»   » ಕಿರುಕುಳ ಕೇಸು ದಾಖಲಿಸಿದ ನಟಿ ನವನೀತ್ ಕೌರ್

ಕಿರುಕುಳ ಕೇಸು ದಾಖಲಿಸಿದ ನಟಿ ನವನೀತ್ ಕೌರ್

Posted By:
Subscribe to Filmibeat Kannada

ಕನ್ನಡದ 'ದರ್ಶನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ನಟಿ ನವನೀತ್ ಕೌರ್ ಅವರು ಈ ಬಾರಿಯ ಲೋಕಸಭಾ ಚುನಾವನಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಅವರು ಶಿವಸೇನಾ ಲೋಕಸಭಾ ಸಂಸದ ಆನಂದರಾವ್ ಅಡಸೂಲ್ ಹಾಗೂ ಇನ್ನಿಬ್ಬರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ತನ್ನ ವಿರುದ್ಧ ಇರುವ ಹರಿಹಾಯುತ್ತಿದ್ದು, ಅಸಭ್ಯ ಪದಜಾಲವನ್ನು ಬಳಕೆ ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಬೆದರಿಕೆ ಕರೆಗಳನ್ನೂ ಮಾಡಿದ್ದಾರೆ ಎಂದು ನವನೀತ್ ಕೌರ್ ದೂರಿನಲ್ಲಿ ತಿಳಿಸಿದ್ದಾರೆ. [ಮಹಾರಾಷ್ಟ್ರ ಶಾಸಕನ ಜೊತೆ ನವನೀತ್ ಕೌರ್ ಮದುವೆ]


"ತನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಚಾರಿತ್ರ್ಯವಧೆ ಮಾಡಿದ್ದಾರೆ. ಜೊತೆಗೆ ಅಸಭ್ಯ ಪದಜಾಲವನ್ನೂ ಪ್ರಯೋಗಿಸಿದ್ದಾರೆ" ಎಂದು ದೂರಿನಲ್ಲಿ ನವನೀತ್ ಕೌರ್ ಗಾಡ್ಜ್ ನಗರ್ (ಅಮರಾವತಿ) ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಈ ಆರೋಪಗಳನ್ನು 67 ವರ್ಷಗಳ ಆನಂದರಾವ್ ಅವರು ಸರಾಸಗಟಾಗಿ ತಳ್ಳಿಹಾಕಿದ್ದಾರೆ. ನವನೀತ್ ಅವರು ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಅವರು ಸಾರ್ವಜನಿಕ ಅನುಕಂಪ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಸಾರ್ವಜನಿಕ ನೀತಿ ನಿಯಮಗಳು ಗೊತ್ತಿಲ್ಲ. ನನ್ನ ವಿರುದ್ಧ ಇಲ್ಲಸಲ್ಲಸದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ನವನೀತ್ ಕೌರ್ (27) ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಿದ್ದು ಆನಂದರಾವ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಸ್ಪರ್ಧಿಸದಂತೆ ಆನಂದರಾವ್ ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ. ಒಂದು ವೇಳೆ ನಾಮಿನೇಷನ್ ಪತ್ರ ಸಲ್ಲಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾಗಿ ನವನೀತ್ ಕೌರ್ ಆರೋಪಿಸಿದ್ದಾರೆ. (ಏಜೆನ್ಸೀಸ್)

English summary
Actress Navneet Kaur-Rana, who is set to contest Parliamentary election from NCP, has registered a complaint against Shiv Sena Lok Sabha MP Anandrao Adsul and two others on Sunday.
Please Wait while comments are loading...