For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕೆಲಸದವರಿಗೆ ರಜೆ ನೀಡಿ ತಾನೇ ಕೆಲಸದಳಾದ ಕತ್ರೀನಾ

  |

  ಕೊರೊನಾ ವೈರಸ್ ಬಹುತೇಕರಿಗೆ ರಜೆ ಕೊಟ್ಟು, ಮನೆಯಲ್ಲೇ ಕಾಲ ಕಳೆಯುವಂತೆ ಮಾಡಿದೆ. ಸದಾ ಬ್ಯುಸಿ ಇರುತ್ತಿದ್ದ ಬಾಲಿವುಡ್ ನಟ-ನಟಿಯರಿಗಂತೂ ಈಗ ಆರಾಮೋ-ಆರಾಮು.

  ಆದರೆ ಇದೇ ಕೊರೊನಾ ವೈರಸ್ ಬಾಲಿವುಡ್ ಸೆಲೆಬ್ರಿಟಿಗಳನ್ನು ಸಾಮಾನ್ಯರ ಮಟ್ಟಕ್ಕಿಳಿಸಿದೆ. ಕೈಗೊಬ್ಬರು, ಕಾಲಿಗೊಬ್ಬರು ಆಳುಗಳನ್ನು ಇಟ್ಟುಕೊಂಡು ಮೆರೆಯುತ್ತಿದ್ದವರೆಲ್ಲಾ ಈಗ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದಾರೆ.

  ಹೌದು, ಕೊರೊನಾ ಭೀತಿ ಯಾವ ಮಟ್ಟಿಗೆ ಇದೆಯೆಂದರೆ ಮನೆ ಕೆಲಸದವರನ್ನೂ ನಂಬಲಾಗುತ್ತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳೂ ಇದಕ್ಕೆ ಹೊರತಾಗಿಲ್ಲ. ತಮ್ಮ ಮನೆಗೆಲಸದವರಿಗೆ ರಜೆ ಕೊಟ್ಟು, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.

  ಬಾಲಿವುಡ್ ಖ್ಯಾತ ನಟಿ ಕತ್ರೀನಾ ಕೈಫ್ ಅವರು ಕೊರೊನಾ ಭೀತಿಯಿಂದಾಗಿ ಈಗಾಗಲೇ ಒಂದು ವಾರದಿಂದ ಮನೆಯಲ್ಲಿಯೇ ಉಳಿದಿದ್ದು, ತಮ್ಮ ಮನೆಗೆಲಸದವರಿಗೂ ರಜೆ ನೀಡಿದ್ದಾರೆ. ಮನೆಯಲ್ಲಿನ ಕೆಲಸಗಳನ್ನು ತಾವೇ ಮಾಡುತ್ತಿದ್ದಾರೆ.

  ವಿಡಿಯೋ ಪೋಸ್ಟ್ ಮಾಡಿರುವ ಕತ್ರೀನಾ ಕೈಫ್

  ವಿಡಿಯೋ ಪೋಸ್ಟ್ ಮಾಡಿರುವ ಕತ್ರೀನಾ ಕೈಫ್

  ತಾವೇ ಪಾತ್ರೆಗಳನ್ನು ತೊಳೆಯುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಕತ್ರೀನಾ ಕೈಫ್, ನೀರು ಉಳಿಸುವ ಹೊಸ ಯೋಜೆನಯೊಂದನ್ನು ಸಹ ಹಂಚಿಕೊಂಡಿದ್ದಾರೆ.

  ನೀರು ಉಳಿತಾಯದ ಗುಟ್ಟು ಹೇಳಿದ ಕತ್ರೀನಾ

  ನೀರು ಉಳಿತಾಯದ ಗುಟ್ಟು ಹೇಳಿದ ಕತ್ರೀನಾ

  'ಮೊದಲಿಗೆ ನಾನು ಒಂದೊಂದೇ ಪಾತ್ರೆಗಳನ್ನು ನಲ್ಲಿಯ ನೀರಿನಲ್ಲಿ ತೊಳೆಯೋಣವೆಂದು ಕೊಂಡಿದ್ದೆ, ನಂತರ ಐಡಿಯಾ ಬದಲಾಯಿಸಿ, ಸಿಂಕ್‌ಗೆ ನೀರು ಬಿಟ್ಟು ಅದರಲ್ಲಿ ಪಾತ್ರೆಗಳೆಲ್ಲವನ್ನೂ ಮುಳುಗಿಸಿ ಅದೇ ನೀರಿನಲ್ಲಿ ಪಾತ್ರೆಗಳನ್ನು ತೊಳೆಯೋಣ ಎಂದುಕೊಂಡಿದ್ದೇನೆ'' ಎಂದಿದ್ದಾರೆ ಕತ್ರೀನಾ ಕೈಫ್.

  ಕತ್ರೀನಾ ಕೈಫ್ ಸಹೋದರಿ ಇಸಾಬೆಲ್ಲಾ

  ಕತ್ರೀನಾ ಕೈಫ್ ಸಹೋದರಿ ಇಸಾಬೆಲ್ಲಾ

  ಕತ್ರೀನಾ ಕೈಫ್ ಕೇವಲ ಒಬ್ಬರೇ ಪಾತ್ರೆ ತೊಳೆದಿಲ್ಲ. ಅವರೊಂದಿಗೆ ಅವರ ತಂದಿ ಇಜ್‌ (ಇಸಾಬೆಲ್ಲಾ) ಸಹ ಇದ್ದಾರೆ. ಇಬ್ಬರೂ ಸೇರಿ ಪಾತ್ರೆಗಳನ್ನು ತೊಳೆದಿದ್ದಾರೆ. ಅಷ್ಟೆ ಅಲ್ಲ ಬೇರೆ ಕೆಲಸಗಳನ್ನೂ ಒಟ್ಟಿಗೆ ಸೇರಿ ಮಾಡಿದ್ದಾರೆ.

  ವ್ಯಾಯಾಮದ ವಿಡಿಯೋ ಹಾಕಿದ್ದ ಕತ್ರೀನಾ ಕೈಫ್

  ವ್ಯಾಯಾಮದ ವಿಡಿಯೋ ಹಾಕಿದ್ದ ಕತ್ರೀನಾ ಕೈಫ್

  ಕೆಲವು ದಿನಗಳ ಹಿಂದೆಯಷ್ಟೆ ಇಬ್ಬರೂ ಸಹೋದರಿಯರು ಸೇರಿ ವ್ಯಾಯಾಮಗಳ ಟುಟೋರಿಯಲ್ ವಿಡಿಯೋ ಹಾಕಿದ್ದರು. ಸರಳ ವ್ಯಾಯಾಮಗಳ ವಿಡಿಯೋ ಹಾಕಿ, ನೀವೂ ಪ್ರಯತ್ನಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.

  English summary
  Bollywood actress Katrina Kaif washes dishes with her sister in home and posted video in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X