»   » ಇಸ್ಲಾಂ ಸ್ವೀಕರಿಸಿದ ಮಮತಾ ಕುಲಕರ್ಣಿ ಫ್ಲ್ಯಾಶ್ ಬ್ಯಾಕ್

ಇಸ್ಲಾಂ ಸ್ವೀಕರಿಸಿದ ಮಮತಾ ಕುಲಕರ್ಣಿ ಫ್ಲ್ಯಾಶ್ ಬ್ಯಾಕ್

Posted By: ಉದಯರವಿ
Subscribe to Filmibeat Kannada

ಮತ, ಧರ್ಮ, ಭಾಷೆ ವಿಚಾರದಲ್ಲಿ ಎಲ್ಲರಿಗೂ ಅವರದೇ ಆದಂತಹ ಸ್ವಾತಂತ್ರ್ಯವಿದೆ. ಇಷ್ಟವಾದ ಧರ್ಮವನ್ನು ಸ್ವೀಕರಿಸಿ ಅದರಂತೆ ನಡೆದುಕೊಳ್ಳುವ ಹಕ್ಕು ಎಲ್ಲರಿಗೂ ಕೊಡಲಾಗಿದೆ. ಆದರೆ ಬಲವಂತ ಮತಾಂತರದ ಮಾತು ಬಂದಾಗ ಕೋಮು ಗಲಭೆ, ಘರ್ಷಣೆಗಳು ತಪ್ಪಿದ್ದಲ್ಲ.

ಇನ್ನೂ ಕೆಲವರು ಮತಾಂತರವನ್ನು ಕಾನೂನು ಲಾಭಕ್ಕೆ ಬಳಸಿಕೊಳ್ಳುವುದೂ ಉಂಟು. ಒಂದು ಧರ್ಮದಲ್ಲಿ ಕಾನೂನು ತೊಡಕುಗಳು ಎದುರಾದರೆ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಖ್ಯಾತನಾಮರು ಮತಾಂತರವಾಗುತ್ತಿರುವುದು ಇತ್ತೀಚೆಗೆ ಹೊಸ ಟ್ರೆಂಡ್. [ಇಳಯರಾಜಾ ಪುತ್ರ ಇಸ್ಲಾಂಗೆ ಮತಾಂತರ]

ಕಳೆದ ವರ್ಷ ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರ ಹಾಗೂ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಪಟ್ಟಿಗೆ ಸೇರಿದವರಲ್ಲಿ ಒಂದು ಕಾಲದ ಬಾಲಿವುಡ್ ತಾರೆ ಮಮತಾ ಕುಲಕರ್ಣಿ ಸಹ ಒಬ್ಬರು. ಸ್ಲೈಡ್ ನಲ್ಲಿ ಓದಿ ಒಂದು ಫ್ಲ್ಯಾಶ್ ಬ್ಯಾಕ್ ಕಥೆ.

ಸತತ 11 ವರ್ಷಗಳ ಕಾಲ ಹವಾ ಚಲಾಯಿಸಿದ ತಾರೆ

ತೊಂಬತ್ತರ ದಶಕದಲ್ಲಿ ತನ್ನ ಹಾಟ್ ಅಂಡ್ ಸೆಕ್ಸಿ ಮೈಕಟ್ಟಿನಿಂದ ಚಿತ್ರರಸಿಕರ ಎದೆಗೆ ಕೊಳ್ಳಿ ಇಟ್ಟ ಬೆಡಗಿ ಮಮತಾ ಕುಲಕರ್ಣಿ (42). ಸತತ ಹನ್ನೊಂದು ವರ್ಷಗಳ ಕಾಲ ಬಾಲಿವುಡ್ ನಲ್ಲಿ ತನ್ನ ಹವಾ ಚಲಾಯಿಸಿದ ಖ್ಯಾತಿ ಮಮತಾಗೆ ಸಲ್ಲುತ್ತದೆ. ಬಳಿಕ ಹೋಟೆಲ್ ಬಿಜಿನೆಸ್ ಗೆ ಇಳಿದ ಮಮತಾ ಬೆಳ್ಳಿಪರದೆಯಿಂದ ಮಾಯಾಜಿಂಕೆಯಂತೆ ಮಾಯವಾದರು.

ತನ್ನಿಷ್ಟದಂತೆ ಇಸ್ಲಾಂಗೆ ಮತಾಂತರವಾಗಿದ್ದೇನೆ

ಬೆಳ್ಳಿಪರದೆಯಿಂದ ದೂರ ಸರಿದ ಮೇಲೆ ಅವರು ತಮ್ಮ ಸಂಪೂರ್ಣ ಸಮಯವನ್ನು ತನ್ನ ಹೋಟೆಲ್ ಬಿಜಿನೆಸ್ ಮೇಲೆಯೇ ಕೇಂದ್ರೀಕರಿಸಿದರು. ಕಳೆದ ವರ್ಷ ಅವರು ಇಸ್ಲಾಂಗೆ ಮತಾಂತರಗೊಂಡಿದ್ದು, ತನ್ನಿಷ್ಟದ ಪ್ರಕಾರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆಯೇ ಹೊರತು ಯಾರ ಬಲವಂತದಿಂದ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ತನ್ನ ಪತಿಗಾಗಿಯೇ ಈ ಮತಾಂತರ ನಿರ್ಣಯ

ಮಮತ ಜೊತೆಗೆ ಅವರ ಪತಿ ವಿಕಿ ಗೋಸ್ವಾಮಿ (53) ಸಹ ಇಸ್ಲಾಂ ಮತ ಸ್ವೀಕರಿಸಿದ್ದಾರೆ. ತನ್ನ ಪತಿಗಾಗಿಯೇ ತಾವು ಈ ನಿರ್ಣಯ ತೆಗೆದುಕೊಂಡಿದ್ದಾಗಿ ಮಮತಾ ಹೇಳಿಕೊಂಡಿದ್ದರು. ಆಗ ಮಮತಾ ಕುಲಕರ್ಣಿ ಹಾಗೂ ವಿಕಿ ಗೋಸ್ವಾಮಿ ನಡುವೆ ಬಹಳ ಕಾಲದಿಂದ ಪ್ರೇಮ ವ್ಯವಹಾರ ನಡೆಯುತ್ತಿತ್ತು.

ಇಸ್ಲಾಂಗೆ ಮತಾಂತರ ಶಿಕ್ಷೆ ಮೊಟಕು

1997ರಲ್ಲಿ ವಿಕಿ ಗೋಸ್ವಾಮಿ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪೊಲೀಸರು ಮಾದಕದ್ರವ್ಯ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಿದರು. ಈ ಪ್ರಕರಣದಲ್ಲಿ ಅವರಿಗೆ 25 ವರ್ಷಗಳ ಕಾರಾಗಾರ ಶಿಕ್ಷೆ ಜಾರಿಯಾಯಿತು. ಬಳಿಕ ಅವರು ಇಸ್ಲಾಂಗೆ ಮತಾಂತರಗೊಂಡ ಬಳಿಕ ಶಿಕ್ಷೆಯನ್ನು ಕಡಿತಗೊಳಿಸಿದ 2012ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.

2013ರಲ್ಲಿ ಇಬ್ಬರೂ ಮದುವೆಯೂ ಆಗಿದ್ದಾರೆ

ವಿಕಿ ಗೋಸ್ವಾಮಿ ಜೈಲು ಪಾಲಾದ ಬಳಿಕ ಅವರ ಹೋಟೆಲ್ ಬಿಜಿನೆಸನ್ನು ಮಮತಾ ಕುಲಕರ್ಣಿ ನಿಭಾಯಿಸುತ್ತಿದ್ದರು. ಅವರು ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಕಳೆದ ವರ್ಷ 2013ರಲ್ಲಿ ಇಬ್ಬರೂ ಮದುವೆಯೂ ಆಗಿದ್ದಾರೆ. ಸದ್ಯಕ್ಕೆ ಈ ದಂಪತಿ ಕೆನ್ಯಾದ ನೈರೋಬಿಯಲ್ಲಿ ಹಾಯಾಗಿ ತಮ್ಮ ಉಳಿದ ಜೀವಮಾನವನ್ನು ಕಳೆಯುತ್ತಿದ್ದಾರೆ.

ಕನ್ನಡದ ವಿಷ್ಣುವಿಜಯ ಚಿತ್ರದಲ್ಲಿ ಅಭಿನಯ

ಕನ್ನಡದ 'ವಿಷ್ಣು ವಿಜಯ' (1993) ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಮಮತಾ ಕುಲಕರ್ಣಿ ಈಗೇನು ಮಾಡುತ್ತಿದ್ದಾರೆ? ಅವರೆಲ್ಲಿದ್ದಾರೆ? ಎಂಬ ಕುತೂಹಲ ತಣಿಸುವ ಫ್ಲ್ಯಾಶ್ ಬ್ಯಾಕ್ ಕಥನ ಇದು.

English summary
Former controversial Bollywood actress Mamta Kulkarni, who acted in a number of hit movies during the 90s, has reportedly converted to Islam. Kulkarni married 52-year-old Goswami, after a long relationship, when he was in prison in Dubai. Here is a flashback.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada