For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮಗಳ ಎದುರು ಆತಂಕ ವ್ಯಕ್ತಪಡಿಸಿದ ಮಲ್ಲಿಕಾ ಶೆರಾವತ್

  By Bharath Kumar
  |

  ಬಾಲಿವುಡ್ ನಟಿ ಮಲ್ಲಿಕಾ ಶರೆವಾತ್ ದೇಶದಲ್ಲಿ ಆಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ''ಮಹಾತ್ಮ ಗಾಂಧಿಯ ಪುಣ್ಯ ಭೂಮಿ ಇಂದು ಅತ್ಯಾಚಾರಿಗಳ ದೇಶವಾಗುತ್ತಿದೆ'' ಎಂದು ಆಕ್ರೋಶಗೊಂಡಿದ್ದಾರೆ.

  'ದಾಸ್ ದೇವ್' ಚಿತ್ರದ ವಿಶೇಷ ಪ್ರದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾ ಶೆರಾವತ್ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಆತಂಕಗೊಂಡಿದ್ದಾರೆ.

  ವರ್ಷದಿಂದ ಬಾಡಿಗೆ ಕಟ್ಟದ ನಟಿಯನ್ನ ಮನೆಯಿಂದ ಹೊರ ಹಾಕಿದ ಮಾಲೀಕವರ್ಷದಿಂದ ಬಾಡಿಗೆ ಕಟ್ಟದ ನಟಿಯನ್ನ ಮನೆಯಿಂದ ಹೊರ ಹಾಕಿದ ಮಾಲೀಕ

  ''ಮಹಿಳೆ ಹಾಗೂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ನಿಜಕ್ಕೂ ನಾಚಿಕೆಗೇಡು. ಮಾಧ್ಯಮಗಳ ನಮ್ಮ ದೇಶದಲ್ಲಿ ಹೆಚ್ಚು ಶಕ್ತಿಯುತವಾಗಿದೆ. ಹೀಗಾಗಿ, ಇಂತಹ ಪ್ರಕರಣಗಳ ಬೆಳಕಿಗೆ ಬರುತ್ತಿದೆ. ಮಾಧ್ಯಮಗಳ ಮೇಲೆ ನಂಬಿಕೆ ಕೂಡ ಹೆಚ್ಚಾಗುತ್ತಿದೆ'' ಎಂದಿದ್ದಾರೆ.

  ''ಒಂದು ವೇಳೆ ಮಾಧ್ಯಮಗಳು ಇಲ್ಲವಾಗಿದ್ದಲ್ಲಿ ಇಂತಹ ಪ್ರಕರಣಗಳು ಯಾವುದು ಬಹಿರಂಗವಾಗುತ್ತಿರಲಿಲ್ಲ. ಆದ್ದರಿಂದ ಮಾಧ್ಯಮಗಳಿಗೆ ವಿಶೇಷವಾದ ಧನ್ಯವಾದಗಳು'' ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಏಪ್ರಿಲ್ 22ರಂದು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದರು. ಈ ಬಗ್ಗೆ ಮಲ್ಲಿಕಾ ಸಂತಸ ವ್ಯಕ್ತಪಡಿಸಿದ್ದಾರೆ.

  ಇತ್ತೀಚಿನ ವರ್ಷಗಳಲ್ಲಿ ಮಲ್ಲಿಕಾ ಶರೆವಾತ್ ಹೆಚ್ಚಾಗಿ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. 2017ರಲ್ಲಿ ಕೊನೆಯದಾಗಿ 'ಜೀನತ್' ಸಿನಿಮಾದಲ್ಲಿ ಅಭಿನಯಿಸಿದ್ದರು.

  English summary
  Actress Mallika Sherawat has expressed her displeasure over increasing number of rape cases in India. She has said that from the land of Mahatma Gandhi, the country had become a land of gang rapists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X