Don't Miss!
- News
Assembly Elections: ರಾಜಸ್ಥಾನದ ಪವಿತ್ರ ಅಜ್ಮೀರ್ ಷರೀಫ್ ದರ್ಗಾಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ
- Automobiles
ಭಾರತದಲ್ಲಿ ಎಲ್ಲರೂ ಕಾಯುತ್ತಿದ್ದ ಹ್ಯುಂಡೈ ಔರಾ ಫೇಸ್ಲಿಫ್ಟ್ ಬಿಡುಗಡೆ: ಎಂತಹ ವೈಶಿಷ್ಟ್ಯಗಳಿವೆ..
- Sports
IND vs NZ T20 Series: ಟಿ20 ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ರಾಂಚಿಗೆ ಬರುವಂತೆ ಬಿಸಿಸಿಐ ಸೂಚನೆ
- Technology
ಸಾವಿರಾರು ಕೋಟಿ ಮೌಲ್ಯದ ಐಫೋನ್ ರಫ್ತು ಮಾಡಿದ ಭಾರತ; ಸ್ಯಾಮ್ಸಂಗ್ಗೆ ಹಿನ್ನಡೆ!
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ನೂರು ಕೋಟಿಗೂ ಹೆಚ್ಚು ಬಜೆಟ್ ಸುರಿದು ಮುಖಭಂಗ ಅನುಭವಿಸಿದ ಚಿತ್ರಗಳಿವು!
2022 ಭಾರತ ಸಿನಿಮಾ ಇಂಡಸ್ಟ್ರಿಗೆ ಕೊರೊನಾ ಬಳಿಕ ಕಮ್‌ಬ್ಯಾಕ್ ಸಿಕ್ಕ ವರ್ಷ. ಕಳೆದೆರಡು ವರ್ಷಗಳಲ್ಲಿ ಲಾಕ್ ಡೌನ್ ಹಾಗೂ 50% ಜನರಿಗೆ ಮಾತ್ರ ಚಿತ್ರಮಂದಿರಗಳಿಗೆ ಪ್ರವೇಶ ಎಂಬ ನಿಯಮಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಚಿತ್ರರಂಗಗಳು ಈ ವರ್ಷ ಯಾವುದೇ ಲಾಕ್ ಡೌನ್ ತಲೆನೋವಿಲ್ಲದೇ ಪುಟಿದೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಈ ವರ್ಷ ದಕ್ಷಿಣ ಭಾರತ ಚಿತ್ರರಂಗಗಳು ಬಾಲಿವುಡ್ ಚಿತ್ರರಂಗವನ್ನೇ ಮೀರಿಸಿ ಅಬ್ಬರಿಸಿವೆ.
ವರ್ಷದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಸೌತ್ ಸಿನಿಮಾಗಳೇ ಆವರಿಸಿಕೊಂಡಿವೆ. ಕೊರೊನಾ ಲಾಕ್ ಡೌನ್ ಭಯ ದೂರಾದರೂ ಸಹ ಬಾಯ್‌ಕಾಟ್ ಭಯ ಬಾಲಿವುಡ್ ಚಿತ್ರರಂಗವನ್ನು ಈ ವರ್ಷ ನಡುಗಿಸಿಬಿಟ್ಟಿದೆ. ಆಮೀರ್ ಖಾನ್ ರೀತಿಯ ಸ್ಟಾರ್ ನಟನ ಚಿತ್ರವೇ ಬಾಯ್‌ಕಾಟ್ ಅಭಿಯಾನಕ್ಕೆ ಸಿಲುಕಿ ಮಕಾಡೆ ಮಲಗಿ ನಷ್ಟ ಅನುಭವಿಸಿದೆ.
ಹೀಗೆ ಈ ವರ್ಷ ತತ್ತರಿಸಿದ ಬಾಲಿವುಡ್ ಚಿತ್ರರಂಗದ ಪೈಕಿ ಗೆದ್ದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸೋತ ಚಿತ್ರಗಳ ಹಿಂಡೇ ಇದೆ. ಅದರಲ್ಲಿಯೂ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಬಜೆಟ್ ಆಗಿ ಸುರಿದು ಹಾಕಿದ್ದ ಬಂಡವಾಳದಷ್ಟು ಕೂಡ ಚಿತ್ರ ಗಳಿಸದ ಕಾರಣ ಕೈಸುಟ್ಟುಕೊಂಡಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೇ ಈ ಪಟ್ಟಿಯಲ್ಲಿ ಸೌತ್ ಚಿತ್ರಗಳೂ ಸಹ ಸೇರಿವೆ. ಹೀಗೆ ನೂರು ಕೋಟಿಗೂ ಅಧಿಕ ಹಣವನ್ನು ಬಂಡವಾಳವನ್ನಾಗಿ ಹೊಂದಿ ನಂತರ ತನ್ನ ಬಜೆಟ್‌ನಷ್ಟೂ ಕೂಡ ಗಳಿಸದೆಯೇ ವಿಫಲವಾದ ಚಿತ್ರಗಳು ಯಾವುವು ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

ನೂರು ಕೋಟಿಗೂ ಹೆಚ್ಚು ಬಜೆಟ್ ಹೊಂದಿ ಅದಕ್ಕಿಂತ ಕಡಿಮೆ ಗಳಿಸಿದ ಬಾಲಿವುಡ್ ಚಿತ್ರಗಳು
ರನ್ ವೇ ( ಹಿಂದಿ ) - ಜಜೆಟ್ 105 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 53 ಕೋಟಿ ರೂಪಾಯಿಗಳು
ಶಂಷೆರಾ ( ಹಿಂದಿ ) - ಜಜೆಟ್ 150 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 65 ಕೋಟಿ ರೂಪಾಯಿಗಳು
ಬಚ್ಚನ್ ಪಾಂಡೆ ( ಹಿಂದಿ ) - ಜಜೆಟ್ 130 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 73 ಕೋಟಿ ರೂಪಾಯಿಗಳು
ಸಾಮ್ರಾಟ್ ಪೃಥ್ವಿರಾಜ್ ( ಹಿಂದಿ ) - ಜಜೆಟ್ 225 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 91 ಕೋಟಿ ರೂಪಾಯಿಗಳು
ರಾಮ್ ಸೇತು ( ಹಿಂದಿ ) - ಜಜೆಟ್ 140 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 96 ಕೋಟಿ ರೂಪಾಯಿಗಳು
ಲಾಲ್ ಸಿಂಗ್ ಛಡ್ಡಾ ( ಹಿಂದಿ ) - ಜಜೆಟ್ 180 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 133 ಕೋಟಿ ರೂಪಾಯಿಗಳು
ವಿಕ್ರಮ್ ವೇದಾ ( ಹಿಂದಿ ) - ಜಜೆಟ್ 150 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 135 ಕೋಟಿ ರೂಪಾಯಿಗಳು

ನೂರು ಕೋಟಿಗೂ ಹೆಚ್ಚು ಬಜೆಟ್ ಹೊಂದಿ ಅದಕ್ಕಿಂತ ಕಡಿಮೆ ಗಳಿಸಿದ ಟಾಲಿವುಡ್ ಚಿತ್ರಗಳು
ರಾಧೆ ಶ್ಯಾಮ್ ( ತೆಲುಗು ) - ಜಜೆಟ್ 300 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 177 ಕೋಟಿ ರೂಪಾಯಿಗಳು
ಆಚಾರ್ಯ ( ತೆಲುಗು ) - ಜಜೆಟ್ 140 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 76 ಕೋಟಿ ರೂಪಾಯಿಗಳು
ಆಚಾರ್ಯ ( ತೆಲುಗು ) - ಜಜೆಟ್ 105 ಕೋಟಿ ರೂಪಾಯಿ ಹಾಗೂ ಕಲೆಕ್ಷನ್ 88 ಕೋಟಿ ರೂಪಾಯಿಗಳು

ಅಕ್ಷಯ್ ಕುಮಾರ್ ಫ್ಲಾಪ್ ಸ್ಟಾರ್!
ಇನ್ನು ಈ ಮೇಲಿನ ಪಟ್ಟಿಯನ್ನು ಗಮನಿಸಿದರೆ ಈ ವರ್ಷದ ಫ್ಲಾಪ್ ಸ್ಟಾರ್ ಅಕ್ಷಯ್ ಕುಮಾರ್ ಎಂಬುದು ನಿಖರವಾಗಿ ತಿಳಿಯುತ್ತದೆ. ಜನ ಮೆಚ್ಚುವಂತ ಕಂಟೆಂಟ್ ಇರುವ ಚಿತ್ರಗಳನ್ನು ನೀಡುವಲ್ಲಿ ವಿಫಲರಾದ ಅಕ್ಷಯ್ ಕುಮಾರ್ ಸೋತು ಸುಣ್ಣವಾಗಿದ್ದಾರೆ. ಬಚ್ಚನ್ ಪಾಂಡೆ, ರಾಮ್ ಸೇತು ಹಾಗೂ ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳು ನೂರು ಕೋಟಿಗೂ ಹೆಚ್ಚು ಮೊತ್ತದಲ್ಲಿ ನಿರ್ಮಾಣವಾಗಿ ಅಡ್ಡಡ್ಡ ಮಲಗಿವೆ. ಅದರಲ್ಲಿಯೂ ಸಾಮ್ರಾಟ್ ಪೃಥ್ವಿರಾಜ್ ಸೋಲು ಮಾತ್ರ ಅಕ್ಷಯ್ ಕುಮಾರ್ ಕೆರಿಯರ್‌ನ ದೊಡ್ಡ ಸೋಲುಗಳಲ್ಲಿ ಒಂದಾಗಿದೆ.