For Quick Alerts
  ALLOW NOTIFICATIONS  
  For Daily Alerts

  ಕೋರ್ಟ್ ತೀರ್ಪಿಗೆ ಕುಸಿದು ಬಿದ್ದ ಸಲ್ಲು ಪ್ರೇಯಸಿ ಲುಲಿಯಾ.!

  By ಸೋನು ಗೌಡ
  |

  2002ರ ಹಿಟ್ ಅಂಡ್ ರನ್ ಕೇಸ್ ನಿಂದ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಖುಲಾಸೆಗೊಂಡಿದ್ದು, ಈ ಸುದ್ದಿ ಕೇಳಿದ ಸಲ್ಲೂ ಪ್ರಿಯತಮೆ ಎಂದು ಹೇಳಿಕೊಳ್ಳಲಾಗುತ್ತಿರುವ ರೂಮೆನಿಯನ್ ಚೆಲುವೆ ಲುಲಿಯಾ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?.

  ಸಲ್ಮಾನ್ ಖಾನ್ ತೀರ್ಪಿನ ಕುರಿತು ಮುಂಬೈನಲ್ಲಿರುವ ಗೆಳಯರೊಬ್ಬರ ಮನೆಯಲ್ಲಿ ಟಿವಿ ನೋಡುತ್ತಿದ್ದ ಮಾಧ್ಯಮ ನಿರೂಪಕಿ ಲುಲಿಯಾ, ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಸಂತಸ ತಡೆಯಲಾಗದೇ ಕುಸಿದು ಬಿದ್ದು, ನಟ ಸಲ್ಮಾನ್ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರಂತೆ.[ಚಿತ್ರಗಳು: ಭಾವಿ 'ಮಿಸ್ ಯೂನಿವರ್ಸ್' ಜೊತೆ ಸಲ್ಮಾನ್ ಖಾನ್ ಪೋಸ್..!]

  ಭಾರತದ ಸಂವಿಧಾನ ಮತ್ತು ಕಾನೂನು ಪ್ರಕ್ರಿಯೆಯ ಗಂಧಗಾಳಿ ಗೊತ್ತಿಲ್ಲದ ರೂಮೇನಿಯನ್ ಚೆಲುವೆ ಲುಲಿಯಾಗೆ ಪ್ರಕರಣದ ತೀರ್ಪು ಎಲ್ಲಿ ಸಲ್ಮಾನ್ ಖಾನ್ ವಿರುದ್ಧ ಬರುತ್ತದೋ ಎಂದು ಭಾರಿ ಚಿಂತೆ ಆಗಿತ್ತಂತೆ. ಹೀಗಾಗಿಯೇ ತನ್ನ ತವರಿಗೂ ತೆರಳದೇ ಭಾರತದಲ್ಲಿಯೇ ಉಳಿದುಕೊಂಡಿದ್ದರು.

  ಈ ಪ್ರಕರಣದಿಂದ ಸಲ್ಮಾನ್ ಖಾನ್ ದೋಷಮುಕ್ತರಾಗಲಿ ಎಂದು ನಿನ್ನೆ ಬೆಳಗ್ಗಿನಿಂದಲೇ ದೇವರಲ್ಲಿ ಬೇಡುತ್ತಿದ್ದರಂತೆ, ಅದರಂತೆ ನಿನ್ನೆ ಮಧ್ಯಾಹ್ನ ತೀರ್ಪು ಹೊರಬಿದ್ದಿದ್ದು, ಭಾಯ್ ಜಾನ್ ಈ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.[ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ಗೆ ಸಕತ್ ರಿಲೀಫ್]

  ಒಟ್ಟಾರೆ ದಶಕಗಳಿಂದ ಬಿಟೌನ್ ನಟ ಸಲ್ಮಾನ್ ಖಾನ್ ಬೆನ್ನು ಹಿಡಿದಿದ್ದ ಪ್ರಕರಣವೊಂದು ಕಳಚಿಕೊಂಡಿದ್ದು, ಬಂಧನ ಭೀತಿಯಿಂದ ತಮ್ಮ ಗೆಳೆಯ ಪಾರಾಗಿದ್ದಕ್ಕೆ ರುಮೇನಿಯಾ ಬೆಡಗಿ ಸಖತ್ ಖುಷ್ ಆಗಿದ್ದಾರೆ.[ಲೂಲಿಯಾ ಬಂಧವನ್ನೂ ಕಳಚಿಕೊಂಡ ಸಲ್ಮಾನ್?]

  ಇದೇ ಖುಷಿಯಲ್ಲಿ ಇನ್ನಾದರೂ ನಟ ಸಲ್ಮಾನ್ ಖಾನ್ ತಮ್ಮ ಮದುವೆ ವಿಚಾರವನ್ನು ಎಲ್ಲರೆದುರು ಘೋಷಣೆ ಮಾಡಿ ಅಂತೆ-ಕಂತೆಗಳಿಗೆ ತೆರೆ ಎಳೆಯುತ್ತಾರ ಎಂದು ಕಾದು ನೋಡಬೇಕು.

  English summary
  Bollywood Actor Salman Khan was acquitted of all charges by the Bombay High Court and while all his fans and followers celebrated this verdict, his ladylove Iulia actually broke down. A source close to the star reveals, “Iulia feels a lot for Salman, but being from outside India she doesn’t know or understand the laws of the country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X