For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನದ ಕಹಿ ನೆನಪು ಬಿಚ್ಚಿಟ್ಟ ನಟಿ ಕರಿಶ್ಮಾ ಕಪೂರ್

  |

  ನಟಿ ಕರಿಶ್ಮಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ ನಾಯಕ ನಟಿ. ಕರೀನಾ ಕಪೂರ್‌ ರ ಅಕ್ಕ ಕರಿಶ್ಮಾ ಬಾಲಿವುಡ್‌ನಲ್ಲಿ ಬಹು ದೊಡ್ಡ ಯಶಸ್ಸನ್ನು ಕಂಡವರು, ಆದರೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಹಿ ಉಂಡಿದ್ದಾರೆ.

  ಮೊದಲಿಗೆ ಅಜಯ್ ದೇವಗನ್ ಜೊತೆ ಪ್ರೀತಿಯಲ್ಲಿದ್ದ ಕರೀಶ್ಮಾ ಕಪೂರ್ ನಂತರ ಅಭಿಷೇಕ್ ಬಚ್ಚನ್ ಜೊತೆ ಸುತ್ತಾಡಿ ಮಾಧ್ಯಮಗಳ ಗಮನ ಸೆಳೆದಿದ್ದರು. ಇಬ್ಬರ ಕುಟುಂಬದವರೂ ಒಪ್ಪಿ ಮದುವೆ ನಿಶ್ಚಿತಾರ್ಥ ಸಹ ಮಾಡಲಾಯಿತು. ಆದರೆ ಅದು ಎರಡೇ ತಿಂಗಳಿಗೆ ಮುರಿದು ಹೋಯಿತು. ನಂತರ ಬ್ಯುಸಿನೆಸ್‌ ಮ್ಯಾನ್ ಸಂಜಯ್ ಕಪೂರ್ ಅನ್ನು 2003 ರಲ್ಲಿ ಮದುವೆಯಾದರು ಕರಿಶ್ಮಾ ಕಪೂರ್.

  ಆರಂಭದ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಆ ನಂತರ ಸಮಸ್ಯೆಗಳು ಪ್ರಾರಂಭವಾದವು. ಕರಿಶ್ಮಾ ಕಪೂರ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಕರಿಶ್ಮಾ ಳನ್ನು ಹೊಡೆಯುವಂತೆ ಸಂಜಯ್ ಕಪೂರ್ ತನ್ನ ತಾಯಿಗೆ ಹೇಳುತ್ತಿದ್ದನಂತೆ.

  ಅಷ್ಟೇ ಅಲ್ಲದೆ, ತನ್ನ ಸ್ನೇಹಿತರೊಂದಿಗೆ ಮಲಗುವಂತೆ ಸಂಜಯ್ ಕಪೂರ್ ಕರಿಶ್ಮಾ ಕಪೂರ್ ಮೇಲೆ ಒತ್ತಡ ಹೇರುತ್ತಿದ್ದನಂತೆ, ನಿರಾಕರಿಸಿದಾಗ ಕರಿಶ್ಮಾಳ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದನಂತೆ. ಕರಿಶ್ಮಾ ರನ್ನು ಮದುವೆಯಾದ ಬಳಿಕವೂ ಸಂಜಯ್ ತನ್ನ ಮೊದಲ ಹೆಂಡತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದನಂತೆ.

  ಕರಿಶ್ಮಾ ಕಪೂರ್ ಹಾಗೂ ಸಂಜಯ್ 2015 ರಲ್ಲಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದರು. ಮೊದಲಿಗೆ ಪರಸ್ಪರ ಒಪ್ಪಿಗೆ ಮೇಲೆ ಅರ್ಜಿ ಸಲ್ಲಿಸಲಾಗಿತ್ತು, ನಂತರ ಅದನ್ನು ಹಿಂಪಡೆದು, ಗೃಹ ದೌರ್ಜನ್ಯದ ಅಡಿಯಲ್ಲಿ ವಿಚ್ಛೇಧನ ಸಲ್ಲಿಕೆಯಾಗಿ, 2016 ರಲ್ಲಿ ಕರಿಶ್ಮಾ ಕಪೂರ್‌ಗೆ ವಿಚ್ಛೇಧನ ದೊರಕಿತು.

  ಕರಿಶ್ಮಾ ಕಪೂರ್ ಹಾಗೂ ಸಂಜಯ್ ಕಪೂರ್‌ ಗೆ ಸಮೀರಾ ಹಾಗೂ ಕಿಯಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

  English summary
  Karisma Kapoor allegations about her ex husband Sanjay Kapoor. She said Sanjay forced his mother to beat Karisma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X