For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ ಮೂಡಿಸುತ್ತೇ 8 ನೇ ದಿನದ 'ಧಾಕಡ್' ಚಿತ್ರದ ಟಿಕೆಟ್ ಸೇಲ್‌..!

  |

  ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಒಂದಿಲ್ಲೊಂದು ವಿಚಾರಗಳಿಂದ ಸಖತ್‌ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಬಿಡುಗಡೆ ಕಂಡಿದ್ದ ಕಂಗನಾ ಅಭಿನಯ ಚಿತ್ರ 'ಧಾಕಡ್' ಕಲೆಕ್ಷನ್ ಇಲ್ಲದೆ ಹೀನಾಯ ಸೋಲು ಕಂಡಿದೆ.

  ಮೇ 20 ರಂದು 'ಧಾಕಡ್' ಹಾಗೂ 'ಭೂಲ್ ಭುಲಯ್ಯ 2' ಚಿತ್ರ ಒಟ್ಟಿಗೆ ರಿಲೀಸ್ ಆಗಿದ್ದವು. ಮೊದಲ ದಿನ ಉತ್ತಮ ಪ್ರದರ್ಶನ ಕಾಣುತ್ತಿದ್ದ ಧಾಕಡ್ ನಂತರ ದಿನಗಳಲ್ಲಿ ಟಿಕೆಟ್ ಸೇಲ್ ಆಗದೆ ಥಿಯೇಟರ್‌ನಿಂದ ಎತ್ತಗಂಡಿ ಆಗಿತ್ತು. 'ಭೂಲ್ ಭುಲಯ್ಯ 2' ಗೆ ಧಾಕಡ್ ಚಿತ್ರದ ಸೋಲು ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿತು.

  ಕಂಗನಾ ಅಷ್ಟೇ ಬೆಸ್ಟು, ಉಳಿದಿದ್ದೆಲ್ಲವೂ...ಕಂಗನಾ ಅಷ್ಟೇ ಬೆಸ್ಟು, ಉಳಿದಿದ್ದೆಲ್ಲವೂ...

  ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಅಬ್ಬರಿಸಿದ್ದವು, ಬಾಲಿವುಡ್‌ನ ಸ್ಟಾರ್ ಸಿನಿಮಾಗಳನ್ನೇ ಧೂಳಿಪಟ ಮಾಡಿದ್ದವು. ಇದಾದ ಬಳಿಕ ಸಿನಿ ಪ್ರೇಕ್ಷಕರ ನಿರೀಕ್ಷೆ ಹುಟ್ಟಿಸಿದ್ದ ಕಂಗನಾ ಅಭಿನಯದ 'ಧಾಕಡ್' ಚಿತ್ರ ಕೂಡ ಪ್ರೇಕ್ಷಕರ ನೀರಿಕ್ಷೆ ಹುಸಿಗೊಳಿಸಿತ್ತು. ಕಲೆಕ್ಷನ್ ಮಾಡಿಕೊಳ್ಳವುದಕ್ಕಾಗಿ ಪರದಾಡಿತ್ತು. ಈಗ ಒಂದು ವಾರದ ಕಲೆಕ್ಷನ್ ಕೂಡ ಹೀನಾಯವಾಗಿದ್ದು, 'ಧಾಕಡ್‌'ಗೆ ಭಾರೀ ಮುಖಭಂಗವಾಗಿದೆ.

   ಶುಕ್ರವಾರ ಕೇವಲ 20 ಟಿಕೆಟ್ ಸೇಲ್

  ಶುಕ್ರವಾರ ಕೇವಲ 20 ಟಿಕೆಟ್ ಸೇಲ್

  ಟ್ರೈಲರ್, ಹಾಡಿನ ಮೂಲಕ ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳಾ ಪ್ರಧಾನ ಚಿತ್ರವಾದ 'ಧಾಕಡ್' ಮೊದಲ ದಿನವೇ ನಿರೀಕ್ಷೆ ಮಟ್ಟದಲ್ಲಿ ಜನರನ್ನು ತಲುಪುವಲ್ಲಿ ವಿಫಲವಾಯಿತು. ಇದಾದ ಬಳಿಕ ದಿನದಿಂದ ದಿನಕ್ಕೆ 'ಧಾಕಡ್' ಚಿತ್ರದ ಕಲೆಕ್ಷನ್ ಕುಸಿಯುತ್ತಲೇ ಬಂತು. ಜನರು ಧಾಕಡ್‌ನಲ್ಲಿ ಕಂಗನಾ ಅಭಿನಯ ಮೆಚ್ಚಿಕೊಂಡರೇ ಹೊರತು ಸಿನಿಮಾದ ಸ್ಟೋರಿ ಜನರಿಗೆ ಹೆಚ್ಚು ಕನೆಕ್ಟ್ ಆಗಲಿಲ್ಲ. ಸದ್ಯ ಈ ಒಂದು ವಾರದ ಕಲೆಕ್ಷನ್ ವರದಿ ಬಂದಿದ್ದು, ಧಾಕಡ್ ಚಿತ್ರ ದೇಶಾದ್ಯಂತ ಕೇವಲ 20 ಟಿಕೆಟ್ ಸೇಲ್ ಆಗಿದ್ದು, ಇದರಿಂದ 'ಧಾಕಡ್' ಗಳಿಸಿದ್ದು, ಕೇವಲ 4,420 ರೂಪಾಯಿ ಮಾತ್ರ ಈ ಮೂಲಕ ಕಂಗನಾ ಚಿತ್ರ ಹೀನಾಯ ಸೋಲು ಕಂಡಿದೆ.

  ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!

   'ಧಾಕಡ್' ಹೀನಾಯ ಸೋಲು

  'ಧಾಕಡ್' ಹೀನಾಯ ಸೋಲು

  ಮೇ 20 ರಂದು ದೇಶಾದ್ಯಂತ ರಿಲೀಸ್ ಆಗಿದ್ದ ಕಂಗನಾ ಅಭಿನಯದ 'ಧಾಕಡ್' ಚಿತ್ರ ಪ್ರೇಕ್ಷಕರನ್ನ ಮುಟ್ಟವಲ್ಲಿ ಯಡವಿದೆ. ಸಿನಿಮಾ ಸ್ಟೋರಿ ಜನರಿಗೆ ಇಷ್ಟವಾಗದ ಕಾರಣ ಸಿನಿಮಾ ಹೀನಾಯವಾಗಿ ಸೋಲು ಕಂಡಿದೆ. 8 ದಿನಗಳ ಅವಧಿಯಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 3 ಕೋಟಿ ರೂಪಾಯಿ ಆಗಿದೆ. ಈ ಮೂರು ಕೋಟಿಯನ್ನು ಕಲೆಕ್ಷನ್ ಮಾಡುವುದಕ್ಕೆ ಚಿತ್ರತಂಡ ಪರದಾಡಿದೆ. ಮೊದಲ ದಿನ 1 ಕೋಟಿ ಗಳಿಕೆ ಮಾಡಿಕೊಳ್ಳಲು ಹೆಣಗಾಡಿದ್ದ ಸಿನಿಮಾ ಕೇವಲ 1 ವಾರದಲ್ಲಿ 3 ಕೋಟಿ ಗಳಿಕೆ ಮಾಡಿಕೊಂಡಿದ್ದು, ಹೀನಾಯ ಸೋಲು ಕಂಡಿದೆ.

   ದಕ್ಷಿಣ ಚಿತ್ರಗಳನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರು

  ದಕ್ಷಿಣ ಚಿತ್ರಗಳನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರು

  ಈ ವರ್ಷದ ಆರಂಭದಲ್ಲಿ ಹಿಂದಿ ಚಿತ್ರಗಳು ಯಶ್ವಸಿ ಕಾಣಲು ಹೆಣಗಾಡಿವೆ. ಈ ಹಿಂದೆ ರಿಲೀಸ್ ಆಗಿದ್ದ, 'ಗಂಗೂಬಾಯಿ ಕಾಠಿಯಾವಾಡಿ' ಮತ್ತು 'ದಿ ಕಾಶ್ಮೀರ್ ಫೈಲ್ಸ್' ಚಿತ್ರಗಳು ಮಾತ್ರ ಉತ್ತಮ ಕಲೆಕ್ಷನ್ ಮಾಡಿಕೊಳ್ಳವಲ್ಲಿ ಯಶಸ್ವಿಯಾಗಿದ್ದವು. ಇದಾದ ಬಳಿಕ ದಕ್ಷಿಣ ಸಿನಿಮಾಗಳ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಯಿತು ಪ್ರೇಕ್ಷಕರು ಕೂಡ 'ಕೆಜಿಎಫ್‌ 2', 'ಪುಷ್ಪ', 'ಆರ್‌ಆರ್‌ಆರ್' ಸಿನಿಮಾಗಳಿಗೆ ಫುಲ್ ಮಾರ್ಕ್ಸ್‌ ಕೊಟ್ಟರು. ಇದೇ ಸಂದರ್ಭದಲ್ಲಿ ರಿಲೀಸ್ ಆದ ' ರನ್ ವೇ 34', 'ಹೀರೋಪಂತಿ 2' ಚಿತ್ರ ಹಿಂದಿ ಪ್ರೇಕ್ಷಕರಿಗೆ ಇಷ್ಟವಾಗದೇ ಮೂಲೆಗುಂಪಾಗಿದ್ದವು. ಈಗ 'ಧಾಕಡ್' ಕೂಡ ಇದೇ ಸಾಲಿಗೆ ಸೇರಿದ್ದು, 'ಭೂಲ್‌ ಭುಲಯ್ಯ 2' ಚಿತ್ರ ಕೊಂಚ ಗಳಿಕೆ ಮಾಡಿಕೊಳ್ಳವ ಮೂಲಕ ಹಿಂದಿ ಚಿತ್ರರಂಕ್ಕೆ ಸಮಾಧಾನ ತರಿಸಿದೆ.

  ಕಾಂಟ್ರವರ್ಸಿ ಕ್ವೀನ್ ಕಂಗನಾ ಮನೆ ಸೇರಿದ ಕಾರು ಬಲು ದುಬಾರಿ?ಕಾಂಟ್ರವರ್ಸಿ ಕ್ವೀನ್ ಕಂಗನಾ ಮನೆ ಸೇರಿದ ಕಾರು ಬಲು ದುಬಾರಿ?

   ಥಿಯೇಟರ್‌ನಿಂದ 'ಧಾಕಡ್' ಎತ್ತಂಗಡಿ

  ಥಿಯೇಟರ್‌ನಿಂದ 'ಧಾಕಡ್' ಎತ್ತಂಗಡಿ

  ಮೇ 20 ರಂದು 'ಭೂಲ್ ಭುಲಯ್ಯ 2' ಸಿನಮಾ ಜೊತೆ ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ 'ಧಾಕಡ್' ಚಿತ್ರ ಕೂಡ ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನ 'ಭೂಲ್‌ ಭುಲಯ್ಯ 2' ಚಿತ್ರಕ್ಕೆ ಭಾರೀ ಯಶಸ್ಸು ತಂದುಕೊಟ್ಟಿತ್ತು. ಆದರೆ, ಧಾಕಡ್ ಚಿತ್ರಕ್ಕೆ ಹೀನಾಯ ಸೋಲು ಉಂಟಾಯಿತು. 'ಭೂಲ್ ಭುಲಯ್ಯ 2' ಚಿತ್ರ 100 ಕೋಟಿ ಸಮೀಪದಲ್ಲಿದೆ. ಆದರೆ, 'ಧಾಕಡ್' ಚಿತ್ರ 3 ಕೋಟಿ ಮಾಡಲು ಹೆಣಗಾಡಿದೆ. ಹೀಗಾಗಿ ಕಂಗನಾ ಸಿನಿಮಾ ಸೋಲಲು 'ಭೂಲ್ ಭುಲಯ್ಯ 2' ಸಕ್ಸಸ್ ಕೂಡ ಒಂದಾಗಿದೆ. ಈಗಾಗಲೇ ಹಲವು ಥಿಯೇಟರ್‌ಗಳಿಂದ 'ಧಾಕಡ್' ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಇನ್ನು ಕೆಲ ದಿನಗಳ ಕಳೆದರೆ, ಸಂಪೂರ್ಣವಾಗಿ 'ಧಾಕಡ್' ಚಿತ್ರ ಥಿಯೇಟರ್‌ನಿಂದ ಕಣ್ಮರೆಯಾಗುವ ಎಲ್ಲಾ ಸಾಧ್ಯತೆ ಇದೆ.

  English summary
  Kangana Ranaut Starrer Dhaakad Film Sells Only 20 tickets On Day 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X