»   » ಕಾಜೋಲ್-ಶಾರುಖ್ ಜೋಡಿ ಮತ್ತೆ ಬೆಳ್ಳಿಪರದೆಗೆ?

ಕಾಜೋಲ್-ಶಾರುಖ್ ಜೋಡಿ ಮತ್ತೆ ಬೆಳ್ಳಿಪರದೆಗೆ?

Posted By:
Subscribe to Filmibeat Kannada

ಬೆಳ್ಳಿಪರದೆ ಮೇಲೆ ಕಾಜೋಲ್ ಮಿಂಚಿ ಹತ್ತತ್ರ ನಾಲ್ಕು ವರ್ಷಗಳು ಉರುಳಿವೆ. ಸಿನಿಮಾಗಿಂತ ಮಕ್ಕಳೇ ಮುಖ್ಯ ಅಂತ ಹೇಳಿಕೆ ಕೊಟ್ಟಿದ್ದ ಕಾಜೋಲ್, ಬಂದ ಅದೆಷ್ಟೋ ಆಫರ್ ಗಳನ್ನ ಸೈಡಿಗೆ ತಳ್ಳಿಬಿಟ್ಟಿದ್ದರು.

ಆದ್ರೆ, ಮೊನ್ನೆಮೊನ್ನೆಯಷ್ಟೆ ಸುದ್ದಿಯಾಗಿದ್ದ ಹಾಗೆ, ಕಾಜೋಲ್ ಮಾಲೆಯಾಳಂನ ಸೂಪರ್ ಹಿಟ್ 'ಹೌ ಓಲ್ಡ್ ಆರ್ ಯು' ಚಿತ್ರದ ರೀಮೇಕ್ ಮೂಲಕ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಬೇಕಿತ್ತು. ಆದ್ರೆ, ಎಲ್ಲವೂ ಸರಿಹೋಗದ ಕಾರಣ ಕಾಜೋಲ್, ಚಿತ್ರಕ್ಕೆ ಬಿಲ್ಕುಲ್ 'ನೋ' ಅಂದುಬಿಟ್ಟಿದ್ದಾರೆ.

Kajol to make comeback with Shah Rukh Khan

ಹಾಗಾದ್ರೆ, ಕಾಜೋಲ್ ಮತ್ತೆ ಬಣ್ಣ ಹಚ್ಚಲ್ವಾ? ಈ ಪ್ರಶ್ನೆಗೆ ಕಾಜೋಲ್ ರಿಂದ ಉತ್ತರ ಕೊಡಿಸುವುದಕ್ಕೆ ನಿರ್ದೇಶಕ ರೋಹಿತ್ ಶೆಟ್ಟಿ ಒದ್ದಾಡುತ್ತಿದ್ದಾರೆ. 'ಚೆನ್ನೈ ಎಕ್ಸ್ ಪ್ರೆಸ್' ಖ್ಯಾತಿಯ ರೋಹಿತ್ ಶೆಟ್ಟಿ, ಕಿಂಗ್ ಖಾನ್ ಶಾರುಖ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ನೀವು ಕೇಳಿರಬಹುದು.

ಆ ಚಿತ್ರಕ್ಕೆ ಶಾರುಖ್ ಗೆ ಹೀರೋಯಿನ್ ಆಗಿ ಕಾಜೋಲ್ ಇದ್ದರೆ ಚೆನ್ನ ಅಂತ ಕಾಜೋಲ್ ಬೆನ್ನು ಬಿದ್ದಿದ್ದಾರಂತೆ ರೋಹಿತ್ ಶೆಟ್ಟಿ. ಹಾಗೆ ನೋಡಿದರೆ, ಅಜಯ್ ದೇವ್ಗನ್ ಮತ್ತು ಕಾಜೋಲ್ ಕುಟುಂಬಕ್ಕೆ ರೋಹಿತ್ ಶೆಟ್ಟಿ ಅತ್ಯಾಪ್ತ. [ಶಾರುಖ್ -ಕಾಜೋಲ್ ಜೋಡಿಗೆ 19 ವರ್ಷ]

Kajol to make comeback with Shah Rukh Khan

ಅಜಯ್ ದೇವ್ಗನ್ ಜೊತೆ ರೋಹಿತ್ ಶೆಟ್ಟಿ ಕಳೆದ ವರ್ಷ 'ಸಿಂಗಂ ರಿಟರ್ನ್ಸ್' ಸಿನಿಮಾ ಮಾಡಿದ್ದರು. ಅಂದು ಕಾಜೋಲ್ ಗೆ ಆಕ್ಷನ್ ಕಟ್ ಹೇಳ್ಬೇಕು ಅಂತ ಪ್ಲಾನ್ ಮಾಡಿದ್ದ ರೋಹಿತ್, ಇಂದು ಶಾರುಖ್ ಜೊತೆ ಕಾಜೋಲ್ ರನ್ನ ಮತ್ತೆ ತೆರೆಮೇಲೆ ಒಂದಾಗಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.

ರೋಹಿತ್ ಶೆಟ್ಟಿ ಆಗಲೇ ಕಾಜೋಲ್ ಗೆ ಕಥೆ ಹೇಳಿದ್ದಾಗಿದೆ. ಕಥೆ ಇಷ್ಟವಾಗಿದ್ದರೂ 'ನೋಡೋಣ' ಅಂದಿದ್ದಾರಂತೆ ಕಾಜೋಲ್. ಒಂದ್ವೇಳೆ ಕಾಜೋಲ್ ಬಣ್ಣ ಹಚ್ಚಿದ್ದೇ ಆದರೆ, 'ದಿಲ್ವಾಲೇ ದಿಲ್ಹನಿಯಾ ಲೇ ಜಾಯೇಂಗೆ' ಜೋಡಿ ಮತ್ತೆ ತೆರೆಮೇಲೆ ಕಮಾಲ್ ಮಾಡುವುದು ಪಕ್ಕಾ. ['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

Kajol to make comeback with Shah Rukh Khan

2010 ರಲ್ಲಿ ಇದೇ ಶಾರುಖ್ ಜೊತೆ ಕಾಜೋಲ್ 'ಮೈ ನೇಮ್ ಈಸ್ ಖಾನ್' ಚಿತ್ರದಲ್ಲಿ ನಟಿಸಿದ್ದರು. ಈ ಜನಪ್ರಿಯ ಜೋಡಿ ಮತ್ತೊಮ್ಮೆ ಒಂದಾಗುವುದು ರೋಹಿತ್ ಶೆಟ್ಟಿ ಆಸೆಯಾಗಿದೆ. ಅದಕ್ಕೆ ಕಾಜೋಲ್ ತಥಾಸ್ತು ಅನ್ನಬೇಕಷ್ಟೆ. (ಏಜೆನ್ಸೀಸ್)

English summary
Rohit Shetty has teamed up with Shah Rukh Khan for his next directorial venture. For this film, Rohit Shetty wants to cast Kajol opposite SRK. Will Kajol accept the offer is the question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada