For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್ ಅಭಿಮಾನಿಗಳಿಗೆ ಮತ್ತೆ ನಿರಾಸೆ

  |

  ಶಾರೂಖ್ ಖಾನ್ ಅಭಿನಯಿಸಿದ್ದ 'ಜೀರೋ' ಸಿನಿಮಾ ಸೋಲು ಅನುಭವಿಸಿತು. ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಾರೂಖ್ ಗೆ ಇದು ಸಕ್ಸಸ್ ಕೊಟ್ಟಿಲ್ಲ. ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಹಿನ್ನಡೆ ತಂದುಕೊಟ್ಟಿತ್ತು. ಇದಾದ ಬಳಿಕ ಕಿಂಗ್ ಖಾನ್ ಯಾವ ಚಿತ್ರ ಮಾಡ್ತಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದುಕೊಂಡಿದೆ.

  ಈ ಮಧ್ಯೆ ಡಾನ್ 3 ಸಿನಿಮಾ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಈಗಾಗಲೇ ಡಾನ್ ಮತ್ತು ಡಾನ್ 2 ಸಿನಿಮಾ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದ ಬಾದ್ ಶಾ ಡಾನ್ 3 ಮಾಡ್ತಾರೆ ಎನ್ನಲಾಗುತ್ತಿದೆ. ಆ ಕಡೆ ನಿರ್ಮಾಪಕರು ಮಾತ್ರ ಸದ್ಯಕ್ಕೆ ಡಾನ್ ಆಗಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.

  ಕೊಡಗಿನ ಬಗ್ಗೆ ಯೋಚನೆ ಮಾಡಲಿಲ್ಲ ಈ 'ಸ್ಟಾರ್'ಗಳು ಯಾಕೆ.?

  ಹೌದು, ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಡಾನ್ ಸಿರೀಸ್ ನಿರ್ಮಾಪಕ ರಿತೇಶ್ ಸಿದ್ವಾನಿ ''ಡಾನ್ ಸ್ಕ್ರಿಪ್ಟ್ ಮೇಲೆ ಕೆಲಸ ಆಗ್ತಿದೆ, ಬಟ್, ಯಾವಾಗ ಆರಂಭವಾಗುತ್ತೋ ಗೊತ್ತಿಲ್ಲ'' ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

  ಕಿಂಗ್ ಖಾನ್ ಶಾರುಖ್ 'ಜೀರೋ' ವಿರುದ್ಧ ಕ್ರಿಮಿನಲ್ ಕೇಸ್

  ನಿರ್ಮಾಪಕರು ಅಂದ್ಮೇಲೆ ಒಂದು ನಿಖರವಾದ ದಿನಾಂಕಕ್ಕೆ ಈ ಸಿನಿಮಾ ಮಾಡ್ಬೇಕು ಎಂದು ಲೆಕ್ಕಾಚಾರ ಹಾಕಿರ್ತಾರೆ. ಆದ್ರೆ, ರಿತೇಶ್ ಈ ಬಗ್ಗೆ ಸ್ಪಷ್ಟತೆ ಬಂದಿಲ್ಲ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಅನುಮಾನ ಮೂಡಿಸುತ್ತಿದೆ.

  ಮತ್ತೊಂದೆಡೆ ಶಾರೂಖ್ ಖಾನ್ ಕೂಡ ಡಾನ್ 3 ಬಗ್ಗೆ ಸದ್ಯಕ್ಕೆ ಆಸಕ್ತಿ ನೀಡಿಲ್ಲ. ಜೀರೋ ಮುಗಿಸಿ ಈಗ ರಾಕೇಶ್ ಶರ್ಮಾ ಅವರ ಬಯೋಪಿಕ್ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಡಾನ್ ಸೀಕ್ವೆಲ್ ಸದ್ಯಕ್ಕೆ ಬರಿ ಕನಸಷ್ಟೇ.

  English summary
  Producer Ritesh Sidhwani spoke candidly about the much-awaited third part, Don 3. What he said is bound to disappoint fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X