For Quick Alerts
  ALLOW NOTIFICATIONS  
  For Daily Alerts

  ನಾನೀಗ ದೇಶದ ಅತ್ಯಂತ ದೊಡ್ಡ ಟಾರ್ಗೆಟ್; ನಟಿ ಕಂಗನಾ ರಣಾವತ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚಿಗೆ ವಿವಾದಗಳ ಮೂಲಕವೇ ಸದ್ದು ಸುದ್ದಿಯಲ್ಲಿದ್ದಾರೆ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತ ವಿವಾದ ಸೃಷ್ಟಿಸಿಕೊಳ್ಳುತ್ತಿರುವ ಕಂಗನಾ ಇತ್ತೀಚಿಗೆ ಪ್ರತಿಭಟನಾನಿರತ ರೈತರ ಬಗ್ಗೆ ನೀಡಿರುವ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

  ಬಾಲಿವುಡ್ ಮಂದಿ ಹಾಗೂ ರಾಜಕೀಯ ನಾಯಕರಿಗೆ ನಾನೇ ಟಾರ್ಗೆಟ್ ಎನ್ನುತ್ತಿರುವ ಕಂಗನಾ ಇದೀಗ ದೇಶದ ಅತ್ಯಂತ ದೊಡ್ಡ ಟಾರ್ಗೆಟ್ ನಾನೆ ಆಗಿದ್ದೀನಿ ಎಂದು ಹೇಳಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿದವರಿಗೆ ಲಾಭವಿದೆ ಎಂದು ಕಂಗನಾ ಕಿಡಿಕಾರಿದ್ದಾರೆ.

  ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಟಿ ಕಂಗನಾ ವಿರುದ್ಧ ಕರ್ನಾಟಕ ಕಿಸಾನ್ ಕಾಂಗ್ರೆಸ್ ದೂರು

  ನೆಟ್ಟಿಗನೊಬ್ಬ ಟ್ವೀಟ್ ಮಾಡಿ, 'ಕೆಲವು ಜನರಿಗೆ ಇದ್ದಕ್ಕಿದ್ದಂತೆ ರೈತರ ಮೇಲೆ ಪ್ರೀತಿ ಉಕ್ಕಿಬಂದಿದೆ. ಕಂಗನಾ ವಿರುದ್ಧ ಒಂದಾಗಿದ್ದಾರೆ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, 'ನೀವು ಏನು ಹೇಳುತ್ತಿದ್ದೀರಿ. ನಾನು ಈಗ ದೇಶದ ಅತ್ಯಂತ ದೊಡ್ಡ ಟಾರ್ಗೆಟ್ ಆಗಿದ್ದೇನೆ. ನನ್ನನ್ನು ಟಾರ್ಗೆಟ್ ಮಾಡಿದರೆ, ನೀವು ಮಾಧ್ಯಮಗಳ ಅಚ್ಚುಮೆಚ್ಚಿನವರಾಗುತ್ತೀರಿ,ಮೂವಿ ಮಾಫಿಯಾ ನಿಮಗೆ ಪಾತ್ರಗಳ ಆಫರ್ ನೀಡುತ್ತದೆ, ಸಿನಿಮಾಗಳನ್ನು ನೀಡುತ್ತೆ, ಪ್ರಶಸ್ತಿಗಳು ಸಿಗುತ್ತವೆ, ಶಿವ ಸೇನಾ ಚುನಾವಣಾ ಟಿಕೆಟ್ ಸೇರಿದಂತೆ ಎಲ್ಲವೂ ಸಿಗುತ್ತೆ' ಎಂದಿದ್ದಾರೆ.

  ಕಂಗನಾ ಇತ್ತೀಚಿಗೆ ಪ್ರತಿಭಟನಾನಿರತ ರೈತ ಮಹಿಳೆಯ ಬಗ್ಗೆ ನೀಡಿರುವ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಪಂಜಾಬ್ ನ ರೈತ ಮಹಿಳೆ ಮಹಿಂದರ್ ಕೌರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. 'ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ಮಾಡಿದ್ದ ಅದೆ ಅಜ್ಜಿ ಈಗ ರೈತ ಮಹಿಳೆ ಆಗಿದ್ದಾಳೆ, ಈಕೆ 100 ರೂ. ಸಿಗುತ್ತಾಳೆ' ಎಂದು ಕಂಗನಾ ಟ್ವೀಟ್ ಮಾಡಿದ್ದರು.

  ಹೊಸ ಜನ್ಮ ಸಿಕ್ಕಷ್ಟೇ ಖುಷಿ ಆಗುತ್ತೆ ನಂಗೆ | Filmibeat Kannada

  ಟ್ವೀಟ್ ಮಾಡಿ ಕೆಲವೇ ಕ್ಷಣದಲ್ಲಿ ಕಂಗನಾ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಕಂಗನಾ ಹೇಳಿಕೆಯನ್ನು ಪಂಜಾಬ್ ನಟ ಮತ್ತು ಗಾಯಕ ದಿಲ್ಜಿತ್ ದೊಸಾಂಜ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ದಿಲ್ಜಿತ್ ಪ್ರತಿಭಟನೆ ಮಾಡುತ್ತಿರುವ ರೈತ ಮಹಿಳೆ ಮಹಿಂದರ್ ಕೌರ್ ಸಂದರ್ಶನದ ವಿಡಿಯೋವನ್ನು ಶೇರ್ ಮಾಡಿ ಕಂಗನಾಗೆ ಸರಿಯಾದ ತಿರುಗೇಟು ನೀಡಿದ್ದರು.

  English summary
  Bollywood Actress Kangana Ranaut says I am the hottest target in India right now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X