For Quick Alerts
  ALLOW NOTIFICATIONS  
  For Daily Alerts

  'ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಿ': ಯುಪಿ ಘಟನೆ ಖಂಡಿಸಿದ ಕಂಗನಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಬಾಲಿವುಡ್ ನೆಪೋಟಿಸಂ, ಡ್ರಗ್ಸ್, ಮುಂಬೈ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಗುಡುಗಿದ್ದ ನಟಿ ಈಗ ಅತ್ಯಾಚಾರಿಗಳ ವಿರುದ್ಧ ಸಿಡಿದೆದಿದ್ದಾರೆ.

  ಉತ್ತರ ಪ್ರದೇಶದ ಹಸ್ರಾತ್ ಎಂಬಲ್ಲಿ 19 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ. ಈ ಘಟನೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ನಟಿ ಕಂಗನಾ ರಣಾವತ್ ಸಹ ಈ ಘಟನೆಯನ್ನು ಖಂಡಿಸಿದ್ದು, ''ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಕ್ಕಿ ಕೊಲ್ಲಬೇಕು'' ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಂದೆ ಓದಿ....

  ಹೈ ಸೊಸೈಟಿಯ ಮಕ್ಕಳು 'ಮಾಲ್' ಕೇಳುತ್ತಾರೆ: ದೀಪಿಕಾ ಕಾಲೆಳೆದ ಕಂಗನಾ

  ಸಂತ್ರಸ್ಥ ಮಹಿಳೆ ಸಾವು

  ಸಂತ್ರಸ್ಥ ಮಹಿಳೆ ಸಾವು

  ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ 19 ವರ್ಷದ ಮಹಿಳೆ ಮೇಲೆ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಸಂತ್ರಸ್ಥ ಮಹಿಳೆಯನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಪರಿಣಾಮಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆಕೆಯ ಸಹೋದರ ಖಚಿತಪಡಿಸಿದ್ದಾರೆ.

  ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಿ

  ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಿ

  ಈ ಕುರಿತು ಟ್ವೀಟ್ ಮಾಡಿರುವ ಕಂಗನಾ ''ಈ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶೂಟ್ ಮಾಡಿ, ಪ್ರತಿವರ್ಷ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಈ ಸಾಮೂಹಿಕ ಅತ್ಯಾಚಾರಗಳಿಗೆ ಏನು ಪರಿಹಾರ? ಈ ದೇಶಕ್ಕೆ ಎಂತಹ ದುಃಖ ಮತ್ತು ಅವಮಾನಕರ ದಿನ. ನಮ್ಮ ಹೆಣ್ಣುಮಕ್ಕಳನ್ನು ನಾವು ದುರ್ಬಲಗೊಳಿಸಿದ್ದೇವೆ'' ಎಂದು ಕಿಡಿಕಾರಿದ್ದಾರೆ.

  ಅತ್ಯಾಚಾರದ ಬೆದರಿಕೆ ಹಾಕಿದ ವ್ಯಕ್ತಿ: ನಟಿ ಖುಷ್ಬೂ ಮಾಡಿದ್ದೇನು ಗೊತ್ತೇ?

  ಆರೋಪಿಗಳಿಗೆ ಶಿಕ್ಷೆ ಆಗಲಿ

  ಆರೋಪಿಗಳಿಗೆ ಶಿಕ್ಷೆ ಆಗಲಿ

  ಇಂದು ಬೆಳಗ್ಗೆ 6 ಗಂಟೆಗೆ ಸಂತ್ರಸ್ಥ ಮಹಿಳೆ ಮೃತಪಟ್ಟಿರುವುದನ್ನು ಸಹೋದರ ಖಚಿತಪಡಿಸಿದ್ದು, ''ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ಶಿಕ್ಷಯಾಗಬೇಕು. ಅವರನ್ನು ಗಲ್ಲಿಗೇರಿಸಬೇಕು'' ಎಂದು ಒತ್ತಾಯಿಸಿದ್ದಾರೆ.

  DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada
  ಪಾಯಲ್ ಘೋಷ್ ಖಂಡನೆ

  ಪಾಯಲ್ ಘೋಷ್ ಖಂಡನೆ

  ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪಾಯ್ ಘೋಷ್ ಈ ಘಟನೆ ಖಂಡಿಸಿದ್ದು, 'ಕೇವಲ 19 ವರ್ಷ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಮತ್ತು ಆಕೆ ಸಾವನ್ನಪ್ಪಿದ್ದಾಳೆ ಎನ್ನುವುದು ದುಃಖಕರ ಸಂಗತಿ. ಆರೋಪಿಗಳು ಬಂಧನದಲ್ಲಿದ್ದಾರೆ. ತಕ್ಷಣದ ನ್ಯಾಯ ಸಿಗಬೇಕು. ನ್ಯಾಯ ವಿಳಂಬವಾದ್ರೆ ನ್ಯಾಯ ಸಿಗಲ್ಲ. ಹುಡುಗಿಗಾಗಿ ಪ್ರಾರ್ಥಿಸೋಣ'' ಎಂದು ಟ್ವೀಟ್ ಮಾಡಿದ್ದಾರೆ.

  English summary
  Bollywood actress kangana ranaut condemns on Hathras gang rape. A 19-year-old woman who was raped and assaulted in Uttar Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X