Just In
Don't Miss!
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ತಾರೆಗಳೊಂದಿಗೆ ಅಮಿತಾಬ್ ಬಚ್ಚನ್ ನಂಟು
ಅವಿಸ್ಮರಣೀಯ ಘಟನೆಯೊಂದಕ್ಕೆ ಬಾಲಿವುಡ್ ಸಜ್ಜಾಗಿದೆ. ಅಕ್ಟೋಬರ್ 10ರ ಮಧ್ಯರಾತ್ರಿ ಸರಿಯುತ್ತಿದ್ದಂತೆ ಬಾಲಿವುಡ್ ಚಿತ್ರೋದ್ಯಮದ ಸಂಭ್ರಮ ಸಡಗರದಲ್ಲಿ ಮುಳುಗೇಳಲಿದೆ. ಈ ಚಿರಸ್ಮರಣೀಯ ಘಟನೆಗೆ ಅನಿಲ್ ಅಂಬಾನಿಯ ರಿಲಯನ್ಸ್ ಸ್ಟುಡಿಯೋ ಅಣಿಯಾಗಿದೆ. ಇದು ಅಂತಿಂತಹ ಸಂಭ್ರಮವಲ್ಲ. ಎಪ್ಪತ್ತರ ಸಂಭ್ರಮ. ಹ್ಯಾಪಿ ಬರ್ತ್ ಡೇ ಟು ಬಿಗ್ ಬಿ ಅಮಿತಾಬ್ ಬಚ್ಚನ್.
ಅಮಿತಾಬ್ ಬಚ್ಚನ್ 70ಕ್ಕೆ ಅಡಿಯಿಡುತ್ತಿರುವುದು ಅವರ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಸಂಭ್ರಮದ ದಿನ. ಆದರೆ ಅಮಿತಾಬ್ ಪಾಲಿಗೆ ಎಲ್ಲ ದಿನಗಳಂತೆ ಇದೂ ಒಂದು. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ನನ್ನ ಪಾಲಿಗೆ ಆ ದಿನಕ್ಕೆ ಅಂತಹ ಮಹತ್ವವೇನು ಇಲ್ಲ ಎಂದು.

ಅಮಿತಾಬ್ ಜೊತೆಗಿನ ಶಿವಣ್ಣನ ನಂಟು
ಅಮಿತಾಬ್ ರ ನಟನೆಯನ್ನು ಆರಾಧಿಸುವವರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು. ಹದಿನಾಲ್ಕು ಹದಿನೈದರ ವಯಸ್ಸಿನಲ್ಲೇ ಅಮಿತಾಬ್ ರನ್ನು ಶಿವಣ್ಣ ಭೇಟಿ ಮಾಡಿದ್ದರು. ಆರಂಭದಲ್ಲಿ ಅಮಿತಾಬ್ ರ ಹಾವ ಭಾವ ಶೈಲಿಯನ್ನು ಶಿವಣ್ಣ ಅನುಕರಿಸುತ್ತಿದ್ದರಂತೆ. ಒಮ್ಮೆ ಪರಿಚಯವಾದರೆ ಮರೆಯುವ ಪೈಕಿಯಲ್ಲ ಅಮಿತಾಬ್ ಎನ್ನುತ್ತಾರೆ ಶಿವಣ್ಣ.

ಬಿಗ್ ಬಿ ಜೊತೆಗಿನ ಕಿಚ್ಚ ಸುದೀಪ್ ನಂಟು
ಶಿವಮೊಗ್ಗದಲ್ಲಿ ಬಿಗ್ ಬಿ ಚಿತ್ರಗಳು ಬಿಡುಗಡೆಯಾದಾಗ ಅಮ್ಮನೊಂದಿಗೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಂಡಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಅಮಿತಾಬ್ ಬಚ್ಚನ್ ಅವರ ಚಿತ್ರಗಳೆಂದರೆ ಅಷ್ಟೊಂದು ಅಕ್ಕರೆ ಎನ್ನುತ್ತಾರೆ ಸುದೀಪ್. ಅಂತಹ ಮಹಾನ್ ಕಲಾವಿದನೊಂದಿಗೆ ಅಭಿನಯಿಸುವ ಅವಕಾಶ 'ರಣ್' ಚಿತ್ರದಲ್ಲಿ ತಮಗೆ ಸಿಕ್ಕಿತು. ಅದು ನನ್ನ ಪಾಲಿಗೆ ಒದಗಿ ಬಂದ ಮಹಾನ್ ಭಾಗ್ಯ ಎಂದು ನೆನೆಯುತ್ತಾರೆ ಸುದೀಪ್.

ಅಮಿತಾಬ್ ಜೊತೆ ಅಮೃತ ಸವಿದ ರಮ್ಯಾ
ಮೊದಲು ಅವರನ್ನು ಸೆಟ್ ನಲ್ಲಿ ನೋಡಿದಾಗ ನನಗೆ ಮಾತೇ ಬರದಷ್ಟು ಸಂತಸವಾಗಿತ್ತು. ಅಭಿನಯಿಸುವುದಕ್ಕೂ ಕಷ್ಟವಾಯಿತು. ಬಳಿಕ ಅವರು ನನ್ನೊಂದಿಗೆ ಕುಳಿತು ಮಾತನಾಡಿ ಮನಸ್ಸನ್ನು ಹಗುರ ಮಾಡಿದರು. ಅಮೃತಧಾರೆ ಚಿತ್ರದ ಅಮಿತಾಬ್ ಜೊತೆಗಿನ ನೆನಪುಗಳು ರಮ್ಯಾ ಪಾಲಿಗೆ ನಿಜಕ್ಕೂ ಅಮೃತ ಸವಿದಂತೆಯೇ.

ಅಮಿತಾಬ್ ಬಗ್ಗೆ ರಾಗಿಣಿ ರಾಗಲಹರಿ
ಮಹಾನ್ ಕಲಾವಿದನೊಂದಿಗೆ ಅಭಿನಯಿಸುವುದೇ ಒಂದು ಆನಂದ. ಸೆಟ್ಸ್ ನಲ್ಲಿ ಸಖತ್ ಮಜಾ ಇರುತ್ತದೆ. ಮಲಯಾಳಂನ 'ಕಾಂದಹಾರ್' ಚಿತ್ರದಲ್ಲಿ ಅಮಿತಾಬ್ ರ ಮಗಳಾಗಿ ಅಭಿನಯಿಸಿದ್ದನ್ನು ಇನ್ನೂ ಮರೆತಿಲ್ಲ. ಬಿಗ್ ಬಿ ಜೊತೆ ನಟಿಸಬೇಕು ಎಂದು ಹಲವಾರು ಕಲಾವಿದರು ಕನಸು ಕಾಣುತ್ತಿರುತ್ತಾರೆ. ರಾಗಿಣಿ ವಿಚಾರದಲ್ಲಿ ಈ ಕನಸು ಬಹಳ ಬೇಗನೆ ನನಸಾಗಿತ್ತು.

ಅರುಂಧತಿ ನಾಗ್ 'ಪಾ' ನೆನಪುಗಳು
ಅಮಿತಾಬ್ ಬಚ್ಚನ್ ಎಂದರೆ ಎಲ್ಲರಿಗೂ ಗೊತ್ತು. ಆದರೆ ಅವರನ್ನು ನಾನು ಮೊದಲು ಭೇಟಿ ಆದಾಗ "ಮೇರಾ ನಾಮ್ ಅಮಿತಾಬ್ ಬಚ್ಚನ್ ಹೈ" ಎಂದು ಪರಿಚಯಿಸಿಕೊಂಡಿದ್ದರು. ಅವರಲ್ಲಿ ಎಳ್ಳಷ್ಟೂ ಅಹಂಕಾರ ಇಲ್ಲ ಎಂಬುದಕ್ಕೆ ಇದೇ ನಿದರ್ಶನ. ಅವರ ಜೊತೆಗೆ 'ಪಾ' ಚಿತ್ರದಲ್ಲಿ ಅಭಿನಯಿಸಿದ ಅನುಭವ ಮರೆಯಲಾಗದು. ನನಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಎಸ್ಎಂಎಸ್ ಮೂಲಕ ಶುಭಾಶಯ ತಿಳಿಸಿದ್ದರು.
ಆದರೆ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಬಿಡಬೇಕಲ್ಲ. ಅಮಿತಾಬ್ ರ ಪತ್ನಿ ಜಯಾ ಬಚ್ಚನ್ ಅವರಂತೂ ವಿಶೇಷ ಸೂಟ್ ಹೊಲಿಸಿದ್ದಾರೆ. ಅದರ ಬಣ್ಣ, ವಿನ್ಯಾಸ ಹೇಗಿರುತ್ತದೆ ಎಂಬುದು ಬಿಗ್ ಬಿ ಬರ್ತ್ ಡೇ ದಿನ ಬಹಿರಂಗವಾಗಲಿದೆ.
ಅಮಿತಾಬ್ ರ ಬರ್ತ್ ಡೇ ಪಾರ್ಟಿಗೆ ಸಿನೆಮಾ ತಾರೆಗಳು, ಕ್ರೀಡಾ ತಾರೆಯರು, ರಾಜಕಾರಣಿಗಳು ಸೇರಿದಂತೆ 1000ಕ್ಕೂ ಅಧಿಕ ಆಗಮಿಸುವ ನಿರೀಕ್ಷೆ ಇದೆ. ಹುಟ್ಟುಹಬ್ಬದ್ದ ನಿಮಿತ್ತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಅಂದಹಾಗೆ ಅಮಿತಾಬ್ ಅವರಿಗೂ ಕನ್ನಡ ತಾರೆಗಳಿಗೂ ನಂಟಿದೆ. ಆ ನಂಟಿನ ಚಿತ್ರಣ ಇಲ್ಲಿದೆ ನೋಡಿ.