»   » ಲಂಡನ್‌ನಲ್ಲಿ ಕತ್ರಿನಾ ಮೇಣದ ಪ್ರತಿಮೆ ಅನಾವರಣ

ಲಂಡನ್‌ನಲ್ಲಿ ಕತ್ರಿನಾ ಮೇಣದ ಪ್ರತಿಮೆ ಅನಾವರಣ

Posted By:
Subscribe to Filmibeat Kannada

ತನ್ನ ಸಹಜ ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಕತ್ರಿನಾ ಕೈಫ್ ಬ್ರಿಟನ್ನಿನ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮ್ಯೂಸಿಯಂ ಸೇರ್ಪಡೆಯಾಗಿರುವ ಹಾಲಿವುಡ್ ಮತ್ತು ಬಾಲಿವುಡ್ ಗಣ್ಯರ ಸಾಲಿಗೆ ಸೇರಿದ್ದಾರೆ.

ಶನಿವಾರ ಸುಮಾರು 15,000 ಪೌಂಡ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕತ್ರಿನಾ ಕೈಫ್ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದೆ.  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕತ್ರಿನಾ ಮೇಣದ ಪ್ರತಿಮೆ ಪಕ್ಕ ನಿಂತು ಕ್ಯಾಮರಾಗಳಿಗೆ ಫೋಸ್ ಕೊಟ್ಟಿದ್ದಾರೆ. ಇದು ತನ್ನಂತೆಯೇ ಇದೆ ಎಂದು ಪ್ರತಿಮೆ ನಿರ್ಮಿಸಿದ ಶಿಲ್ಪಿಗಳನ್ನು ಶ್ಲಾಘಿಷಿದ್ದಾಳೆ.

Katrina Kaif's

ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯ ರೈ, ಸಲ್ಮಾನ್ ಖಾನ್, ಹೃತಿಕ್ ರೋಶನ್ ಮುಂತಾದವರ ಮೇಣದ ಪ್ರತಿಮೆಗಳಿಗೆ. ಈ ಗಣ್ಯರಪಟ್ಟಿಗೆ ಈಗ ಕತ್ರಿನಾ ಸೇರ್ಪಡೆಗೊಂಡಿದ್ದಾರೆ.

ಕತ್ರಿನಾ ಅವರ ನೃತ್ಯದ ಭಂಗಿಯಲ್ಲಿರುವ ಮೇಣದ ಪ್ರತಿಮೆಯನ್ನು ಸುಮಾರು 20 ಶಿಲ್ಪಿಗಳು, 4 ತಿಂಗಳ ಕಾಲ ಕೆಲಸ ಮಾಡಿ ನಿರ್ಮಿಸಿದ್ದಾರೆ. ಪಂಜಾಬ್ ರೇಡಿಯೊ ಸಹಭಾಗಿತ್ವದಲ್ಲಿ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ಕಳೆದ ವರ್ಷ ನಡೆಸಿದ್ದ ಆನ್‌ಲೈನ್ ಸಮೀಕ್ಷೆಯಲ್ಲಿ ಕತ್ರಿನಾ ಅವರು ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಹಿಂದಿಕ್ಕಿದ್ದರು. [ಪಿಟಿಐ ಚಿತ್ರ]

English summary
Katrina Kaif became the latest Indian star to join the Bollywood line-up at Madame Tussauds in London.Katrina Kaif seventh Bollywood actor to be honored with a figure at Madame Tussauds London.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada