ಕೋಪಗೊಂಡ ಅಜಯ್ ದೇವಗನ್ 'ಕಪಿಲ್ ಶೋ'ನಿಂದ ಹೊರಹೋಗಿದ್ದೇಕೆ?
ಬಾಲಿವುಡ್ ನ ಜನಪ್ರಿಯ ಕಾರ್ಯಕ್ರಮ 'ಕಪಿಲ್ ಶರ್ಮಾ ಶೋ' ಅದ್ಯಾಕೋ ಇತ್ತೀಚೆಗೆ ಸೆಲೆಬ್ರಿಟಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಅದರಲ್ಲೂ ಸ್ಟಾರ್ ನಟರ-ನಟಿಯರ ಕೋಪಕ್ಕೆ ಈ ಕಾರ್ಯಕ್ರಮಕ್ಕೆ ಕಾರಣವಾಗುತ್ತಿರುವುದು ಕೆಟ್ಟ ಬೆಳವಣಿಗೆ.
ಬಾಲಿವುಡ್ ಸ್ಟಾರ್ ಗಳ ನೆಚ್ಚಿನ ಕಾರ್ಯಕ್ರಮಗಳಲ್ಲಿ 'ಕಪಿಲ್ ಶರ್ಮಾ ಶೋ' ಒಂದು. ತಮ್ಮ ಚಿತ್ರಗಳ ಪ್ರಮೋಷನ್ ಗಾಗಿ ಈ ಕಾರ್ಯಕ್ರಮಕ್ಕೆ ಬರ್ತಾರೆ. ಆದ್ರೆ, ಇತ್ತೀಚೆಗೆ ಬಂದ ಅತಿಥಿಗಳನ್ನ ಸರಿಯಾಗಿ ಸತ್ಕರಿಸಿದೆ ಅವರಿಗೆ ಅವಮಾನ ಉಂಟು ಮಾಡಲಾಗುತ್ತಿದೆ ಎಂಬ ಆರೋಪ ಈ ಕಾರ್ಯಕ್ರಮದ ನಿರೂಪಕನ ಮೇಲೆ ಕೇಳಿ ಬರುತ್ತಿದೆ.
ಈಗ ನಟ ಅಜಯ್ ದೇವಗನ್ ಮತ್ತು ಅವರ ಚಿತ್ರತಂಡ ಕಪಿಲ್ ಶೋ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಾರಣವೇನು? ಮುಂದೆ ಓದಿ....

ಅಜಯ್ ಚಿತ್ರತಂಡಕ್ಕೆ ಕೈಕೊಟ್ಟ ಕಪಿಲ್
ಸೆಪ್ಟೆಂಬರ್ 1ರಂದು ತೆರೆಕಾಣಲಿರುವ ‘ಬಾದ್ಶಾಹೋ' ಸಿನಿಮಾದ ಪ್ರಮೋಷನ್ಗಾಗಿ ಕಪಿಲ್ ಶರ್ಮಾ ಶೋಗೆ ಇಡೀ ‘ಬಾದ್ಶಾಹೋ' ತಂಡ ಹೋಗಿತ್ತು. ಅಜಯ್ ದೇವಗನ್, ಇಮ್ರಾನ್ ಹಷ್ಮಿ, ಇಲಿಯಾನಾ, ಇಶಾ ಗುಪ್ತಾ ಶೂಟಿಂಗ್ ಸೆಟ್ಗೆ ತೆರಳಿದ್ದರು. ಆದರೆ ಸೆಟ್ನಲ್ಲಿ ಕಪಿಲ್ ಶರ್ಮಾ ನಾಪತ್ತೆಯಾಗಿದ್ದರು.

ಫೋನ್ ಸ್ವಿಚ್ ಆಫ್!
ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿತ್ತು. ಯಾಕೆ ಏನಾಯಿತು ಎಂಬ ಚಿತ್ರತಂಡದ ಪ್ರಶ್ನೆಗೆ ಕಪಿಲ್ ಟೀಮ್ ದ ಯಾವುದೇ ಉತ್ತರ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ಇಡೀ ತಂಡ ಸೆಟ್ನಿಂದ ಹೊರ ಬಂದಿದ್ದಾರೆ.

ಮೋನಜ್ ತಿವಾರಿ ಶೋ ಇದ್ದಕ್ಕಿದ್ದಂತೆ ರದ್ದಾಗಿತ್ತು
‘ಕಪಿಲ್ ಶರ್ಮಾ' ಶೋಗಳು ಈ ರೀತಿ ರದ್ದಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬೋಜ್ಪುರಿ ಗಾಯಕ ಹಾಗೂ ಬಿಜೆಪಿ ಮುಖಂಡ ಮನೋಜ್ ತಿವಾರಿ, ಬೋಜ್ಪುರಿ ಕುರಿತ ಕಾರ್ಯಕ್ರಮ ನೀಡಬೇಕೆಂಬ ಉದ್ದೇಶದಿಂದ ಕಪಿಲ್ ಬಳಿ ಕೇಳಿಕೊಂಡಿದ್ದರು, ಒಪ್ಪಿಗೆಯೂ ಸಿಕ್ಕಿತ್ತು. ಆಮೇಲೆ ಇದ್ದಕ್ಕಿದ್ದಂತೆ ಶೋ ರದ್ದಾಗಿತ್ತು.

ಶಾರೂಖ್ ಖಾನ್ ಗೂ ಈ ಅನುಭವ
ಬಾಲಿವುಡ್ ಸ್ಟಾರ್ ನಟರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ಅರ್ಜುನ್ ಕಪೂರ್, ಅನಿಲ್ ಕಪೂರ್ ಹೀಗೆ ಹಲವು ಸ್ಟಾರ್ ನಟರಿಗೆಲ್ಲ ಕಪಿಲ್ ಶರ್ಮಾ ಕೊನೆಯ ಗಳಿಗೆಯಲ್ಲಿ ಶೋ ರದ್ದು ಮಾಡಿದ ಉದಾಹರಣೆಗಳೂ ಇವೆ.

ಕಪಲ್ ಶರ್ಮಾಗೆ 'ಅಹಂ' ಎನ್ನಲಾಗುತ್ತಿದೆ
ಈ ಬೆಳವಣಿಗೆಯಿಂದ ಕಪಿಲ್ ಶರ್ಮಾ ಅವರ ಈ ನಡವಳಿಕೆ ಬಗ್ಗೆ ಬಾಲಿವುಡ್ ನಲ್ಲಿ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಕಪಿಲ್ಗೆ ಗರ್ವ, ಅಹಂ ಹೆಚ್ಚಾಗಿದೆ ಆದ್ದರಿಂದಲೇ ಈ ರೀತಿ ಕೊನೆಯ ಘಳಿಗೆಯಲ್ಲಿ ಕಾರ್ಯಕ್ರಮಗಳನ್ನ ರದ್ದು ಮಾಡುತ್ತಿದ್ದಾರೆ ಎನ್ನಲಾಗಿದೆ.

ಆರೋಗ್ಯ ಸರಿಯಿಲ್ಲದೆ ಇರುವುದು ಕಾರಣವಂತೆ
ಈ ನಡುವೆ ಕಪಿಲ್ ಗೆ ಆರೋಗ್ಯ ಸಮಸ್ಯೆ ಇದ್ದು, ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಈ ರೀತಿಯಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದ್ರೆ, ಕಪಿಲ್ ಆರೋಗ್ಯ ಸರಿಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.


Click it and Unblock the Notifications










