»   » ಶ್ರದ್ಧಾ ಶ್ರೀನಾಥ್ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ ಆರಂಭ

ಶ್ರದ್ಧಾ ಶ್ರೀನಾಥ್ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ ಆರಂಭ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಪಯಣ ಆರಂಭಿಸಿದ್ದ ಶ್ರದ್ಧಾ ಶ್ರೀನಾಥ್ ನಂತರ ತಮಿಳು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ, ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿರುವ ಕನ್ನಡ ನಟಿ ಬಿ-ಟೌನ್ ನಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಶ್ರದ್ಧಾ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ 'ಮಿಲನ್ ಟಾಕೀಸ್' ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಶ್ರದ್ಧಾ ಈ ಮೂಲಕ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Milan Talkies movie shooting starts

ಬಾಲಿವುಡ್ ಜನಪ್ರಿಯ ನಿರ್ದೇಶಕ ತಿಗ್ಮಾಂಶು ದುಲಿಯಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಲಕ್ನೌನಲ್ಲಿರುವ 'ಮಿಲನ್ ಟಾಕೀಸ್' ಎದುರು ಚಿತ್ರಕ್ಕೆ ಶುಭಾರಂಭ ಮಾಡಿದ್ದಾರೆ. ಚಿತ್ರದ ನಾಯಕ-ನಾಯಕಿ ಹಾಗೂ ನಿರ್ದೇಶಕರು 'ಮಿಲನ್ ಟಾಕೀಸ್' ಬಳಿ ನಿಂತು ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಪ್ರೇಮಿಗಳ ದಿನಕ್ಕೆ ಸಿಹಿ ಸುದ್ದಿ ನೀಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

ಅಂದ್ಹಾಗೆ, ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿರುವ ಹಿಂದಿ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ನಾಯಕರಾಗಿದ್ದಾರೆ. ಇನ್ನುಳಿದಂತೆ ಅಯತೋಶ್ ರಾಣ, ಸಂಜಯ್ ಮಿಶ್ರಾ, ಯಶ್ ಪಾಲ್ ಶರ್ಮಾ ಸೇರಿದಂತೆ ಹಲವರು ತಾರ ಬಳಗದಲ್ಲಿದ್ದಾರೆ.

ಸೋಮವಾರದಿಂದ ಶೂಟಿಂಗ್ ಶುರು ಮಾಡಿರುವ 'ಮಿಲನ್ ಟಾಕೀಸ್' ಉತ್ತರ ಪ್ರದೇಶದಲ್ಲಿ ಹಾಗೂ ಲಕ್ನೋ ಮತ್ತು ಮಥುರಾ ನಗರಗಳಲ್ಲಿ ಚಿತ್ರೀಕರಣ ಮಾಡಲಿದೆ.

English summary
National Award winning director Tigmanshu Dhulia started shooting for his next film 'Milan Talkies' from Monday in Lucknow. The first day shoot began at the Gulab Cinema in Golaganj, in old Lucknow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X