For Quick Alerts
  ALLOW NOTIFICATIONS  
  For Daily Alerts

  ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!

  By Harshitha
  |

  ''ಹಿಂದಿ ಸಿನಿಮಾದ ಗ್ರೇಟೆಸ್ಟ್ ಶೋಮ್ಯಾನ್'' ಎಂದೇ ಕರೆಯಿಸಿಕೊಳ್ಳುತ್ತಿದ್ದ ರಾಜ್ ಕಪೂರ್ ರವರ ಕನಸಿನ ಕೂಸಾದ 'ಆರ್.ಕೆ.ಸ್ಟುಡಿಯೋಸ್' ಇದೀಗ ಮಾರಾಟಕ್ಕಿದೆ. ಎಪ್ಪತ್ತು ವರ್ಷಗಳ ಹಿಂದೆ ಮುಂಬೈನ ಚೆಂಬೂರ್ ನಲ್ಲಿ ರಾಜ್ ಕಪೂರ್ ನಿರ್ಮಿಸಿದ್ದ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್'ನ ಸೇಲ್ ಮಾಡಲು ಕಪೂರ್ ಕುಟುಂಬ ನಿರ್ಧರಿಸಿದೆ.

  ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್, ಪುತ್ರರಾದ ರಣಧೀರ್, ರಿಶಿ ಮತ್ತು ರಾಜೀವ್, ಪುತ್ರಿಯರಾದ ರಿತು ಮತ್ತು ರಿಮಾ ಒಮ್ಮತದ ನಿರ್ಣಯ ಕೈಗೊಂಡು 'ಆರ್.ಕೆ.ಸ್ಟುಡಿಯೋಸ್'ನ ಮಾರಾಟ ಮಾಡಲು ಮುಂದಾಗಿದ್ದಾರೆ.

  ಎರಡು ಎಕರೆಯ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ 'ಆರ್.ಕೆ.ಸ್ಟುಡಿಯೋಸ್'ನ ಫ್ಲೋರ್ ಒಂದರಲ್ಲಿ ಕಳೆದ ವರ್ಷದ ಸೆಪ್ಟೆಂಬರ್ 16 ರಂದು ಬೆಂಕಿ ಅವಘಡ ಸಂಭವಿಸಿತ್ತು. ಅದಾದ ಬಳಿಕ ಸ್ಟುಡಿಯೋನ ನವೀಕರಿಸಲು ಕಪೂರ್ ಕುಟುಂಬಕ್ಕೆ ಸಾಧ್ಯವಾಗಲಿಲ್ಲ.

  ಮೊದಲೇ 'ಆರ್.ಕೆ.ಸ್ಟುಡಿಯೋಸ್' ನಿರ್ವಹಣೆ ಕಷ್ಟಕರವಾಗಿತ್ತು. ಅಂಥದ್ರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ಮೇಲೆ, ಕಪೂರ್ ಕುಟುಂಬಕ್ಕೆ ಅಪಾರ ನಷ್ಟ ಉಂಟಾಯಿತು. ಹೀಗಾಗಿ, ಮುಂದಿನ ಪೀಳಿಗೆಗೆ 'ಆರ್.ಕೆ.ಸ್ಟುಡಿಯೋಸ್' ಹೊರಯಾಗಬಾರದು ಎಂದು 'ಮಾರಾಟ'ದ ನಿರ್ಧಾರವನ್ನು ಕಪೂರ್ ಕುಟುಂಬ ಕೈಗೊಂಡಿದೆ. ಮುಂದೆ ಓದಿರಿ...

  ನೋವಿನಿಂದ ನುಡಿದ ರಿಶಿ ಕಪೂರ್

  ನೋವಿನಿಂದ ನುಡಿದ ರಿಶಿ ಕಪೂರ್

  'ಆರ್.ಕೆ.ಸ್ಟುಡಿಯೋಸ್'ನ ಮಾರಾಟ ಮಾಡುತ್ತಿರುವ ಸುದ್ದಿಯನ್ನ ಖಚಿತ ಪಡಿಸಿದ ರಿಶಿ ಕಪೂರ್ ಸಂದರ್ಶನವೊಂದರಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ''ಅಗ್ನಿ ಅವಘಡ ಸಂಭವಿಸಿದ್ಮೇಲೆ, ನವೀಕರಣ ಮಾಡಬೇಕು ಅಂತ ಎಷ್ಟೋ ಪ್ರಯತ್ನ ಪಟ್ವಿ. ಆದ್ರೆ, ಆಗಲಿಲ್ಲ. ಸ್ಟುಡಿಯೋ ಬಗ್ಗೆ ನಮ್ಮೆಲ್ಲರಿಗೂ ಭಾವನಾತ್ಮಕ ನಂಟು ಇದೆ. ಇದೊಂದು ನೋವಿನ ವಿಚಾರ'' ಎಂದು ಸಂದರ್ಶನವೊಂದರಲ್ಲಿ ನೋವಿನಿಂದ ನುಡಿದರು ರಿಶಿ ಕಪೂರ್.

  ಅನುರಾಗ್ ಬಸು ಕಂಡ್ರೆ ರಿಶಿ ಕಪೂರ್ ಉರಿದು ಬೀಳೋದು ಯಾಕೆ.?ಅನುರಾಗ್ ಬಸು ಕಂಡ್ರೆ ರಿಶಿ ಕಪೂರ್ ಉರಿದು ಬೀಳೋದು ಯಾಕೆ.?

  ಬಿಳಿ ಆನೆ

  ಬಿಳಿ ಆನೆ

  ''ಅಗ್ನಿ ಅವಘಡ ಸಂಭವಿಸುವುದಕ್ಕೂ ಮುನ್ನವೇ 'ಆರ್.ಕೆ.ಸ್ಟುಡಿಯೋಸ್' ದೈತ್ಯ ಬಿಳಿ ಆನೆಯಾಗಿ ಬೆಳೆದಿತ್ತು. ಅದನ್ನ ಸಾಕುವುದೇ ಕಷ್ಟಕರವಾಗಿತ್ತು. ಆರ್ಥಿಕ ನಷ್ಟ ಕೂಡ ಉಂಟಾಗಿತ್ತು'' - ರಿಶಿ ಕಪೂರ್

  'ಸಂಜು': ಪುತ್ರ ರಣ್ಬೀರ್ ನಟನೆ ಕಂಡು ಹೆಮ್ಮೆ ಪಟ್ಟ ತಂದೆ ರಿಶಿ ಕಪೂರ್'ಸಂಜು': ಪುತ್ರ ರಣ್ಬೀರ್ ನಟನೆ ಕಂಡು ಹೆಮ್ಮೆ ಪಟ್ಟ ತಂದೆ ರಿಶಿ ಕಪೂರ್

  ನಿರ್ವಹಣೆ ವೆಚ್ಚ ದುಬಾರಿ

  ನಿರ್ವಹಣೆ ವೆಚ್ಚ ದುಬಾರಿ

  ''ಸಿನಿಮಾಗಳು, ಟಿವಿ ಸೀರಿಯಲ್, ಆಡ್ ಶೂಟಿಂಗ್ ಗಾಗಿ ಬರುವವರು ಉಚಿತ ಪಾರ್ಕಿಂಗ್, ಎ.ಸಿ ಕೇಳ್ತಾರೆ. ಮೇಲಾಗಿ 'ಆರ್.ಕೆ.ಸ್ಟುಡಿಯೋಸ್' ಇರುವುದು ಕೊಂಚ ದೂರದಲ್ಲಿ. ಹೀಗಾಗಿ, ಇಲ್ಲಿಗೆ ಶೂಟಿಂಗ್ ಬರುವವರ ಸಂಖ್ಯೆ ಕೂಡ ಕಮ್ಮಿ. ಇವೆಲ್ಲದರಿಂದ ನಿರ್ವಹಣೆ ವೆಚ್ಚ ದುಬಾರಿ ಆಗಿತ್ತು'' - ರಿಶಿ ಕಪೂರ್

  ಒಮ್ಮತದ ನಿರ್ಧಾರ

  ಒಮ್ಮತದ ನಿರ್ಧಾರ

  ''ನಾವು ಅಣ್ಣ-ತಮ್ಮಂದಿರೆಲ್ಲಾ ಈಗ ಒಟ್ಟಾಗಿ ಇದ್ದೇವೆ. ಮುಂದಕ್ಕೆ ನಮ್ಮ ಮಕ್ಕಳೂ ಹಾಗೇ ಇರ್ತಾರೆ ಅನ್ನೋದಕ್ಕೆ ಏನು ಗ್ಯಾರೆಂಟಿ.? ಮುಂದಿನ ಪೀಳಿಗೆಯಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಬಂದರೂ ಬರಬಹುದು. ಆಗ 'ಆರ್.ಕೆ.ಸ್ಟುಡಿಯೋಸ್' ಕೋರ್ಟ್ ಗೆ ಹೋಗುವುದು ನಮಗೆ ಇಷ್ಟ ಇಲ್ಲ. ಹೀಗಾಗಿ ಈಗಲೇ ಮಾರಾಟ ಮಾಡಲು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದೇವೆ'' - ರಿಶಿ ಕಪೂರ್

  ಅಗ್ನಿ ಅವಘಡದಲ್ಲಿ ಎಲ್ಲವೂ ಬೂದಿ

  ಅಗ್ನಿ ಅವಘಡದಲ್ಲಿ ಎಲ್ಲವೂ ಬೂದಿ

  'ಆರ್.ಕೆ.ಸ್ಟುಡಿಯೋಸ್'ನಲ್ಲಿ ನರ್ಗಿಸ್ ರಿಂದ ಹಿಡಿದು ವೈಜಯಂತಿಮಾಲಾ ವರೆಗೂ ಎಲ್ಲಾ ರಾಜ್ ಕಪೂರ್ ನಾಯಕಿಯರ ಕಾಸ್ಟ್ಯೂಮ್ಸ್, 'ಮೇರಾ ನಾಮ್ ಜೋಕರ್' ಮಾಸ್ಕ್, 'ಅವಾರಾ' ಸಿನಿಮಾದಲ್ಲಿ ಬಳಸಿದ ಪಿಯಾನೋ ಸೇರಿದಂತೆ ಎಷ್ಟೋ ಸ್ಮರಣೀಯ ವಸ್ತುಗಳು ಕಳೆದ ವರ್ಷ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೂದಿಯಾಗಿತ್ತು.

  English summary
  Kapoor Family is all set to sell Iconic RK Studios.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X