»   » ಅಮರ ಚಿತ್ರಗಳ ನಾಯಕಿ ಸುಚಿತ್ರಾ ಸೇನ್ ವಿಧಿವಶ

ಅಮರ ಚಿತ್ರಗಳ ನಾಯಕಿ ಸುಚಿತ್ರಾ ಸೇನ್ ವಿಧಿವಶ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದೇವದಾಸ್, ಆಂಧಿ, ಸಾಥ್ ಪಾಕೆ ಬಂಧ, ಅಗ್ನಿ ಪರೀಕ್ಷಾ, ಸಪ್ತಪದಿ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ಹಿರಿಯ ನಟಿ ಸುಚಿತ್ರಾ ಸೇನ್ ಶುಕ್ರವಾರ ಬೆಳಗ್ಗೆ 8.23ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಶ್ವಾಸಕೋಶದ ತೊಂದರೆ ಅನುಭವಿಸುತ್ತಿದ್ದ 82ರ ಹರೆಯದ ನಟಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆ ಬೆಲ್ಲೆ ವ್ಯೂ ಕ್ಲೀನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉತ್ತಮ್ ಕುಮಾರ್ ನಾಯಕತ್ವದ ಬೆಂಗಾಳಿ ಚಿತ್ರ 'ಷಾರೆ ಚೌತೌರ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸೇನ್, 1955ರ ಹಿಂದಿ ಚಲನಚಿತ್ರ ದೇವದಾಸ್ ನಲ್ಲಿನ ಪಾರೋ ಪಾತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. 1963ರಲ್ಲಿ ಮಾಸ್ಕೋ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. 1978ರ ನಂತರ ನಟನೆಗೆ ಗುಡ್ ಬೈ ಹೇಳಿದ್ದರು.

Legendary Actress Suchitra Sen Passes Away

ಸುಚಿತ್ರಾ ಸೇನ್ ಅವರ ಮಗಳು ಮೂನ್ ಮೂನ್ ಸೇನ್ ಮೊಮ್ಮಕ್ಕಳಾದ ರೈಮಾ ಹಾಗೂ ರಿಯಾ ಸೇನ್ ಕೂಡಾ ಚಿತ್ರರಂಗದಲ್ಲಿ ತಮ್ಮ ವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. 1972ರಲ್ಲಿ ಸುಚಿತ್ರಾ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2005ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಿರಾಕರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಪಶ್ಚಿಮ ಬಂಗಾಳ ರಾಜ್ಯದ ಅತ್ಯುನ್ನುತ ಪ್ರಶಸ್ತಿ ಬಂಗಾ ವಿಭೂಷಣ್ ಪ್ರಶಸ್ತಿ ಕೂಡಾ ಸುಚಿತ್ರಾ ಅವರಿಗೆ ಸಂದಿದೆ.

1931ರ ಏಪ್ರಿಲ್ 6 ರಂದು ಪಬ್ನಾ(ಈಗ ಬಾಂಗ್ಲಾದೇಶದಲ್ಲಿದೆ)ದಲ್ಲಿ ಶಾಲೆಯೊಂದರ ಮುಖ್ಯ ಶಿಕ್ಷಕ ಕರುಣಾಮೊಯ್ ದಾಸ್ ಗುಪ್ತಾ ಹಾಗೂ ಗೃಹಿಣಿ ಇಂದಿರಾ ದೇವಿ ಅವರ ಐದನೇ ಮಗುವಾಗಿ ಸುಚಿತ್ರಾ ಸೇನ್ ಜನಿಸಿದ್ದರು. 1974ರಲ್ಲಿ ಉದ್ಯಮಿ ಆದಿನಾಥ್ ಸೇನ್ ಪುತ್ರ ದಿಬಾನಾಥ್ ಸೇನ್ ಮದುವೆಯಾದ ಸುಚಿತ್ರಾ ಅವರಿಗೆ ಮೂನ್ ಮೂನ್ ಸೇನ್ ಎಂಬ ಪುತ್ರಿಯೇ ಸರ್ವಸ್ವವಾಗಿತ್ತು.ಆದರೆ, ಮದುವೆ, ಸಂಸಾರ ನಿಭಾಯಿಸಿ ಕೂಡಾ ಚಿತ್ರರಂಗದಲ್ಲಿ ಉತ್ತಮ ಪಾತ್ರಗಳನ್ನು ನಿರ್ವಹಿಸಿ ಸುಚಿತ್ರಾ ಮನೆ ಮಾತಾದರು.

English summary
Legendary actress of yesteryears Suchitra Sen died in a Kolkata hospital, aged 83.Sen had starred in memorable Hindi films like 'Devdas', and 'Aandhi' and 'Saat Paake Bandha', 'Agnipariksha', 'Saptapadi' and 'Deep Jwele Jai' in Bengali.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada