For Quick Alerts
  ALLOW NOTIFICATIONS  
  For Daily Alerts

  ನಟ ಅರ್ಜುನ್ ಕಪೂರ್ ಪ್ರೇಯಸಿ ಮಲೈಕಾ ಅರೋರಾ ವಾಸವಿದ್ದ ಕಟ್ಟಡ ಸೀಲ್

  |

  ಲಾಕ್ ಡೌನ್ ಸಡಿಲಿಕೆ ಆಗಿದೆ. ಸುಮಾರು 2 ತಿಂಗಳಿಂದ ಮನೆಯಲ್ಲಿಯೆ ಇದ್ದ ಜನ ನಿಧಾನವಾಗಿ ಹೊರ ಬರುತ್ತಿದ್ದಾರೆ. ಮುಂಬೈ ನಗರ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಈ ನಡುವೆಯೂ ಬಾಲಿವುಡ್ ಕಲಾವಿದರು ಮುಂಬೈ ನಗರ ಸುತ್ತಾಡುತ್ತಿದ್ದಾರೆ. ತಿಂಗಳುಗಳ ಬಳಿಕ ಕಲಾವಿದರು ಮನೆಯಿಂದ ಹೊರಬಂದು ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  ಆದರೆ ಬಾಲಿವುಡ್ ನಟ ಅರ್ಜುನ್ ಕಪೂರ್ ಗರ್ಲ್ ಫ್ರೆಂಡ್ ಅಂತಾನೆ ಕರೆಸಿಕೊಳ್ಳುತ್ತಿರುವ ನಟಿ ಮಲೈಕಾ ಅರೋರಾ ಮಾತ್ರ ಮನೆಯಿಂದ ಹೊರಬರದಂತಾಗಿದೆ. ಹೌದು, ಮಲೈಕಾ ಮುಂಬೈನ ಬಾಂದ್ರಾ ನಿವಾಸ ಸೀಲ್ ಆಗಿದೆ. ಮಲೈಕಾ ವಾಸವಿದ್ದ ಬಾಂದ್ರಾ ಕಟ್ಟದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಈಗ ಇಡೀ ಕಟ್ಟಡವನ್ನು ಸೀಲ್ ಮಾಡಲಾಗಿದೆ.

  ತನಗಿಂತಲೂ 12 ವರ್ಷ ಹಿರಿಯ ಪ್ರೇಯಸಿ ಜೊತೆ ಮದುವೆಗೆ ಅರ್ಜುನ್ ಕಪೂರ್ ಸಜ್ಜು!ತನಗಿಂತಲೂ 12 ವರ್ಷ ಹಿರಿಯ ಪ್ರೇಯಸಿ ಜೊತೆ ಮದುವೆಗೆ ಅರ್ಜುನ್ ಕಪೂರ್ ಸಜ್ಜು!

  ಇತ್ತೀಚಿಗಷ್ಟೆ ನಟ ವಿಕ್ಕಿ ಕೌಸಲ್ ವಾಸವಿದ್ದ ಕಟ್ಟಡವನ್ನು ಸೀಲ್ ಮಾಡಲಾಗಿತ್ತು. ಇನ್ನೂ ಬೋನಿ ಕಪೂರ್ ಮನೆಯಲ್ಲಿ ಕೆಲಸದವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಬೋನಿ ಮತ್ತು ಮಕ್ಕಳು 14 ದಿನಗಳ ಕಾಲ ಮನೆಯಲ್ಲಿಯೆ ಕ್ವಾರಂಟೈನ್ ಆಗಿದ್ದರು.

  ಈಗ ಮಲೈಕಾ ವಾಸವಿದ್ದ ಕಟ್ಟಡ ಸಹ ಸೀಲ್ ಆಗಿದ್ದು, ಈಗ ಸ್ಯಾನಿಟೈಸ್ ಮಾಡಲಾಗಿದೆ. ಲಾಕ್ ಡೌನ್ ನಲ್ಲಿ ಮಲೈಕಾ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಮಗ ಅರ್ಹಾನ್ ಜೊತೆ ವಾಸವಿದ್ದ ಮಲೈಕಾ ಯೋಗ, ಅಡಿಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಮತ್ತೆ ಮನೆ ಸೀಲ್ ಆಗಿರುವ ಕಾರಣ ಮತ್ತೆ 14 ದಿನಗಳ ಕಾಲ ಮನೆಯಿಂದ ಹೊರಬರದಂತೆ ಆಗಿದೆ.

  English summary
  Actress Malaika Arora building sealed after Resident tests positive for Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X