For Quick Alerts
  ALLOW NOTIFICATIONS  
  For Daily Alerts

  ನಾಸಿರುದ್ದೀನ್ ಶಾ ಆರೋಗ್ಯವಾಗಿದ್ದಾರೆ, ಶೀಘ್ರದಲ್ಲೇ ಡಿಸ್ಚಾರ್ಜ್

  |

  ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ನಾಸಿರುದ್ದೀನ್ ಶಾ ಆರೋಗ್ಯವಾಗಿದ್ದಾರೆ ಎಂದು ಶನಿವಾರ ಪಿಟಿಐ ವರದಿ ಮಾಡಿದೆ.

  "ನಾಸಿರುದ್ದೀನ್ ಶಾ ಅರೋಗ್ಯ ಸ್ಥಿರವಾಗಿದ್ದು, ಔಷಧಿಗಳನ್ನು ಪಡೆಯುತ್ತಿದ್ದಾರೆ. ಹಿರಿಯ ನಟ ಸಂಪೂರ್ಣವಾಗಿ ಉತ್ತಮವಾಗಿದ್ದಾರೆ'' ಎಂದು ಪಿಟಿಐಗೆ ಮೂಲವೊಂದು ತಿಳಿಸಿದೆ.

  ಹಿರಿಯ ನಟ ನಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲುಹಿರಿಯ ನಟ ನಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು

  ಜೂನ್ 30 ರಂದು ನಾಸಿರುದ್ದೀನ್ ಶಾ ಪತ್ನಿ ರತ್ನ ಪಾಠಕ್ ಪ್ರತಿಕ್ರಿಯಿಸಿ, ''ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಣ್ಣದೊಂದು ಪ್ಯಾಚ್ ಪತ್ತೆಯಾಗಿದ್ದು, ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ'' ಎಂದು ತಿಳಿಸಿದ್ದರು.

  ಶಾ ಅವರ ಮ್ಯಾನೇಜರ್ ಪ್ರತಿಕ್ರಿಯಿಸಿ "ನಾಸಿರುದ್ದೀನ್ ಶಾ ಅವರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾಸಿರುದ್ದೀನ್ ಶಾ ಜೊತೆ ಪತ್ನಿ ರತ್ನ ಪಾಠಕ್ ಮತ್ತು ಅವರ ಮಕ್ಕಳು ಇದ್ದಾರೆ" ಎಂದಿದ್ದರು.

  ಕಳೆದ ವರ್ಷ ನಾಸಿರುದ್ದೀನ್ ಶಾ ಅನಾರೋಗ್ಯದ ಬಗ್ಗೆ ಸುದ್ದಿಯಾಗಿತ್ತು. ಆದರೆ ಆ ಸುದ್ದಿಯನ್ನು ಪುತ್ರ ವಿವಾನ್ ಶಾ ನಿರಾಕರಿಸಿದ್ದರು.

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶಿವ ರಾಜ್ ಕುಮಾರ್ ಕೊಟ್ಟ ಗಿಫ್ಟ್ ನೋಡಿ | Filmibeat Kannada

  2020ರಲ್ಲಿ ಬಿಡುಗಡೆಯಾಗಿದ್ದ 'ಮೀ ರಕ್ಸಮ್' ಸಿನಿಮಾದಲ್ಲಿ ನಾಸಿರುದ್ದೀನ್ ಶಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಯಾವುದೇ ಚಿತ್ರದಲ್ಲಿ ಶಾ ನಟಿಸಿಲ್ಲ.

  English summary
  Naseeruddin shah Health Update: He is stable and under observation, a hospital source said on Saturday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X