For Quick Alerts
  ALLOW NOTIFICATIONS  
  For Daily Alerts

  ನಟಿ ಕತ್ರಿನಾ ಕೈಫ್ ನಿಜ ನಾಮಧೇಯ ಏನು?

  By Srinath
  |

  ಬಾಲಿವುಡ್ ಮಂದಿ ಕ್ಲಿಕ್ ಆಗಲು ಏನು ಬೇಕಾದರೂ ಮಾಡಬಲ್ಲರು ಎಂಬ ಪ್ರತೀತಿ ಇದೆ. ಹಾಗೆಯೇ ಏನೂ ಮಾಡಲಾಗದಿದ್ದರೆ ಅದೇ ಹತಾಶೆಯಲ್ಲಿ ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ... Like ಮೊನ್ನೆ ಸತ್ತ, ಜಿಯಾ ಖಾನ್.

  ಅದು ಹಾಗಿರಲಿ. ಮುಖ್ಯವಾಗಿ ಬಾಲಿವುಡ್ ನಲ್ಲಿ ತಮ್ಮ ಸ್ಥಾನಮಾನ ಗಳಿಸಲು/ಉಳಿಸಿಕೊಳ್ಳಲು ಸೆಲಿಬ್ರೆಟಿಗಳು ತಮ್ಮ ಕುಲಗೋತ್ರವನ್ನೇ ಚೇಂಜ್ ಮಾಡಿಬಿಡುತ್ತಾರೆ. ಕೊನೆಗೆ ಇದನ್ನೆಲ್ಲ ಜ್ಯೋತಿಷಿಗಳ ತಲೆಗೆ ಕಟ್ಟುತ್ತಾರೆ.

  ಅಷ್ಟಕ್ಕೂ ಹೆಸರಿನಲ್ಲೇನಿದೆ. ತಮ್ಮಲ್ಲಿನ ಪ್ರತಿಭೆ/ ಸಾಮರ್ಥ್ಯವಷ್ಟೇ ಮುಖ್ಯವಲ್ಲವಾ? ಎಂದು ಅಭಿಮಾನಿಗಳು ಕೇಳುವುದು ಸಹಜ. ಆದರೂ ಅದೃಷ್ಟದ ಬೆನ್ನೇರಿ ಅನೇಕ ಖ್ಯಾತ ನಾಮರು ತಮ್ಮ ಮೂಲ ಹೆಸರುಗಳನ್ನೇ ಬದಲಿಸಿಕೊಂಡಿರುವುದು ಸ್ವಾರಸ್ಯಕರವಾಗಿದೆ. ಅಂತಹ ನಾಯಕ/ನಾಯಕಿಯರ ನಿಜ ನಾಮಧೇಯಗಳನ್ನು ಅರಸುತ್ತಾ, ಬಾಲಿವುಡ್ ನಲ್ಲೊಂದು ಸುತ್ತು ಹಾಕೋಣ ಬನ್ನಿ. ನವ ನಾಮಗಳ ಬೆನ್ನೇರಿ ...

  ಅಭಿಮಾನಿಗಳಿಗೆ ತೊಂದರೆ ಕೊಡ್ಬಾರದು ಅಂತ

  ಅಭಿಮಾನಿಗಳಿಗೆ ತೊಂದರೆ ಕೊಡ್ಬಾರದು ಅಂತ

  ಕತ್ರಿನಾ ಕೈಫ್ ಎಂಬ ಆಮದು ಸೌಂದರ್ಯದ ಗಣಿ ಗೊತ್ತಲ್ಲಾ. ಆಳಕ್ಕಿಳಿದು ಏನಮ್ಮಾ ವಸಿ ನಿನ್ನ ನಿಜ ಹೆಸರು ಹೇಳ್ತೀಯಾ ಅಂತ ಕೇಳಿದ್ದಕ್ಕೆ ಶೀಲಾ ಅಲ್ಲ ಕತ್ರಿನಾ ತುರ್ಖೋಟ್ (Turquotte) ಅಂತಾಳೆ, ಬಳಕುತ್ತಾ! ಜನಕ್ಕೆ ಅಂದರೆ ಅಭಿಮಾನಿಗಳಿಗೆ ತೊಂದರೆ ಕೊಡ್ಬಾರದು ಅಂತ ಹೀಗೆ ಕೈಫ್ ಆದೆ ಎಂದು ಮತ್ತೊಮ್ಮೆ ನೀಳಕಾಯವನ್ನು ಝಲ್ಲೆಂದು ಮುಂಚಾಚುತ್ತಾಳೆ.

  ಆಂಜೆಲಿನಾ ಜೋಲಿ ಹೆಸರಿಗೆ ಜೋತುಬಿದ್ದು

  ಆಂಜೆಲಿನಾ ಜೋಲಿ ಹೆಸರಿಗೆ ಜೋತುಬಿದ್ದು

  ನಫೀಸಾ ಖಾನ್ ಅಂದರೆ ಯಾರು ಗೊತ್ತಾ? ಮೊನ್ನೆ ಜೀವನದಲ್ಲಿ ಜುಗುಪ್ಸೆಗೊಂಡು ಪ್ರಾಣಬಿಟ್ಟಳಲ್ಲ ಅವಳೇ ಜಿಯಾ ಖಾನ್. ಆಂಜೆಲಿನಾ ಜೋಲಿ ತಾರಾಗಣದ Gia ಪಾತ್ರಧಾರಿಯ ವಶೀಕರಣಕ್ಕೊಳಗಾಗಿ ನಫೀಸಾ, ಜಿಯಾ ಖಾನ್ ಆಗಿದ್ದಳು.

  ಶಿಲ್ಪಾ ಹುಟ್ಟಾ ಹೆಸರು ಗೊತ್ತಾ?

  ಶಿಲ್ಪಾ ಹುಟ್ಟಾ ಹೆಸರು ಗೊತ್ತಾ?

  ಇನ್ನು 2008ರಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಒಂದು ಜನ್ಮ ರಹಸ್ಯವನ್ನು ಬಿಚ್ಚಿಟ್ಟಳು. ಏನಪಾ ಅಂದ್ರೆ, ಹುಟ್ಟಾ ತನ್ನ ಹೆಸರು ಶಿಲ್ಪಾ ಅಲ್ಲ ಕಣ್ರೀ, ಅಶ್ವಿನಿ ಶೆಟ್ಟಿ ಎಂದು ಒಮ್ಮೆ ತನ್ನ ಸಪೂರ ಸೊಂಟ ಬಳುಕಿಸಿದ್ದಳು. ಸಂಖ್ಯಾಶಾಸ್ತ್ರಕ್ಕೆ ಶರಣಾಗಿ ಹದಿಹರಯದಲ್ಲೇ ಹೆಸರು ಬದಲಿಸಿಕೊಂಡುಬಿಟ್ಟಳು ಶಿಲ್ಪಿ.

  ಮಾಡೆಲ್ ಅಕ್ಷಯ್ ಕುಮಾರ್ ಹೆಸರೇನು?

  ಮಾಡೆಲ್ ಅಕ್ಷಯ್ ಕುಮಾರ್ ಹೆಸರೇನು?

  ಅಕ್ಕಿ ಗೊತ್ತಲ್ಲಾ? ಅದೇ ಪಡ್ಡೆ ಹುಡುಗಿಯರ ಕನಸಿನ ಹುಡುಗ ಅಕ್ಷಯ್ ಖನ್ನಾ. ಆತನ ನಿಜನಾಮ ರಾಜೀವ್ ಹರಿ ಓಂ ಭಾಟಿಯಾ. ಹಾಗಾಗಿ ಅಕ್ಕಿಯನ್ನು ಪ್ರೀತಿಯಿಂದ ರಾಜು ಅಂತಲೂ ಕರೆಯುತ್ತಾರೆ.

  ಬಾಲ್ಯದಲ್ಲೇ ಕಟ್ ಮಾಡಿಸಿಕೊಂಡ ಫರ್ಹಾನ್

  ಬಾಲ್ಯದಲ್ಲೇ ಕಟ್ ಮಾಡಿಸಿಕೊಂಡ ಫರ್ಹಾನ್

  ಜಾನ್ ಗೊತ್ತಲ್ಲ. ಅದೇ ಬಿಪ್ಸ್ BF. ಅದೇರಿ, ಹೆಣ್ಮಕ್ಳ ಪಾಲಿನ ಆರಾಧ್ಯ ದೈವ ಜಾನ್ ಅಬ್ರಹಾಂ. ಅಪ್ಪನಿಂದ ಬಳುವಳಿಕಯಾಗಿ ಬಂದಿದ್ದ ಜಾನ್ ಅನ್ನು ಹಾಗೆಯೇ ಉಳಿಸಿಕೊಂಡನಾದರೂ ಫರ್ಹಾನ್ ಹೆಸರನ್ನು ಬಾಲ್ಯದಲ್ಲೇ ಕಟ್ ಮಾಡಿಸಿಕೊಂಡ ಪುಣ್ಮಾತ್ಮ ಈತ.

  ಅಪ್ಪನ ಸುವಿಖ್ಯಾತ ಹೆಸರೂ ಬೇಡವೆಂದಳು

  ಅಪ್ಪನ ಸುವಿಖ್ಯಾತ ಹೆಸರೂ ಬೇಡವೆಂದಳು

  ಹಳಬರ ಪೈಕಿ ಭಾನುರೇಖಾ ಗೊತ್ತಲ್ಲ? ಯಾರಪ್ಪ ಅದು ಎಂದು ಕೇಳುವ ಮೊದಲು ಪಕ್ಕದಲ್ಲಿರುವ ಚಿತ್ರ ನೋಡಿ ಓ ನಮ್ ರೇಖಾನಾ? ಎಂದು ಕೊಂಕು ನಗೆ ಚೆಲ್ಲಬೇಡಿ. ಅಪ್ಪನ ಸುವಿಖ್ಯಾತ ಗಣೇಶನ್ ಹೆಸರು ಮತ್ತು ಭಾನು ಎರಡನ್ನೂ ಬಿಟ್ಟು ಸ್ವಸಾಮರ್ಥ್ಯದಿಂದ ಬಾನೆತ್ತರಕ್ಕೆ ಬೆಳೆದವಳು ಭಾನುರೇಖಾ ಗಣೇಶನ್ ಅಲಿಯಾಸ್ ರೇಖಾ ಎಂಬ ಎವರ್ ಗ್ರೀನ್ ಸ್ನಿಗ್ಧ ಚೆಲುವೆ.

  ಗೋವಿಂದ ಗೋವಿಂದ!

  ಗೋವಿಂದ ಗೋವಿಂದ!

  ಬಿಡಿ, ಗೋವಿಂದನ ನಾಮ ಹಲವು! ಆದರೆ ಬಾಲಿವುಡ್ ಗೋವಿಂದನ ಮೂಲ ಹೆಸರು ಗೋವುಂದ್ ಅರುಣ್ ಅಹುಜಾ. ಸಂಖ್ಯಾಶಾಸ್ತ್ರದವನ ಸಲಹೆಯ ಮೇರೆಗೆ ಗೋವಿಂದ ನಾಮ ಸ್ಮರಣೆಯಾಗಿದೆ. 'ಛಿ ಛಿ' ಅಂತಲೂ ಈತನನ್ನು ಗೆಳೆಯರು ಗೇಲಿ ಮಾಡುವುದುಂಟು.

  ಶಾರ್ಟ್ ಅಂಟ್ ಸ್ವೀಟ್ ಮಲ್ಲಿ

  ಶಾರ್ಟ್ ಅಂಟ್ ಸ್ವೀಟ್ ಮಲ್ಲಿ

  ನಿಮಗೆ ಮಲ್ಲಿಯಂತೂ ಗೊತ್ತುಂಟು. ಅದೇ ಮಲ್ಲಿಕಾ ಶೆರಾವತ್. ಅವಳ ಮೂಲ ಹೆಸರು ರೀಮಾ ಲಂಬಾ. ಛೀ! ಎಂದು ಮೂಗುಮುರಿಯಬೇಡಿ. ನೀವು ಹೀಗೆ ಮೂಗು ಚಿಕ್ಕದು ಮಾಡಿಕೊಳ್ಳುತ್ತೀರಿ ಅಂತಲೇ ಆರಂಭದಲ್ಲೇ ಮಲ್ಲಿಕಾ ಶೆರಾವತ್ ಆಗಿ ಶಾರ್ಟ್ ಅಂಟ್ ಸ್ವೀಟ್ ಆಗಿ ಮಲ್ಲಿ ಅಂತಲೂ ಅಭಿಮಾನಿಗಳ ಮನದಲ್ಲಿ ಸ್ಥಾಪಿತಗೊಂಡಳು. ಅಂದಹಾಗೆ ಮಲ್ಲಿಕಾ ಅಂದರೆ ರಾಣಿ ಎಂದು. ಇನ್ನು ಶೆರಾವತ್ ಎಂಬುದು ಮಲ್ಲಿ ತಾಯಿಯ ಮೊದಲ ಹೆಸರು.

  ಗಿರಿಜಾ ಕಲ್ಯಾಣ

  ಗಿರಿಜಾ ಕಲ್ಯಾಣ

  ಇಂದು ಮದುವೆಯಾದ ಶೃತಿ ಚಂದ್ರಚೂಡ್ ಅವರ ಮೂಲ ಹೆಸರು ಗಿರಿಜಾ

  ಬಾಲಚಂದರ್ ಕೂಸು ಶಿವಾಜಿ

  ಬಾಲಚಂದರ್ ಕೂಸು ಶಿವಾಜಿ

  Last but not least ಎಂಬಂತೆ ಹೇಳುವುದಾದರೆ ಕೆ ಬಾಲಚಂದರ್ ಅವರ ಕೂಸು, ಇಂದಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರು ಶಿವಾಜಿ ರಾವ್ ಗಾಯಕ್ವಾಡ್.

  English summary
  What's in a name? Just about everything! That's precisely why celebrities don't mind changing their birth names. Name Changing Game in Bollywood- Katrina Turquotte to Kiaf. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X