»   » ಎರಡು ಕೈ ಬಳಸದೇ ಪುಷ್-ಅಪ್ ಮಾಡಿದ ಕತ್ರಿನಾ! ವಿಡಿಯೋ ವೈರಲ್

ಎರಡು ಕೈ ಬಳಸದೇ ಪುಷ್-ಅಪ್ ಮಾಡಿದ ಕತ್ರಿನಾ! ವಿಡಿಯೋ ವೈರಲ್

Posted By:
Subscribe to Filmibeat Kannada

ಸದಾ ಜಿಮ್‌ಗೆ ಹೋಗುವ ಪುರುಷರು ಮತ್ತು ಮಹಿಳೆಯರೇ ಎರಡು ಕೈ ಬಳಸಿಯೂ ಪುಷ್‌-ಅಪ್ ಮಾಡಲು ಸ್ವಲ್ಪ ನೆಗ್‌ಲೆಟ್ ಮಾಡುತ್ತಾರೆ. ಇನ್ನೂ ಒಂದು ಕೈ ಬಳಸಿ ಪುಷ್‌-ಅಪ್ ಮಾಡಿ ಅಂದ್ರೆ ಮಾಡುತ್ತಾರಾ? ಖಂಡಿತ ಹೀಗೆ ಮಾಡುವವರು ವಿರಳ. ಆದರೆ ಈಗ ಎರಡೂ ಕೈಗಳನ್ನು ಬಳಸದೇ ಪುಷ್‌-ಅಪ್ ಮಾಡಿ ಬಾಲಿವುಡ್ ನ ಬಾರ್ಬಿ ಗರ್ಲ್ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅವರ ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿದೆ.

ಕತ್ರಿನಾ ಕೈಫ್ ಈಗ ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಿತ್ರಸೆಟ್ ನಲ್ಲಿ ಅವರು ವಾರ್ಮ್‌ ಅಪ್‌ ಆಗುವ ವೇಳೆ ಹೀಗೆ ಎರಡೂ ಕೈ ಬಳಸದೇ ಪುಷ್‌-ಅಪ್ ಮಾಡಿದ್ದು ಆ ವಿಡಿಯೋ ವನ್ನು ಇನ್‌ಸ್ಟಗ್ರಾಂ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. 'ವಾರ್ಮ್‌ ಅಪ್‌ ಆನ್ ಸೆಟ್' ಎಂದು ಶೀರ್ಷಿಕೆ ಬಳಸಿ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮೊದಲು ಎರಡು ಕೈ ಬಳಸಿ ಪುಷ್‌-ಅಪ್ ಮಾಡಿದ್ದಾರೆ. ನಂತರ ಒಂದು ಕೈ ಬಳಸಿ ವ್ಯಾಯಾಮ ಮಾಡಿದ ನಂತರ ಎರಡೂ ಕೈ ಬಳಸದೇ ಪುಷ್‌-ಅಪ್ ಮಾಡಿದ್ದಾರೆ. ವಿಡಿಯೋ ಈ ಕೆಳಗಿನಂತಿದೆ.

Katrina Kaif did push-ups without using her hands and we’re freaking out

ಕ್ಯಾಟ್ ಅಪ್‌ಲೋಡ್ ಮಾಡಿರುವ ಈ ವಿಡಿಯೋ 1.4 ದಶಲಕ್ಷ ಬಾರಿ ವೀಕ್ಷಣೆ ಪಡೆದಿದೆ. ಅಲ್ಲದೇ 7 ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್‌ ಸಹ ಸಿಕ್ಕಿವೆ. ಈ ವಿಡಿಯೋ ಪೂರ್ಣ ನೋಡಿದವರಿಗಂತೂ ಹೊಟ್ಟೆ ಹುಣ್ಣಾಗುವಂತೆ ನಗು ಬರುವುದರಲ್ಲಿ ಸಂಶಯವಿಲ್ಲ.

Warming up on set . @rezaparkview

A post shared by Katrina Kaif (@katrinakaif) on Jul 24, 2017 at 7:58am PDT

ಸಲ್ಮಾನ್ ಖಾನ್ ರವರ 'ಟೈಗರ್ ಜಿಂದಾ ಹೈ' ಚಿತ್ರವು 'ಏಕ್‌ ಥಾ ಟೈಗರ್'ನ ಸೀಕ್ವೆಲ್ ಚಿತ್ರವಾಗಿದೆ.

English summary
Katrina Kaif did push-ups without using her hands and we’re freaking out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada