For Quick Alerts
  ALLOW NOTIFICATIONS  
  For Daily Alerts

  ಅಮೀರ್ ಬಹು ವರ್ಷದ ಆಸೆಯನ್ನು ಈಡೇರಿಸಿದ್ದು ಕನ್ನಡದ ಈ ಕಲಾವಿದ

  |

  ನಟ ಅಮೀರ್ ಖಾನ್ ಹೆಚ್ಚು ಸಿನಿಮಾ ನೋಡುತ್ತಾರೆ. ಅವರ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ಹಾಲಿವುಡ್ ನ ಸಿನಿಮಾವೊಂದಿದೆ. 'ಫಾರೆಸ್ಟ್ ಗಂಪ್' ಅಮೀರ್ ಖಾನ್ ಬಹಳ ಇಷ್ಟ ಪಡುವ ಸಿನಿಮಾ.

  'ಫಾರೆಸ್ಟ್ ಗಂಪ್' ರೀತಿಯ ಸಿನಿಮಾ ಮಾಡಬೇಕು ಎನ್ನುವುದು ಅಮೀರ್ ಖಾನ್ ಬಹುದಿನದ ಆಸೆಯಾಗಿತ್ತು. ಈ ಆಸೆಯನ್ನು ಕನ್ನಡದ ಕಲಾವಿದರೊಬ್ಬರು ಈಡೇರಿಸಿದ್ದಾರೆ. ಅವರು ಬೇರೆ ಯಾರು ಅಲ್ಲ ಬೆಳಗಾವಿಯಲ್ಲಿ ಹುಟ್ಟಿ ಇಂಡಿಯಾ ತುಂಬ ಹೆಸರು ಮಾಡಿದ ನಟ ಅತುಲ್ ಕುಲಕರ್ಣಿ.

  ಪ್ರಶಸ್ತಿಗಳ ಬಗ್ಗೆ ಅಮೀರ್ ಖಾನ್ ಬೇಸರಗೊಳ್ಳಲು ಈ ಘಟನೆಯೇ ಕಾರಣ! ಪ್ರಶಸ್ತಿಗಳ ಬಗ್ಗೆ ಅಮೀರ್ ಖಾನ್ ಬೇಸರಗೊಳ್ಳಲು ಈ ಘಟನೆಯೇ ಕಾರಣ!

  ಒಮ್ಮೆ ಅತುಲ್ ಕುಲಕರ್ಣಿ ನಟ ಅಮೀರ್ ಖಾನ್ ಜೊತೆಗೆ ಮಾತನಾಡುವ ವೇಳೆ ಅವರಿಗೆ 'ಫಾರೆಸ್ಟ್ ಗಂಪ್' ಸಿನಿಮಾ ಇಷ್ಟ ಎನ್ನುವುದು ತಿಳಿದಿದೆ. ಈ ರೀತಿಯ ಸಿನಿಮಾ ಮಾಡಬೇಕು ಎನ್ನುವ ಆಸೆಯೂ ಗೊತ್ತಾಗಿದೆ. ಹೀಗಾಗಿ ಅವರಿಗಾಗಿ ಅದೇ ಸಿನಿಮಾದ ಚಿತ್ರಕತೆಯನ್ನು ಹೊಸ ಶೈಲಿಯಲ್ಲಿ ಬರೆದರು.

  ಅದೇ ಕಥೆಯನ್ನು ಇಟ್ಟುಕೊಂಡು ಭಾರತೀಯ ಚಿತ್ರರಂಗಕ್ಕೆ ತಕ್ಕ ಹಾಗೆ ಬದಲು ಮಾಡಿ, ಚಿತ್ರಕತೆ ಬರೆದಿದ್ದಾರೆ. ಇದು ಅಮೀರ್ ಖಾನ್ ರಿಗೂ ಇಷ್ಟವಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾವೇ 'ಲಾಲ್ ಸಿಂಗ್ ಚಡ್ಡಾ'.

  ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಲುಕ್ ಗೆ ಬಾಲಿವುಡ್ ಮಂದಿ ಫಿದಾಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಲುಕ್ ಗೆ ಬಾಲಿವುಡ್ ಮಂದಿ ಫಿದಾ

  'ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಚಿತ್ರೀಕರಣದಲ್ಲಿ ಸದ್ಯ ಅಮೀರ್ ಖಾನ್ ಬ್ಯುಸಿ ಇದ್ದಾರೆ. ಸಿನಿಮಾದ ಫಸ್ಟ್ ಲುಕ್ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಡಿಸೆಂಬರ್ 25, 2020ಗೆ ಸಿನಿಮಾ ಬಿಡುಗಡೆ ಆಗುತ್ತಿದೆ.

  English summary
  Lal Singh Chaddha screenplay written by Atul Kulkarni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X