»   » ಹೃತಿಕ್ ರೋಷನ್ ಚಿತ್ರದಲ್ಲಿ ಮಂಗಳೂರು ಚೆಲುವೆ

ಹೃತಿಕ್ ರೋಷನ್ ಚಿತ್ರದಲ್ಲಿ ಮಂಗಳೂರು ಚೆಲುವೆ

Posted By:
Subscribe to Filmibeat Kannada

ಈಗಾಗಲೆ ಬಾಲಿವುಡ್ ಬೆಳ್ಳಿಪರದೆ ಮೇಲೆ ಹಲವಾರು ಕರಾವಳಿ ನಕ್ಷತ್ರಗಳು ಮಿನುಗುತ್ತಿವೆ. ನಮ್ಮ ಕರಾವಳಿಗೂ ಮುಂಬೈನ ಬಾಲಿವುಡ್ ಗೂ ಇನ್ನಿಲ್ಲದ ನಂಟುಂಟು. ಇದೀಗ ಮತ್ತೊಬ್ಬ ಚೆಲುವೆ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ ಅಶುತೋಷ್ ಗೋವರೀಕರ್ ಅವರ ಚಿತ್ರಕ್ಕೆ ಮಂಗಳೂರು ಮೂಲದ ಪೂಜಾ ಹೆಗಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಹೀರೋ ಹ್ಯಾಂಡಸಮ್ ಬಾಯ್ ಹೃತಿಕ್ ರೋಷನ್. ಚಿತ್ರದ ಹೆಸರು 'ಮೊಹೆಂಜದಾರೊ'. [ಬಾಲಿವುಡ್ ನಲ್ಲಿ ಕರಾವಳಿ ನಕ್ಷತ್ರಗಳ ಹೊಳಪು]

Mangalore based Pooja Hegde to act with Hrithik Roshan

ಹಿಂದೂ ನಾಗರೀಕತೆಯ ಪ್ರಾಚೀನ ಸ್ಥಳದ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹೃತಿಕ್ ಜೊತೆ ಕನ್ನಡದ ಬೆಡಗಿ ಪೂಜಾ ಹೆಗಡೆ ನಾಯಕಿ. ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದ್ದು, ತಮ್ಮ ಚಿತ್ರಕ್ಕೆ ಈ ಬೆಡಗಿ ಸಿಕ್ಕಿರುವ ಬಗ್ಗೆ ನಿರ್ದೇಶಕ ಅಶುತೋಷ್ ಅವರು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಸಹಜ ಸೌಂದರ್ಯದ ಈ ಬೆಡಗಿ ತಮ್ಮ ಚಿತ್ರಕಥೆಗೆ ಒಪ್ಪುವಂತೆ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಐದು ಅಡಿ ಒಂಬತ್ತು ಇಂಚು ಎತ್ತರ ಇರುವ ಪೂಜಾ ಅವರು ಈ ಹಿಂದೆ 2010ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ತಮಿಳಿನ 'ಮುಗಮೂಡಿ' ಚಿತ್ರದಲ್ಲೂ ತಮ್ಮ ನಟನಾ ಕೌಶಲ್ಯ ತೋರಿದ್ದಾರೆ.

'ಲಗಾನ್' ಚಿತ್ರದ ಮೂಲಕ ಗ್ರೇಸಿ ಸಿಂಗ್, ಸ್ವೇಡ್ಸ್ ಚಿತ್ರದ ಮೂಲಕ ಗಾಯತ್ರಿ ಜೋಷಿಯಂತಹ ಅದ್ಭುತ ಬೆಡಗಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅಶುತೋಷ್ ಗೋವರೀಕರ್ ಅವರಿಗೆ ಸಲ್ಲುತ್ತದೆ. ಇದೀಗ ಪೂಜಾ ಹೆಗಡೆ ಅವರು ಅವರ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪರಿಚತಿರಾಗುತ್ತಿರುವುದು ವಿಶೇಷ. ಸದ್ಯಕ್ಕೆ ನಿರ್ಮಾಣ ಹಂತದಲ್ಲಿರುವ 'ಮೊಹೆಂಜದಾರೊ' ಚಿತ್ರ ಈ ವರ್ಷಾಂತ್ಯಕ್ಕೆ ಸೆಟ್ಟೇರುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Filmmaker Ashutosh Gowariker has chosen Pooja Hegde to play the female lead in his Indus Valley civilisation-set love story Mohenjo Daro. He believes her “natural” acting prowess and “elegance” make her a perfect fit for the role opposite Hrithik Roshan.
Please Wait while comments are loading...