»   » ಮ್ಯಾಕ್ಸಿಮ್ ನಲ್ಲಿ ನರ್ಗೀಸ್ ಫಕ್ರಿ ಮಿನಿಮನ್ ದರ್ಶನ

ಮ್ಯಾಕ್ಸಿಮ್ ನಲ್ಲಿ ನರ್ಗೀಸ್ ಫಕ್ರಿ ಮಿನಿಮನ್ ದರ್ಶನ

By: ರವಿಕಿಶೋರ್
Subscribe to Filmibeat Kannada

ಯುಕೆ ಮೂಲದ ಪುರುಷರ ನಿಯತಕಾಲಿಗೆ ಮ್ಯಾಕ್ಸಿಮ್. ಖ್ಯಾತ ತಾರೆಗಳು, ಗಾಯಕಿಯರು, ರೂಪದರ್ಶಿಯರು ಈ ನಿಯತಕಾಲಿಕೆಯಲ್ಲಿ ಕಾಲಕಾಲಕ್ಕೆ ತಮ್ಮ ಸೌಂದರ್ಯವನ್ನು ಅನಾವರಣ ಮಾಡಿದ್ದಾರೆ. ಅರೆಬರೆ ಬಟ್ಟೆಗಳಲ್ಲಿ ಪುರುಷರ ರಸಿಕತೆಯನ್ನು ಕೆಣಕುವುದೇ ಈ ಪತ್ರಿಕೆಯ ವಿಶೇಷ.

ಈ ಪತ್ರಿಕೆಯಲ್ಲಿ ಎಷ್ಟೋ ರೂಪದರ್ಶಿಗಳು, ತಾರೆಗಳು ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ. ಈಗ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹ ಮಿನಿಮನ್ ದರ್ಶನ ನೀಡಿದ್ದಾರೆ. ಈ ಹಿಂದೆ ಟಾಪ್ ಲೆಸ್ ನಲ್ಲಿ ಗಮನಸೆಳೆದ ತಾರೆ ನರ್ಗಿಸ್ ಫಕ್ರಿ. ಇನ್ನು ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ತಮ್ಮ ಸೌಂದರ್ಯ ಲಹರಿಯನ್ನು ಧಾರೆ ಎರೆದಿದ್ದಾರೆ.

ನರ್ಗೀಸ್ ಹೇಳಿಕೇಳಿ ಮಾಡೆಲ್ ಪ್ರಪಂಚದಿಂದ ಬಂದವರು. ಬಟ್ಟೆ ಹಾಕುವುದಕ್ಕಿಂತಲೂ ಕಳಚುವುದೇ ಇವರಿಗೆ ಸಲೀಸು. ರಾಕ್ ಸ್ಟಾರ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ. ಈಗ ಮ್ಯಾಕ್ಸಿಮ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಚಿತ್ರಗಳ ಮೇಲೆ ಒಮ್ಮೆ ಕಣ್ಣಾಡಿಸಿ.

ಕಡುಗಪ್ಪು ಟೂ ಪೀಸ್ ನಲ್ಲಿ ನರ್ಗೀಸ್ ಫಕ್ರಿ

ಮೈಮೇಲೆ ಪಾರದರ್ಶಕ ದುಪ್ಪಟ. ಕಡುಕಪ್ಪು ಬಣ್ಣದ ಟೂ ಪೀಸ್ ವಸ್ತ್ರಧಾರಣೆ. ಮೊದಲ ನೋಟಕ್ಕೆ ಪಡ್ಡೆಗಳನ್ನು ಫಿನಿಶ್ ಮಾಡುವ ನೋಟ.

ಮೋಡಿ ಮಾಡುವ ಮತ್ತೊಂದು ಚಿತ್ರಪಟ

ಮಾಡೆಲ್ ಪ್ರಪಂಚದಲ್ಲಿ ಹೆಜ್ಜೆ ಹಾಕಿರುವ ನರ್ಗೀಸ್ ಗೆ ಈ ರೀತಿಯ ಭಂಗಿಗಳೆಲ್ಲಾ ಲೀಲಾಜಾಲ. ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲೇ ಆಟವಾಡಿದ ಬೆಡಗಿ. ಇನ್ನು ಮ್ಯಾಕ್ಸಿಮ್ ನಲ್ಲಿ ಆಟವಾಡಲು ಬರುವುದಿಲ್ಲವೇ?

ಅಷ್ಟೆಲ್ಲಾ ಮಾಡಿದ ಮೇಲೆ ಒಂಚೂರು ಹೀಗೆ

ಕಲಾರಸಿಕರನ್ನು ಅಷ್ಟೆಲ್ಲಾ ಕೆಣಕಿದ ಮೇಲೆ ಒಂಚೂರು ಸಭ್ಯವಾಗಿ ಪೋಸು ಕೊಡಲಿಲ್ಲ ಅಂದರೆ ಹೇಗೆ? ಕಿಟಕಿಗೆ ಬೆನ್ನು ಮಾಡಿ ಕ್ಯಾಮೆರಾಗೆ ಮುಖ ಮಾಡಿ ನೋಡುಗರ ಕಣ್ಣಲ್ಲಿ ಕಣ್ಣಿಟ್ಟು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಕಪ್ಪು ಬಿಳುಪಿನಲ್ಲೂ ಸೂಪರ್ ಲುಕ್

ಇಷ್ಟು ಹೊತ್ತು ಬಣ್ಣ ಬಣ್ಣದ ಚಿತ್ರಗಳಲ್ಲಿ ಚಮಕ್ ತೋರಿದ ಬೆಡಗಿ ಈಗ ಕಪ್ಪು ಬಿಳುಪಿಗೆ ಶರಣಾಗಿದ್ದಾರೆ. ಚಿತ್ರ ಕಪ್ಪು ಬಿಳುಪಾದರೂ ನೋಡುಗರ ಕಣ್ಣಲ್ಲಿ ಕಾಮನಬಿಲ್ಲು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ತುಸು ನಾಚಿದ ನರ್ಗೀಸ್ ಫಕ್ರಿ

ಕಡೆಗೂ ನರ್ಗೀಸ್ ಫಕ್ರಿ ನಾಚಿಕೊಂಡರಪ್ಪಾ. ಇಷ್ಟೆಲ್ಲಾ ಆದ ಮೇಲೆ ನಾಚಿಕೆ ಆಗದೆ ಇರುತ್ತದೆಯೇ? ಇಲ್ಲಿಗೆ ಮ್ಯಾಕ್ಸಿಮ್ ಫೋಟೋಶೂಟ್ ಕೊನೆಯಾಯಿತು. ಶುಭಂ.

English summary
Bollywood Actress & Model Nargis Fakhri's photoshoot for Maxim Magazine July 2013 Edition. Nargis Fakhri entered Bollywood with Rockstar movie opposite to Ranbhir Singh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada