»   » ವಿಶ್ವರೂಪಂ 2: ಡಿಟಿಎಚ್ ರಿಲೀಸ್ ಗೆ ಕಮಲ್ ಸಿದ್ಧ

ವಿಶ್ವರೂಪಂ 2: ಡಿಟಿಎಚ್ ರಿಲೀಸ್ ಗೆ ಕಮಲ್ ಸಿದ್ಧ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರಿ ನಿರೀಕ್ಷೆ ಮೂಡಿಸಿರುವ ಕಮಲ್ ಹಾಸನ್ ಅವರ 'ವಿಶ್ವರೂಪಂ 2' ಚಿತ್ರದ ಫಸ್ಟ್ ಲುಕ್, ಟ್ರೇಲರ್ ನೋಡಿ ಕಮಲ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಎರಡನೆ ಭಾಗ ರಿಲೀಸ್ ಮಾಡಲು ಸಿದ್ಧವಾಗಿರುವ ಕಮಲ್ ಗೆ ಮತ್ತೆ ಹಳೆ ಸಮಸ್ಯೆ ಕಾಡುತ್ತಿದೆ.

'ವಿಶ್ವರೂಪಂ 2' ಚಿತ್ರವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುತ್ತಾರೋ ಅಥವಾ ನೇರವಾಗಿ ಥಿಯೇಟರ್ ನಲ್ಲೇ ರಿಲೀಸ್ ಮಾಡುತ್ತಾರೋ ಎಂಬ ಕುತೂಹಲದ ಪ್ರಶ್ನೆಗೆ ಬೆಂಗಳೂರಿನಲ್ಲಿ ಕಮಲ್ ಉತ್ತರಿಸಿದ್ದಾರೆ.

ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ 2' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಬಹುಭಾಷಾ ಚಿತ್ರ ಡಿಟಿಎಚ್ ಮೂಲಕ ಮನೆ ಮನೆಗೆ ತಲುಪಿಸಲು ನಾನು ಸಿದ್ಧ ಎಂದು ಕಮಲ್ ಹೇಳಿದ್ದಾರೆ.

ಬೆಂಗಳೂರಿನ ಫೆಡರೇಷನ್ ಆಫ್ ಇಂಡಿಯಾ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(FICCI) ಆಯೋಜನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವ ಕಮಲ್ ಹಾಸನ್ ಅವರು ಡಿಟಿಎಚ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಚಿತ್ರ ಮುಸ್ಲಿಂರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಲಾಗಿದೆ, ಡಿಟಿಎಚ್ ರಿಲೀಸ್ ನಿಂದ ಚಿತ್ರಮಂದಿರಗಳಿಗೆ ಹೊಡೆತ ಬೀಳಲಿದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ನಿಷೇಧ ಹೇರಿತ್ತು.. ಆದರೆ, ಕಮಲ್ ಈಗ ಮತ್ತೊಮ್ಮೆ ಹಳೆ ಸಮಸ್ಯೆಗೆ ಪರಿಹಾರ ಕಂಡುಕೊಂಡಂತೆ ಮಾತನ್ನಾಡಿದ್ದಾರೆ.. ಕಮಲ್ ಹೇಳಿದ್ದೇನು ಮುಂದೆ ಓದಿ....

ಡಿಟಿಎಚ್ ರಿಲೀಸ್ ಗ್ಯಾರಂಟಿ

ವಿಶ್ವರೂಪಂ 2 ಚಿತ್ರವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುವುದು ಖಚಿತ. ಇಲ್ಲಿನ ಜನರಿಗೆ ಹಿಡಿಸದಿದ್ದರೆ ಜಾಗತಿಕವಾಗಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯೂ ಇದೆ. ಮನೆಯಲ್ಲಿ ಅಡುಗೆಮನೆ ಇದ್ದರೂ ರೆಸ್ಟೋರೆಂಟ್ ಗೆ ಹೋಗುತ್ತಾರೆ ಅಲ್ಲವೇ ಎಂದು ಕಮಲ್ ಹೇಳಿದ್ದಾರೆ.

ಮನೆಯಲ್ಲೇ ಪ್ರಿಮಿಯರ್ ಶೋ

ಮನೆಯಲ್ಲಿ ಕುಳಿತು ಟಿವಿಯಲ್ಲಿ ಪ್ರಿಮಿಯರ್ ಶೋ ನೋಡುವ ಅವಕಾಶ ಇದರಿಂದ ಲಭ್ಯವಾಗಲಿದೆ. ಇದು ಬದಲಾವಣೆ ಕಾಲ. ಮನೆಯಲ್ಲಿ ಚಿತ್ರ ನೋಡಿದ ಮೇಲೂ ದೊಡ್ಡ ಪರದೆಯಲ್ಲಿ ವೀಕ್ಷಿಸುತ್ತಾರೆ. ಪೈರಸಿ ವಿಡಿಯೋ, ಕಳಪೆ ಗುಣಮಟ್ಟದ ಚಿತ್ರ ನೋಡುವುದನ್ನು ತಡೆಗಟ್ಟಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತಾ ಕಮಲ್ ಹೇಳಿದ್ದಾರೆ.

ಡಿಟಿಎಚ್ ಸಮಸ್ಯೆ ಏನು?

ಡಿಟಿಎಚ್ ರಿಲೀಸ್ ಮೇಲೆ ಸರಿಯಾದ ನಿಯಂತ್ರಣ ಸಿಗುವುದಿಲ್ಲ ಎಂಬ ಕೂಗಿದೆ. ವೈಯಕ್ತಿಕವಾಗಿ ಒಬ್ಬರ ನಿಯಂತ್ರಣದಲ್ಲಿ ಡಿಟಿಎಚ್ ಬರಲಿದೆ ಎಂಬ ಮಾತನ್ನು ಕಮಲ್ ಒಪ್ಪುವುದಿಲ್ಲ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಆರಂಭದಲ್ಲಿ ಕಷ್ಟ ಎಂದಷ್ಟೇ ಹೇಳಿದ್ದಾರೆ.

ಚಿತ್ರಮಂದಿರಗಳ ವಿರೋಧ

ಭಾರತದಲ್ಲಿ ಸಾಧ್ಯವಾಗದಿದ್ದರೆ ಅಮೆರಿಕದಲ್ಲಿ ಡಿಟಿಎಚ್ ಮೂಲಕ ಪ್ರಿಮಿಯರ್ ಶೋ ಮಾಡುತ್ತೇನೆ ಎಂದು ಕಮಲ್ ಸಜ್ಜಾಗಿದ್ದಾರೆ. ಡಿಟಿಎಚ್ ಮೂಲಕ ಮನೆಗಳಲ್ಲೇ ಎಲ್ಲರೂ ಪ್ರಿಮಿಯರ್ ಶೋ ನೋಡಿದರೆ ಚಿತ್ರಮಂದಿರಗಳಿರುವುದು ಏತಕ್ಕೆ ಎಂದು ಚಿತ್ರಮಂದಿರ ಮಾಲೀಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಶ್ವರೂಪಂ 2 ಚಿತ್ರ

ವಿಶ್ವರೂಪಂ 2 ಚಿತ್ರದ ಬಜೆಟ್ ರು.95 ಕೋಟಿ ಎನ್ನುತ್ತವೆ ಮೂಲಗಳು. ಈಗಾಗಲೆ ಥಾಯ್ಲೆಂಡ್, ಬ್ಯಾಂಕಾಕ್ ವಾಯುನೆಲೆಯಲ್ಲೂ ಚಿತ್ರೀಕರಿಸಲಾಗಿದೆ. ಉಗ್ರವಾದ, ಮಾನವೀಯ ಮೌಲ್ಯಗಳು ಈ ಬಾರಿಯ ಕಥಾವಸ್ತು. ಬಹುಶಃ 2013ರ ಕೊನೆಗೆ ಚಿತ್ರದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಚಿತ್ರವನ್ನು ಕೇವಲ 2 ಗಂಟೆಗೆ ಸೀಮಿತ ಮಾಡುತ್ತಿದ್ದಾರೆ ಕಮಲ್.

ತಾರಾಗಣ

'ವಿಶ್ವರೂಪಂ' ಚಿತ್ರದಲ್ಲಿ ಅಭಿನಯಿಸಿದ್ದ ಪೂಜಾ ಕುಮಾರ್, ಆಂಡ್ರಿಯಾ ಹಾಗೂ ರಾಹುಲ್ ಬೋಸ್ ಭಾಗ 2ರಲ್ಲೂ ಇರುತ್ತಾರೆ. ಚಿತ್ರದಲ್ಲಿ ಹೊಸ ಪಾತ್ರವೊಂದು ಇರುತ್ತದೆ ಎನ್ನಲಾಗಿದೆ

English summary
Kamal Hassan seems to be walking on a tightrope again. His plans of releasing his superhit Vishwroopam on DTH was severely criticised earlier this year and he was not allowed to go ahead with his idea. Now, the actor has opened on it again as he has said that the sequel to Vishwaroopam would be released on DTH.
Please Wait while comments are loading...