For Quick Alerts
  ALLOW NOTIFICATIONS  
  For Daily Alerts

  ನಟ ಮಹೇಶ್‌ ಬಾಬು ಹೇಳಿಕೆ ಸರಿಯಾಗಿದೆ: ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ!

  |

  ತೆಲುಗಿನ ಸೂಪರ್ ಸ್ಟಾರ್ ಮಹೇಶ್‌ ಬಾಬು ಇತ್ತೀಚೀಗೆ ಬಾಲಿವುಡ್‌ಗೆ ನನ್ನನ್ನು ಭರಿಸುವ ಅರ್ಹತೆಯಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಗುರಿಯಾಗಿದ್ದು, ಈ ಹೇಳಿಕೆ ವಿರುದ್ಧ ಪರ ವಿರೋಧದ ಚರ್ಚೆಗಳು ಶುರುವಾಗಿದೆ.

  ಕಳೆದ ಎರಡು ದಿನಗಳಿಂದ ಮಹೇಶ್‌ ಬಾಬು ಹೇಳಿಕೆ ವಿರುದ್ದ ಹಲವು ಬಾಲಿವುಡ್‌ ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಮಹೇಶ್‌ ಬಾಬು ಹೇಳಿದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ಕೆಲವರು ಬಾಲಿವುಡ್ ಯಾವತ್ತಿದ್ದರೂ ಬಾಲಿವುಡ್‌ ಎಂದು ಹೇಳಿಕೆ ನೀಡುವ ಮೂಲಕ ಮಹೇಶ್‌ ಬಾಬುಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ.

  ಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾ

  ಇತ್ತೀಚಿಗೆ ಬಾಲಿವುಡ್‌ ಹಾಗೂ ಧಕ್ಷಿಣ ಭಾರತದ ಚಿತ್ರರಂಗದ ನಡುವೆ ಪೈಪೋಟಿ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ನಲ್ಲಿ ತಮ್ಮ ಚಾಪನ್ನು ಮೂಡಿಸಿದ್ದು, ಬಾಲಿವುಡ್ ಸ್ಟಾರ್‌ ಸಿನಿಮಾಗಳನ್ನೇ ಹಿಂದಿಕ್ಕಿ, ಬಾಕ್ಸಾಫಿಸ್ ಕಲೆಕ್ಷನ್ ಮಾಡಿದೆ. ಹೀಗಾಗಿ ಈ ಪೈಪೋಟಿ ನಡುವೆಯೇ ಮಹೇಶ್ ಬಾಬು ನೀಡಿದ ಹೇಳಿಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಇದೇ ವಿವಾದದ ಬಗ್ಗೆ ನಟಿ ಕಂಗನಾ ರನೌತ್ ಕೂಡ ಪ್ರತಿಕ್ರಿಯೆ ನೀಡಿದ್ದು, ಮಹೇಶ್ ಬಾಬು ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

   ಬಾಲಿವುಡ್‌ ಯಾವತ್ತಿದ್ದರೂ ಬಾಲಿವುಡ್‌, ಮಹೇಶ್‌ ಬಾಬು ಹೇಳಿಕೆಗೆ ಸುನೀಲ್‌ ಶೆಟ್ಟಿ ಟಾಂಗ್ ಬಾಲಿವುಡ್‌ ಯಾವತ್ತಿದ್ದರೂ ಬಾಲಿವುಡ್‌, ಮಹೇಶ್‌ ಬಾಬು ಹೇಳಿಕೆಗೆ ಸುನೀಲ್‌ ಶೆಟ್ಟಿ ಟಾಂಗ್

   ಮಹೇಶ್ ಪರ ಬ್ಯಾಟ್ ಬೀಸಿದ ಕಂಗನಾ

  ಮಹೇಶ್ ಪರ ಬ್ಯಾಟ್ ಬೀಸಿದ ಕಂಗನಾ

  ನಟಿ ಕಂಗನಾ ತಮ್ಮ 'ಧಾಕಡ್' ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಂಗನಾ, ನಟ ಮಹೇಶ್ ಬಾಬು ಹೇಳಿಕೆ ನೀಡಿರುವುದು ಸರಿಯಾಗಿಯೇ ಇದೆ. ಬಾಲಿವುಡ್ ಅವರನ್ನು ಭರಿಸಲು ಸಾಧ್ಯವಿಲ್ಲ. ಈ ಮಾತನ್ನು ನಾನು ಒಪ್ಪುತ್ತೇನೆ. ಬಾಲಿವುಡ್‌ನ ಚಿತ್ರ ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ. ಅವರನ್ನು ಭರಿಸುವ ಶಕ್ತಿ ಬಾಲಿವುಡ್‌ಗೆ ಇಲ್ಲ. ಮಹೇಶ್‌ ಬಾಬು ಸರಳವಾಗಿಯೇ ಸತ್ಯಗಳನ್ನು ಹೇಳುತ್ತಿದ್ದಾರೆ. ಮಹೇಶ್ ಬಾಬು ಏಕಾಂಗಿಯಾಗಿ ಭಾರತದಲ್ಲಿ ತೆಲುಗು ಚಿತ್ರರಂಗವನ್ನು ನಂಬರ್‌ 1 ಸ್ಥಾನದಲ್ಲಿರುವಂತೆ ಮಾಡಿದ್ದಾರೆ. ಹೀಗಾಗಿ ಬಾಲಿವುಡ್‌ ಅವರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಎಂದಿದ್ದಾರೆ.

   'ಈ ವಿಚಾರವನ್ನು ಏಕೆ ವಿವಾದ ಮಾಡುತ್ತೀದ್ದೀರಿ'

  'ಈ ವಿಚಾರವನ್ನು ಏಕೆ ವಿವಾದ ಮಾಡುತ್ತೀದ್ದೀರಿ'

  ನಟ ಮಹೇಶ್ ಬಾಬು ಅವರು ನೀಡಿದ ಹೇಳಿಕೆಯನ್ನು ಯಾಕೆ ಇಷ್ಟು ದೊಡ್ಡ ವಿವಾದ ಮಾಡುತ್ತೀದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ.ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ನನಗೆ ತಿಳಿದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವರು ಅಥವಾ ಇತರರು ಹಾಲಿವುಡ್‌ ನನಗೆ ಭರಿಸುವ ಶಕ್ತಿಯಿಲ್ಲ ಎಂದು ಹೇಳುತ್ತಾರೆನೋ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೆ ಮಹೇಶ್‌ ಬಾಬು ಅವರಿಗೆ ತಮ್ಮ ಚಿತ್ರರಂಗದ ಮೇಲೆ ಇರುವ ಗೌರವವನ್ನು ಇಲ್ಲಿ ನೋಡಬೇಕಾಗುತ್ತದೆ. ಕಳೆದ 10 -15 ವರ್ಷಗಳಲ್ಲಿ ತೆಲುಗು ಚಿತ್ರರಂಗ ಬೆಳೆದು ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ. ನಾವು ಅವರಿಂದ ಕಲಿಯುವುದು ಬಹಳಷ್ಟಿದೆ." ಎಂದು ಮಹೇಶ್ ಬಾಬು ಪರ ಹೇಳಿಕೆ ನೀಡಿದ್ದಾರೆ.

   ಮಹೇಶ್ ಹೇಳಿಕೆ ಬಗ್ಗೆ ಪರ ವಿರೋಧದ ಮಾತುಗಳು

  ಮಹೇಶ್ ಹೇಳಿಕೆ ಬಗ್ಗೆ ಪರ ವಿರೋಧದ ಮಾತುಗಳು

  ಮಹೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಿವುಡ್‌ ಖ್ಯಾತ ನಿರ್ಮಾಪಕ ಮುಖೇಶ್ ಭಟ್, ಮಹೇಶ್‌ ಬಾಬು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮಹೇಶ್‌ ಬಾಬು ಪ್ರತಿಭೆಗೆ ಮೌಲ್ಯವಿದೆ. ಹೀಗಾಗಿ ಬಾಲಿವುಡ್‌ ಅವರ ನಿರೀಕ್ಷೆಗಳನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದರೆ ತುಂಬಾ ಒಳ್ಳೆಯದು" ಎಂದು ಬಾಲಿವುಡ್ ನಿರ್ಮಾಪಕ ಮುಖೇಶ್ ಭಟ್ ಹೇಳಿದ್ದರು. ಆದರೆ, ನಟ ಸುನೀಲ್ ಶೆಟ್ಟಿ ಮಹೇಶ್‌ ಹೇಳಿಕೆ ವಿರುದ್ಧ ಗರಂ ಆಗಿದ್ದು, ಅಪ್ಪ ಯಾವತ್ತಿದ್ದರೂ ಅಪ್ಪನಾಗಿ ಇರುತ್ತಾನೆ. ಹಾಗೇ ಬಾಲಿವುಡ್‌ ಯಾವತ್ತಿದ್ದರೂ ಬಾಲಿವುಡ್‌. ಅದನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದ್ದರು. ಇನ್ನು ರಾಮ್‌ ಗೋಪಾಲ್ ವರ್ಮ ಕೂಡ ಮಹೇಶ್ ಬಾಬುಗೆ ಬುದ್ಧಿ ಮಾತುಗಳನ್ನಾಡಿದ್ದರು.

   ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟ ಮಹೇಶ್ ಬಾಬು

  ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟ ಮಹೇಶ್ ಬಾಬು

  ಇತ್ತೀಚಿಗಷ್ಟೇ ಟಾಲಿವುಡ್‌ನ ಸೂಪರ್ ಸ್ಟಾರ್ ಮಹೇಶ್‌ ಬಾಬು "ಬಾಲಿವುಡ್‌ ನನ್ನನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಅವರು ನನಗೆ ಸಾಕಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದರು. ಇದೇ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾದ ಬೆನ್ನಲ್ಲೇ ಮಹೇಶ್ ಬಾಬು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಪ್ರೀತಿಸುತ್ತೇನೆ. ಯಾವ ಭಾಷೆಯನ್ನು ತುಚ್ಚವಾಗಿ ಕಾಣುವುದಿಲ್ಲ ಎಂದು ಹೇಳಿದ್ದರು.

  English summary
  Kangana Ranaut on Mahesh Babu's comment: She says Bollywood can definitely not afford him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion