»   » ಬಾಲಿವುಡ್ ಗೆ ಕನ್ನಡ ತಾರೆಗಳು ಎಂಟ್ರಿಯಾದ ವರ್ಷ

ಬಾಲಿವುಡ್ ಗೆ ಕನ್ನಡ ತಾರೆಗಳು ಎಂಟ್ರಿಯಾದ ವರ್ಷ

By: ಜೀವನರಸಿಕ
Subscribe to Filmibeat Kannada

ಬಾಲಿವುಡ್ ಅಂದರೆ ಭಾರತದ ಉಳಿದ ಭಾಷೆಯ ಸಿನಿಮಾ ಮಂದಿಯ ಕನಸು. ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ರೆ ಜೀವನದ ದೊಡ್ಡ ಆಸೆಯೊಂದು ನೆರವೇರಿದ ಹಾಗೆ. ಆದರೆ ಈ ಬಾಲಿವುಡ್ ಅನ್ನೋ ಮರೀಚಿಕೆ ಕನ್ನಡ ಚಿತ್ರಪ್ರೇಮಿಗಳಿಗೆ ಅಷ್ಟು ಈಸಿಯಾಗಿ ಸಿಕ್ಕೋದಿಲ್ಲ. ಅದು ಸಿಕ್ಕಿದ್ರೆ ಖುಷಿಪಡದವರೇ ಇಲ್ಲ.

ಯಾಕಂದ್ರೆ ಸ್ಟೇಟ್ ಲೆವೆಲ್ ಸ್ಟಾರ್ ಡಮ್ ನ್ಯಾಶನಲ್ ಲೆವೆಲ್ ಗೆ ಏರಿದ್ರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ. ಈ ವರ್ಷ ಕನ್ನಡ ಸಿನಿಮಾಗಳಿಗೂ ಅದೃಷ್ಟದ ವರ್ಷ. ಇನ್ನು ಕನ್ನಡದ ತಾರೆಯರೂ ಕೂಡ ಬಾಲಿವುಡ್ ಕಡೆಗೆ ಪಯಣ ಬೆಳೆಸಿದರು.

ಕೆಲವು ನಟರು ಕನ್ನಡದಿಂದ ಹಿಂದಿಯಲ್ಲಿ ಕಾಣಿಸಿಕೊಳ್ತಿದ್ರೆ, ಟೆಕ್ನೀಷಿಯನ್ಗಳು ಕೂಡ ಬಾಲಿವುಡ್ಗೆ ಲಗ್ಗೆ ಇಟ್ಟಿದ್ದಾರೆ. ಬಾಲಿವುಡ್ ಅನ್ನೋ ಮಹಾಸಾಗರದಲ್ಲಿ ಉಳ್ಕೊಳ್ಳೋದು ಅಷ್ಟು ಸುಲಭ ಅಲ್ಲ ಒಂದಾದ್ರೂ ಸಿನಿಮಾ ಮಾಡಿ ಬರೋ ಆಸೆ ಇರೋರಿಗೆ ಈ ವರ್ಷ ಲಕ್ಕಿ ಈಯರ್.

ಅದ್ರಲ್ಲೂ ಮಲೆನಾಡ ಮಡಿಲು ಶಿವಮೊಗ್ಗದ ಸ್ಟಾರ್ ಗಳ ಅದೃಷ್ಟ ಅನ್ನಿಸುತ್ತೆ ಯಾಕಂದ್ರೆ ಕಿಚ್ಚ ಸುದೀಪ್ ಸೇರಿ ಇಲ್ಲೀವರ್ಗೂ ಬಾಲಿವುಡ್ ಗೆ ಎಂಟ್ರಿಯಾಗಿರೋ ಕನ್ನಡದ ಮೂರು ಹೀರೋಗಳೂ ಕೂಡ ಶಿವಮೊಗ್ಗದವರೇ.

ಅಂತೂ ಇಂತೂ ಬಾಲಿವುಡ್ ಗೆ ದಿಗಂತ್

ಕನ್ನಡದ ದೂದ್ ಪೇಡ ದಿಗಂತ್ ಅಂತೂ ಇಂತೂ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. '1920 ಲಂಡನ್' ಸಿನಿಮಾ ನಿಂತು ಹೋದ ನಂತರ ಈಗ 'ಫಟಕ್' ಅನ್ನೋ ಹೆಸರಿನ ಸಿನಿಮಾದ ಶೂಟಿಂಗ್ ನಡೀತಿದೆ. ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಮಗ ಸಿದ್ಧಾಂತ್ ಕಪೂರ್ ದಿಗಂತ್ ಜೊತೆ ನಟಿಸ್ತಿದ್ದಾರೆ.

ಸಲ್ಲು ಕೈಲಿ ಫೈಟ್ ಮಾಡಿಸಿದ ರವಿವರ್ಮ

ಕನ್ನಡದ ಸ್ಟಂಟ್ ಮಾಸ್ಟರ್ ರವಿವರ್ಮ ಈ ವರ್ಷ ಬಾಲಿವುಡ್ ಸಿನಿಮಾಗಳಲ್ಲಿ ಬಿಜಿ. ಸದ್ಯ ರಿಲೀಸ್ ಗೆ ರೆಡಿಯಿರೋ ಸಲ್ಲೂ ಅಭಿನಯದ 'ಜೈಹೋ'ನಲ್ಲಿ ರವಿವರ್ಮ ಸಲ್ಲೂನಿಂದ ಎರಡು ಫೈಟ್ ಮಾಡಿಸಿದ್ದಾರೆ.

ಆರ್ ರಾಜ್ ಕುಮಾರ್ ಚಿತ್ರಕ್ಕೂ ರವಿ ಸ್ಟಂಟ್

ಈ ವರ್ಷ ಕನ್ನಡಕ್ಕಿಂತ ಬಾಲಿವುಡ್ ಸಿನಿಮಾಗಳಲ್ಲೇ ಬಿಜಿಯಾಗಿದ್ದ ರವಿವರ್ಮ, ಶಾಹಿದ್ ಕಪೂರ್ ಅಭಿನಯದ ಆಕ್ಷನ್ ಸಿನಿಮಾ "ಆರ್ ರಾಜ್ ಕುಮಾರ್" ಸಿನಿಮಾಗೆ ಕೂಡ ಸ್ಟಂಟ್ ಮಾಸ್ಟರ್.

'ಜೈ ಹೋ' ಸಿನಿಮಾದಲ್ಲಿ ಸಣ್ಣ ಪಾತ್ರ

ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೋ ರವಿವರ್ಮ 'ಜೈಹೋ' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರವನ್ನೂ ಮಾಡಿದ್ದಾರೆ.

ಬಾಲಿವುಡ್ ಗೆ ದೀಪಿಕಾ ಕಾಮಯ್ಯ ಎಂಟ್ರಿ

ಕೊಡಗಿನನ ಬೆಡಗಿ 'ಚಿಂಗಾರಿ' ಬ್ಯೂಟಿ ದೀಪಿಕಾ ಕಾಮಯ್ಯ ಕೂಡ ಬಾಲಿವುಡ್ ಗೆ ಎಂಟ್ರಿಯಾದರು. 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದರು.

ಬಾಲಿವುಡ್ ಐಟಂ ಸಾಂಗ್ ನಲ್ಲಿ ರಾಗಿಣಿ

ಗ್ಲಾಮರ್ ಡಾಲ್ ರಾಗಿಣಿ ಕನ್ನಡದಿಂದ ಬಾಲಿವುಡ್ ಗೆ ಹಾರಿದ್ದು 'ಆರ್ ರಾಜ್ ಕುಮಾರ್' ಐಟಂ ಸಾಂಗ್ ಗೆ. ಸದ್ಯ ಬಾಲಿವುಡ್ ನಲ್ಲಿ ಮತ್ತಷ್ಟು ಅವಕಾಶಗಳನ್ನ ಎದುರು ನೋಡ್ತಿದ್ದಾರೆ.

'ಬೇಷರಮ್' ಚಿತ್ರದಲ್ಲಿ ಸುಜಿತ್ ಶೆಟ್ಟಿ ಹಾಡು

ಕನ್ನಡದ ಸಿಂಗರ್ ಕಮ್ ಮ್ಯೂಸಿಕ್ ಡೈರೆಕ್ಟರ್ ಸುಜಿತ್ ಶೆಟ್ಟಿ ಅವರು 'ಬೇಷರಮ್' ಸಿನಿಮಾದ "ಲವ್ ಕಿ ಗಂಟಿ..." ಅನ್ನೋ ಸಾಂಗ್ ಹಾಡಿ ಬಿಟೌನ್ ನಲ್ಲಿ ಸದ್ದು ಮಾಡಿದರು.

ಶಿವಮೊಗ್ಗದ ಹುಡುಗ ಶಕ್ತಿಕುಮಾರ್ ಬಾಲಿವುಡ್

ಕನ್ನಡದಲ್ಲಿ 'ಲೌ' ಅನ್ನೋ ಸಿನಿಮಾ ಮಾಡಿದ್ದ ಶಕ್ತಿಕುಮಾರ್ ಅನ್ನೋ ಶಿವಮೊಗ್ಗದ ಹುಡುಗ ಕೂಡ ಬಾಲಿವುಡ್ ಸಿನಿಮಾ ಒಂದರಲ್ಲಿ ಮಿಂಚಿದ್ದಾರೆ.

English summary
This year 2013 number of Kannada actors heads to Bollywood. Such as Diganth, Ragini Dwivedi, stunt master Ravi Verma, Deepika Kamaiah, singer Sujith Shetty and many more actors entered to Bollywood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada