Just In
Don't Miss!
- News
ಬೇಗೂರಿನ ಅಪಾರ್ಟ್ಮೆಂಟ್ ಬಳಿ ಚಿರತೆ, ಬೆಂಗಳೂರಿಗರೇ ಎಚ್ಚರ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪ್ರತಿಮ ಕಲೆಗಾರ ಕಿಶೋರ್ ಕೊಂಡಾಡಿದ ಟ್ವೀಟ್ ಲೋಕ
ನಟ, ಹಾಸ್ಯಗಾರ, ಕಥೆ-ಚಿತ್ರಕಥೆಗಾರ, ನಿರ್ಮಾಪಕ, ನಿರ್ದೇಶಕ, ಸಂಕಲನಗಾರ, ಹಿನ್ನೆಲೆ ಗಾಯಕ, ಗೀತ ಸಾಹಿತಿ, ಸಂಗೀತ ನಿರ್ದೇಶಕ ಹೀಗೆ ವೈವಿಧ್ಯತೆಯಲ್ಲಿ ಏಕತೆ ಮೆರೆದ ಅಪ್ರತಿಮ ಕಲೆಗಾರ ಕಿಶೋರ್ ಕುಮಾರ್ ಅವರ ಜನ್ಮದಿನ(ಆಗಸ್ಟ್ 4 )ಅಭಿಮಾನಿಗಳಿಗೆ ಹಬ್ಬವಾಗಿದೆ.
ಕನ್ನಡ ಸೇರಿದಂತೆ ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಒರಿಯಾ ಭಾಷೆಗಳಲ್ಲಿ ಕಿಶೋರ್ ತಮ್ಮ ಛಾಪು ಮೂಡಿಸಿದವರು. ಪ್ರಣಯ, ವಿಷಾದ, ವಿರಹ, ಹಾಸ್ಯ, ಚೇಷ್ಟೆ,ಭಕ್ತಿ, ಭಾವನಾತ್ಮಕ ಹೀಗೆ ನಾನಾ ರಸಗಳಲ್ಲಿ ಕಿಶೋರ್ ದನಿಯನ್ನು ಕೇಳುವ ಸೌಭಾಗ್ಯ ನಮಗೆ ಸಿಕ್ಕಿದೆ.[ಕಿಶೋರ್ ಕುಮಾರ್ ಅವರ ಹಾಡು ಕೇಳಿ ಆನಂದಿಸಿ]
ಅಣ್ಣ ಕಿಶೋರ್ ಕುಮಾರ್ ಗಂಗೂಲಿ ಅವರು ಚಿತ್ರರಂಗಕ್ಕೆ ಕಿಶೋರ್ ರನ್ನು ಪರಿಚಯಿಸಿದ್ದು, ಸಚಿನ್ ದೇವ್ ಬರ್ಮನ್ ಹಾಗೂ ರಾಹುಲ್ ದೇವ್ ಬರ್ಮನ್ ಅವರ ಸಂಯೋಜನೆಯಲ್ಲಿ ಕಿಶೋರ್ ಹಾಡುಗಳು ಜನಪ್ರಿಯತೆ ಗಳಿಸಿದ್ದು, ಮೊಟ್ಟ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನ ಸೇರಿದಂತೆ ಆ ಜಮಾನಾದ ಎಲ್ಲಾ ನಾಯಕ ನಟರಿಗೂ ಹಿನ್ನಲೆ ದನಿಯಾದ ಕಿಶೋರ್ ಅಮರ ಗಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಿಶೋರ್ ದಾ ಬಗ್ಗೆ ಬಂದಿರುವ ಸಂದೇಶಗಳು ಇಲ್ಲಿವೆ.. ಜೊತೆಗೆ ಒಂದೆರಡು ಕಾಡುವ ಹಾಡುಗಳಿವೆ...

ಈ ಸ್ಟಾರ್ ಗಳು ಬೆಳೆಯಲು ಕಿಶೋರ್ ದನಿಯೂ ಕಾರಣ
ದೇವಾನಂದ್, ದಿಲೀಪ್ ಕುಮಾರ್, ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಿತೇಂದ್ರ, ಸಂಜೀವ್ ಕುಮಾರ್, ಶಶಿ ಕಪೂರ್, ಮಿಥುನ್ ಚಕ್ರವರ್ತಿ, ವಿನೋದ್ ಖನ್ನ, ರಣಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್, ಸಂಜಯ್ ದತ್, ಸನ್ನಿ ಡಿಯೋಲ್, ಅನಿಲ್ ಕಪೂರ್, ರಾಕೇಶ್ ರೋಷನ್, ಪ್ರಾಣ್, ಸಚಿನ್, ವಿನೋದ್ ಮೆಹ್ರಾ, ರಜನಿಕಾಂತ್, ಚಂಕಿಪಾಂಡೆ, ಕುಮಾರ್ ಗೌರವ್, ಗೋವಿಂದ, ಜಾಕಿ ಶ್ರಾಫ್ ಸೇರಿದಂತೆ ಇನ್ನೂ ಅನೇಕರು.
|
ನನ್ನ ಪೋಷಕರ ಜೀವನಗಾಥೆಗೆ ಕಿಶೋರ್ ಸಾಂಗ್
ನನ್ನ ಪೋಷಕರ ಜೀವನ ಪಯಣ, ಕಿಶೋರ್ ಸಾಂಗ್, ನನ್ನ ಜೀವನ ಬೆಳವಣಿಗೆ ಎಲ್ಲವೂ ಅವಿಸ್ಮರಣೀಯ.
|
ಜಿಂದಗಿ ಎಕ್ ಸಫರ್ ಹೇ ಸುಹಾನಾ
ಜಿಂದಗಿ ಎಕ್ ಸಫರ್ ಹೇ ಸುಹಾನಾ.. ಇದು ಕಿಶೋರ್ ಜೀವನಗಾಥೆಯನ್ನೇ ಹಾಡಿದಂತೆ ಭಾಸವಾಗುತ್ತದೆ.

ದಾಂಪತ್ಯ ಗೀತೆ ಸರಾಗ
ನಾಲ್ಕು ಬಾರಿ ಮದುವೆಯಾಗಿದ್ದ ಕಿಶೋರ್ ಅವರು ಕೊನೆಗಾಲದಲ್ಲಿ ಪರಿಸರ, ಗಿಡ ಮರಗಳನ್ನು ಪ್ರೀತಿಸಲು ಶುರು ಮಾಡಿದ್ದರು. ರುಮಾ, ನಟಿಯರಾದ ಮಧುಬಾಲಾ, ಯೋಗೀತಾ, ಲೀನಾ ಪತ್ನಿಯರಾಗಿ ಕಿಶೋರ್ ಜೀವನದಲ್ಲಿ ಕಾಣಿಸಿಕೊಂಡವರು. ಇದಕ್ಕಿಂತ ಗಾಯಕ, ಗಾಯಕಿಯರ ಜೊತೆ ಯುಗುಳ ಗೀತೆ ಹಾಡಿದ್ದೇ ಕಿಶೋರ್ ಗೆ ಹೆಚ್ಚು ಸುಖ ನೀಡಿತ್ತು.
ಕಿಶೋರ್ ಗಾಗಿ ಅಭಿಮಾನಿಗಳು ಹಾಡಬಹುದು
ಕಿಶೋರ್ ಹಾಡು ಕೇಳಿ ಮರುಳಾದ ಅನೇಕ ಮಂದಿ ಈ ಹಾಡು ಕಿಶೋರ್ ಕುರಿತಂತೆ ಹಾಡಿದರೂ ಅಚ್ಚರಿಯೇನಿಲ್ಲ. ಅಗರ್ ತುಮ್ ನಾ ಹೋತೆ
|
ದಿಗ್ಗಜ ಗಾಯಕನಿಗೆ ನನ್ನ ನಮನ
ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ನನ್ನ ನಮನ.
ತೆರೆ ಬಿನಾ ಭಿ ಕ್ಯಾ ಜೀನಾ
ಕಿಶೋರ್ ಬಿನಾ ಫ್ಯಾನ್ಸ್ ಗೆ ಬಾಲಿವುಡ್ ಸಂಗೀತ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮುಖದ್ದರ್ ಕ ಸಿಕಂದರ್ ಚಿತ್ರದ ಮರೆಯದಂಥ ಹಾಡು ಓ ಸಾಥಿ ರೇ.. ತೆರೆ ಬಿನಾ ಭಿ ಕ್ಯಾ ಜೀನಾ
|
ಕಿಶೋರ್ ನನಗೆ ನೆನಪಾಗುವುದು ಹೀಗೆ
ಕಿಶೋರ್ ನನಗೆ ನೆನಪಾಗುವುದು ಹೀಗೆ ಎಂದ ಅಭಿಮಾನಿ.