For Quick Alerts
  ALLOW NOTIFICATIONS  
  For Daily Alerts

  ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!

  |

  ಬಾಲಿವುಡ್ ನಟಿ ಕಂಗನಾ ರನೌಟ್ ಪ್ರಸ್ತುತ 'ಧಾಕಡ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಇದೇ ಮೇ 20ರಂದು ಬಿಡುಗಡೆಯಾಗಲಿದೆ ಮತ್ತು ದೊಡ್ಡ ಪ್ರಮಾಣದ ಚಿತ್ರದ ಪ್ರಚಾರವನ್ನು ಒಳಗೊಂಡಿರುತ್ತದೆ. ರಜನೀಶ್ ಘಾಯ್ ನಿರ್ದೇಶನದ ಈ ಚಿತ್ರದಲ್ಲಿ ರಣಾವತ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಸಿನಿಮಾ ರಿಲೀಸ್ ಬಳಿಕ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.

  ಸಿನಿಮಾಗಳ ಜೊತೆಗೆ ನಟಿ ಕಂಗನಾ ಹೆಚ್ಚಾಗಿ ಬೇರೆ, ಬೇರೆ ವಿಚಾರಗಳಿಗೆ ಸುದ್ದಿ ಆಗುತ್ತಾರೆ. ಸಿನಿಮಾರಂಗ, ಬೇರೆ ಕಲಾವಿದರ ವಿಚಾರವಾಗಿ ಕಂಗನಾ ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್ನು ಆಗಾಗ ವಿವಾದಾತ್ಮಕ ಹೇಳಿಕೆ ಕೊಟ್ಟು ಕಂಗನಾ ಸುದ್ದಿ ಆಗುತ್ತಾರೆ.

  ಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾಮದುವೆ ಆಗಿಲ್ಲ ಏಕೆ? ಕಾರಣ ನೀಡಿದ ಕಂಗನಾ

  ಈಗ ಕಂಗನಾ ಒಬ್ಬ ಡಾಕ್ಟರ್ ವಿಚಾರಕ್ಕೆ ಸುದ್ದಿ ಆಗಿದ್ದರೆ. ಹೌದು ನಟಿ ಕಂಗನಾ ಮದುವೆ ಆಗಿಲ್ಲ, ಆದರೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಈ ಸುದ್ದಿ ಈಗ ಬಾಲಿವುಡ್‌ನಲ್ಲಿ ಮತ್ತೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ. ಈ ಹಿಂದೆ ತಾನು ಮದುವೆ ಯಾಕೆ ಆಗಿಲ್ಲ ಎನ್ನುವ ಕಾರಣ ಬಿಚ್ಚಿಟ್ಟ ನಟಿ, ಈಗ ಈ ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ.

  ಸಿನಿಮಾ ಪ್ರಚಾರದ ವೇಳೆ ನಟಿ ಕಂಗನಾ ರನೌಟ್ ಸಂದರ್ಶನ ಒಂದರಲ್ಲಿ ತಮ್ಮ ಹಳೆಯ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಒಬ್ಬರೆ ಪ್ರಯಾಣ ಮಾಡುತ್ತಿದ್ದಾಗ, ಆಕೆಯ ಬಳಿ ಇರುವ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಕದ್ದುಯ್ಯಲಾಗಿತ್ತಂತೆ, ಆಗ ನಿಖೋಲಸ್ ಲಫೆರ್ಟಿ ಜೊತೆಗೆ ಕಂಗನಾ ರಿಲೇಶನ್‌ಶಿಪ್‌ನಲ್ಲಿ ಇದ್ದರಂತೆ. ಈ ವಿಚಾರದ ಜೊತೆಗೆ ತನ್ನ ಮಾಜಿ ಪ್ರೇಮಿಯ ಬಗ್ಗೆ ಹಲವು ಕಹಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ: ಕಂಗನಾ ರನೌತ್ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ: ಕಂಗನಾ ರನೌತ್

  ನಿಖೋಲಸ್ ಲಫೆರ್ಟಿ ಬ್ರಿಟಿಷ್ ವೈದ್ಯ. ಈತನ ಜೊತೆಗೆ ಹಲವು ದಿನಗಳು ಸಂಬಂಧ ಹೊಂದಿದ್ದ ಕಂಗನಾ ನಂತರ ದೂರಾಗಿದ್ದಾರೆ. ಈ ಬಗ್ಗೆ ಗಾಸಿಪ್ ಇದ್ದರೂ, ಹಲವು ದಿನಗಳ ಬಳಿಕ ಈ ವಿಚಾರವನ್ನು ಕಂಗನಾ ರಿವೀಲ್ ಮಾಡಿದ್ದರು.

  ಸಂದರ್ಶನ ಒಂದರಲ್ಲಿ, ನಿಜ ಜೀವನದಲ್ಲಿಯೂ ನೀವು ಸಖತ್ 'ಧಾಕಡ್' ಅಂತೆ ಹೌದಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕಂಗನಾ, ''ಸುಮ್ಮನಿರು, ನಿಜ ಜೀವನದಲ್ಲಿ ಯಾರು ಹಾಗೆಲ್ಲ ಹುಡುಗರಿಗೆ ಹೊಡೆದುಕೊಂಡು ಓಡಾಡುತ್ತಾರೆ. ನಾನಂತೂ ಹಾಗಿಲ್ಲ. ಕಂಗನಾ ಹುಡುಗರನ್ನು ಹೊಡೆಯುತ್ತಾಳೆ, ಬಹಳ ಸಿಟ್ಟಿನ ವ್ಯಕ್ತಿ ಎಂದೆಲ್ಲ ನಿನ್ನಂಥಹವರು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದೀರಿ. ಅದಕ್ಕೆ ನನಗಿನ್ನೂ ಮದುವೆ ಆಗಿಲ್ಲ'' ಎಂದು ಜೋರು ಮಾಡಿದ್ದಾರೆ ಕಂಗನಾ. ''ನನ್ನ ಬಗ್ಗೆ ಹಲವರು ತಪ್ಪಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ ಪ್ರಚಾರ ಮಾಡಿದ್ದಾರೆ. ಇದರಿಂದ ನನಗೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನಷ್ಟವಾಗಿದೆ'' ಎಂದಿದ್ದಾರೆ.

  English summary
  Kangana Ranaut Share Secret About Ex Boyfriend, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X