For Quick Alerts
  ALLOW NOTIFICATIONS  
  For Daily Alerts

  Juhi Chawla Birthday: ಜುಹಿ ಚಾವ್ಲಾ ಒಟ್ಟು ಆಸ್ತಿ ಮೌಲ್ಯ ಎಷ್ಟು? ಐಷಾರಾಮಿ ಕಾರುಗಳು, ಬಂಗಲೆ ಏನು ಆ ವೈಭೋಗ!

  |

  ನಿಂಬೆ ಹಣ್ಣಿನಂತ ಹುಡುಗಿ ಜೂಹಿ ಚಾವ್ಲಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರಿಂದ ಬಾಲಿವುಡ್ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 'ಪ್ರೇಮಲೋಕ' ಚಿತ್ರದಿಂದ ಕನ್ನಡ ಸಿನಿರಸಿಕರಿಗೂ ಜೂಹಿ ಪರಿಚಿತರಾಗಿದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚೆಲುವೆ ಉದ್ಯಮಿ ಜೈ ಮೆಹ್ತಾ ಕೈ ಹಿಡಿದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

  1986ರಲ್ಲಿ 'ಸುಲ್ತಾನತ್' ಸಿನಿಮಾ ಮೂಲಕ ಜೂಹಿ ಚಿತ್ರರಂಗ ಪ್ರವೇಶಿಸಿದ್ದರು. ಆದರೆ ಆ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. ಅದೇ ಸಮಯದಲ್ಲಿ 'ಪ್ರೇಮಲೋಕ' ಚಿತ್ರದ ನಾಯಕಿ ಪಾತ್ರಕ್ಕಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕಿಯ ಹುಡುಕಾಟದಲ್ಲಿದ್ದರು. ಆಗ ಅವರ ಕಣ್ಣಿಗೆ ಬಿದ್ದ ಚೆಲುವೆ ಈಕೆ. 1987ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಮುಂದೆ 'ಕಿಂದರ ಜೋಗಿ' ಹಾಗೂ 'ಶಾಂತಿ ಕ್ರಾಂತಿ' ಸಿನಿಮಾಗಳಲ್ಲೂ ನಟಿಸಿ ಗೆದ್ದರು. ಸ್ಯಾಂಡಲ್‌ವುಡ್‌ನಲ್ಲಿ ಸಕ್ಸಸ್ ಕಂಡ ಪಂಜಾಬಿ ಬೆಡಗಿ ಮುಂದೆ ಬಿಟೌನ್‌ ಅಂಗಳದಲ್ಲೂ ಕಮಾಲ್ ಮಾಡಿದರು. ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ 90ರ ದಶಕದ ಟಾಪ್ ಹೀರೊಯಿನ್ ಎನಿಸಿಕೊಂಡರು. ಇವತ್ತಿಗೂ ಬಾಲಿವುಡ್‌ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ಚೆಲುವೆ ಆಗೊಮ್ಮೆ ಈಗೊಮ್ಮೆ ಕ್ಯಾಮರಾ ಮುಂದು ಬರ್ತಿರ್ತಾರೆ.

  ಬಾಲಿವುಡ್‌ನಲ್ಲಿ ಪುರುಷರೇ ಪ್ರಾಬಲ್ಯ ಸಾಧಿಸುತ್ತಿದ್ದರು: 90ರ ದಶಕ ನೆನೆದ ಜೂಹಿ ಚಾವ್ಲಾಬಾಲಿವುಡ್‌ನಲ್ಲಿ ಪುರುಷರೇ ಪ್ರಾಬಲ್ಯ ಸಾಧಿಸುತ್ತಿದ್ದರು: 90ರ ದಶಕ ನೆನೆದ ಜೂಹಿ ಚಾವ್ಲಾ

  ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜೂಹಿ ಚಾವ್ಲಾ ಒಳ್ಳೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಆಕೆಯ ಆಸ್ತಿ ಮೌಲ್ಯ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ಜೈ ಮೆಹ್ತಾ ಕೈ ಹಿಡಿದ ಮೇಲೆ ಅದು ಮತ್ತಷ್ಟು ಹೆಚ್ಚಾಗಿತ್ತು.

  ಜೂಹಿ ಚಾವ್ಲಾ ಆಸ್ತಿ ಮೌಲ್ಯ 45 ಕೋಟಿ

  ಜೂಹಿ ಚಾವ್ಲಾ ಆಸ್ತಿ ಮೌಲ್ಯ 45 ಕೋಟಿ

  1967ರಲ್ಲಿ ಹರಿಯಾಣದ ಅಂಬಲದಲ್ಲಿ ಹುಟ್ಟಿ ಬೆಳೆದ ಜೂಹಿ ಓದಿದ್ದು ಮುಂಬೈನಲ್ಲಿ. ತಂದೆ ಆದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. 1984ರಲ್ಲಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿದ ಚೆಲುವೆ ಚಿತ್ರರಂಗಕ್ಕೆ ಬರುವುದು ಕಷ್ಟ ಆಗಲಿಲ್ಲ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಬಳಿ 40ರಿಂದ 50 ಕೋಟಿ ಸಂಪತ್ತು ಇದೆ ಎನ್ನಲಾಗುತ್ತಿದೆ. ಕನ್ನಡದಲ್ಲಿ 'ಪ್ರೇಮಲೋಕ' ಸಕ್ಸಸ್ ಆಗುತ್ತಿದ್ದಂತೆ ಅತ್ತ ಬಾಲಿವುಡ್‌ನಲ್ಲಿ 'ಕಯಾಮತ್‌ ಸೇ ಕಯಾಮತ್ ತಕ್' ಸಿನಿಮಾ ಕೂಡ ಗೆದ್ದಿತ್ತು. ಅಲ್ಲಿಂದ ಮುಂದೆ ಆಕೆ ತಿರುಗಿ ನೋಡಲೇಯಿಲ್ಲ.

  ಐಷಾರಾಮಿ ಬಂಗಲೆ, ಕಾರುಗಳು

  ಐಷಾರಾಮಿ ಬಂಗಲೆ, ಕಾರುಗಳು

  ಜೂಹಿ ಚಾವ್ಲಾ ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ ಕೆಲ ವರ್ಷಗಳ ಕಾಲ ಕೆಕೆಆರ್ ಕ್ರಿಕೆಟ್ ತಂಡದ ಮಾಲೀಕರು ಆಗಿದ್ದರು. ಶಾರೂಕ್ ಖಾನ್ ಹಾಗೂ ಜೂಹಿ ಜಂಟಿಯಾಗಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಸಿನಿಮಾಗಳ ಜೊತೆಗೆ ಜಾಹೀರಾತು, ವ್ಯಾಪಾರ ವ್ಯವಹಾರದಿಂದಲೂ ಭರ್ಜರಿ ವರಮಾನ ಸಂಪಾದಿಸುತ್ತಿದ್ದಾರೆ. ನಿಂಬೆ ಹಣ್ಣಿನಂತ ಹುಡುಗಿ ಬಳಿ ಜಾಗ್ವಾರ್ ಎಕ್ಸ್‌ಎಲ್‌ಜೆ(1.11 ಕೋಟಿ ರೂ.), ಆಡಿ ಕ್ಯೂ(77 ಲಕ್ಷ) ಸೇರಿದಂತೆ ಹಲವು ಕಾರುಗಳಿವೆ. ಪತಿ ಜೈ ಮೆಹ್ತಾ 250 ಕೋಟಿ ರೂ. ಒಡೆಯ. ಹಾಗಾಗಿ ದಂಪತಿಯ ಅಂದಾಜು ಆಸ್ತಿ ಮೌಲ್ಯ 300 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ.

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ

  'ಧರ್', 'ಹಮ್ ಹೈನ್ ರಹಿ ಪ್ಯಾರ್ ಕೆ', 'ದೀವಾನ ಮಸ್ತಾನ', 'ಇಷ್ಕ್', 'ಗುಲಾಬ್ ಗ್ಯಾಂಗ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಭೂತ್‌ನಾತ್' ಚಿತ್ರದಲ್ಲಿ ಆಕೆಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ', 'ಅಶೋಕ', 'ಚಲ್ತೆ ಚಲ್ತೆ' ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇನ್ನು ಕಿರುತೆರೆಯ ಕಾರ್ಯಕ್ರಮಗಳಲ್ಲೂ ಜೂಹಿ ಮಿಂಚಿದ್ದಾರೆ.

  ಜೂಹಿ ಬಗ್ಗೆ ಸ್ವಾರಸ್ಯಕರ ಸಂಗತಿಗಳು

  ಜೂಹಿ ಬಗ್ಗೆ ಸ್ವಾರಸ್ಯಕರ ಸಂಗತಿಗಳು

  ಚಿತ್ರರಂಗದಲ್ಲಿ ಯಾರೋ ಮಾಡಬೇಕಿದ್ದ ಪಾತ್ರ ಮತ್ಯಾರ ಪಾಲು ಆಗುವುದು ಹೊಸದೇನು ಅಲ್ಲ. ಜೂಹಿ ಚಾವ್ಲಾ ಕೂಡ ಸಾಕ್ಷಷ್ಟು ಒಳ್ಳೆ ಅವಕಾಶಗಳನ್ನು ಕಳೆದುಕೊಂಡಿದ್ದರು. 'ಕಯಾಮತ್‌ ಸೇ ಕಯಾಮತ್ ತಕ್' ಚಿತ್ರಕ್ಕೆ ಆಯ್ಕೆಯಾದ ಸಮಯದಲ್ಲೇ ಕಿರುತೆರೆಯ 'ಮಹಾಭಾರತ್' ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು.ಆದರೆ ಆಕೆ ಸಿನಿಮಾ ಆಯ್ಕೆ ಮಾಡಿಕೊಂಡಿದ್ದರು. 'ರಾಜಾ ಹಿಂದೂಸ್ತಾನಿ' ಚಿತ್ರದಲ್ಲೂ ಈಕೆ ನಟಿಸಬೇಕಿತ್ತು. ಆದರೆ ಕರೀಷ್ಮಾ ಕಪೂರ್ ನಟಿಸುವಂತಾಯಿತು. ಜಾಜೀವ್ ಕಪೂರ್ ಜೊತೆ ನಟಿಸಿದ 'ಮೊಹಬತ್ ಮೊಹಬತ್' ಸಿನಿಮಾ ಬಿಡುಗಡೆ ಆಗಲೇಯಿಲ್ಲ.

  English summary
  Juhi Chawla Birthday Special her Net Worth Luxury cars properties assets. Juhi Chawla primarily works in bollywood and sandalwood Movies. Juhi She married businessman Jay Mehta in 1995. know more.
  Sunday, November 13, 2022, 10:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X