಲ್ಲ.

  ಜಿಯಾ ದೇಹ ತುಂಬಾ ಎತ್ತರದಲ್ಲಿತ್ತು

  ಜಿಯಾ ದೇಹ ತುಂಬಾ ಎತ್ತರದಲ್ಲಿತ್ತು

  ಆತ್ಮಹತ್ಯೆ ಮಾಡಿಕೊಂಡಾಗ ಜಿಯಾ ದೇಹ ನೆಲಮಟ್ಟದಿಂದ ತುಂಬಾ ಎತ್ತರದಲ್ಲಿತ್ತು. ಅಂದರೆ ಸ್ಟೂಲ್ ಬಳಸದೆ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರು. ಮನೆಯಲ್ಲಿ ಆ ರೀತಿಯ ಯಾವುದೇ ವಸ್ತುಗಳೂ ಇಲ್ಲ. ಅವರೇ ನೇಣು ಬಿಗಿದುಕೊಳ್ಳಲು ಸಾಧ್ಯವೇ ಇಲ್ಲ.

  ಆತ್ಮಹತ್ಯೆಗೂ ಮುನ್ನ ಯಾರಾದರೂ ಬಟ್ಟೆ ಬದಲಾಯಿಸುತ್ತಾರಾ?

  ಆತ್ಮಹತ್ಯೆಗೂ ಮುನ್ನ ಯಾರಾದರೂ ಬಟ್ಟೆ ಬದಲಾಯಿಸುತ್ತಾರಾ?

  ಆತ್ಮಹತ್ಯೆಗೂ ಕೆಲ ಕ್ಷಣಗಳ ಹಿಂದೆ ಜಿಯಾ ಫ್ಲ್ಯಾಟ್ ಗೆ ಬರುವಾಗ ಅವರು ಟ್ರ್ಯಾಕ್ ಸೂಟ್ ತೊಟ್ಟಿದ್ದರು. ಇದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಅವರ ದೇಹ ನೈಟ್ ಸೂಟ್ ನಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಯಾರಾದರೂ ಬಟ್ಟೆ ಬದಲಾಯಿಸಿಕೊಳ್ಳುತ್ತಾರಾ?

  ತನಿಖೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ

  ತನಿಖೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ

  ತನಿಖಾಧಿಕಾರಿಗಳಿಗೆ ಇಷ್ಟೆಲ್ಲಾ ಮಾಹಿತಿ ಸಿಕ್ಕಿದ್ದರೂ ಅವರು ಈ ಬಗ್ಗೆ ಗಮನಹರಿಸುತ್ತಿಲ್ಲ ಏಕೆ ?

  ಬೆಡ್ ರೂಂ ಕಿಟಕಿ ಬಳಸಿ ಹೊರಹೋಗುವ ಸಾಧ್ಯತೆಗಳೂ ಇವೆ

  ಬೆಡ್ ರೂಂ ಕಿಟಕಿ ಬಳಸಿ ಹೊರಹೋಗುವ ಸಾಧ್ಯತೆಗಳೂ ಇವೆ

  ಬೆಡ್ ರೂಂ ಕಿಟಕಿ ಬಳಸಿ ಹೊರಹೋಗುವ ಸಾಧ್ಯತೆಗಳೂ ಇವೆ. ಯಾಕೆಂದರೆ ಫ್ಲ್ಯಾಟ್ ಮೊದಲ ಅಂತಸ್ತಿನಲ್ಲಿದ್ದು ಸುಲಭವಾಗಿ ಅಲ್ಲಿಂದ ಹೊರಹೋಗಬಹುದು.

  English summary
  Bollywood actress Jiah Khan 's suicide case has now taken a shocking twist, after mother Rabia Amin has reportedly petitioned the Bombay High Court alleging that her daughter may have been murdered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X