twitter
    For Quick Alerts
    ALLOW NOTIFICATIONS  
    For Daily Alerts

    ರಿಯಾ ಬಂಧನಕ್ಕೆ ಕಾರಣ ಕೊಟ್ಟ ಎನ್‌ಸಿಬಿ: 'ಸಿಲ್ಲಿ' ಎಂದ ನೆಟ್ಟಿಗರು

    |

    ಸುಶಾಂತ್ ಸಾವು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿಯನ್ನು ಇಂದು (ಸೆಪ್ಟೆಂಬರ್ 08) ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ) ಬಂಧಿಸಿದೆ.

    Recommended Video

    Rhea Chakroborty ಬೆಂಬಲಕ್ಕೆ ನಿಂತು Bollywood | Oneindia Kannada

    ರಿಯಾ ಚಕ್ರವರ್ತಿಯನ್ನು ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಂದು ರಿಯಾಳನ್ನು ಬಂಧಿಸುವ ನಿರ್ಣಯವನ್ನು ಎನ್‌ಸಿಬಿ ಮಾಡಿದ್ದು, ರಿಯಾಳನ್ನು ಬಂಧಿಸಲು ಕಾರಣವನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈ ಕಾರಣ ಬಹಳ 'ಸಿಲ್ಲಿ' ಎನ್ನುತ್ತಿದ್ದಾರೆ ನೆಟ್ಟಿಗರು.

    Breaking: ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್Breaking: ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್

    165 ಗ್ರಾಂ ಗಾಂಜಾವನ್ನು ಕೊಂಡುಕೊಂಡ ಕಾರಣಕ್ಕೆ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರಂತೆ ಎನ್‌ಸಿಬಿ ತಂಡ! ಹೌದು, ಇದೇ ಕಾರಣವನ್ನು ಎನ್‌ಸಿಬಿ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ್ದಾರೆ.

    ಮೂರು ತಿಂಗಳಲ್ಲಿ 165 ಗ್ರಾಂ ಕೊಂಡುಕೊಂಡಿದ್ದರಂತೆ

    ಮೂರು ತಿಂಗಳಲ್ಲಿ 165 ಗ್ರಾಂ ಕೊಂಡುಕೊಂಡಿದ್ದರಂತೆ

    ಇದೇ ವರ್ಷದ ಮಾರ್ಚ್‌ ನಿಂದ ಜೂನ್ ವರೆಗೆ ರಿಯಾ ಆದೇಶದಂತೆ ಸುಶಾಂತ್ ಮನೆ ನೌಕರನಾಗಿರುವ ದೀಪೇಶ್ ಸಾವಂತ್ 165 ಗ್ರಾಂ ಗಾಂಜಾವನ್ನು ಕೊಂಡುಕೊಂಡಿದ್ದರಂತೆ. ಅದನ್ನು ಸುಶಾಂತ್‌ ಗೆ ನೀಡಲಾಗಿತ್ತಂತೆ. ಸುಶಾಂತ್ 2018 ರಿಂದಲೂ ಗಾಂಜಾ ಸೇದುತ್ತಿದ್ದರು ಎಂದು ದೀಪೇಶ್ ಎನ್‌ಸಿಬಿ ಮುಂದೆ ಹೇಳಿದ್ದಾರೆ.

    ಇಬ್ಬರು ಪೆಡ್ಲರ್‌ಗಳ ಬಳಿ ಸಿಕ್ಕಿದ್ದು 59 ಗ್ರಾಂ ಗಾಂಜಾ!

    ಇಬ್ಬರು ಪೆಡ್ಲರ್‌ಗಳ ಬಳಿ ಸಿಕ್ಕಿದ್ದು 59 ಗ್ರಾಂ ಗಾಂಜಾ!

    ಮೊದಲಿಗೆ ಬಂಧನಕ್ಕೆ ಒಳಗಾದ ಇಬ್ಬರು 'ಪೆಡ್ಲರ್'ಗಳ ಬಳಿ ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿದ್ದ ಕೇವಲ 59 ಗ್ರಾಂ ಗಾಂಜಾ. ಈ ಇಬ್ಬರೂ ಸುಶಾಂತ್ ಸಿಂಗ್‌ ಹಾಗೂ ಅವರ ನೌಕರರ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದರು.

    ಸುಶಾಂತ್ ಸಾವಿಗೆ ಸಹೋದರಿ ಕಾರಣ: ಸಾಕ್ಷ್ಯದೊಂದಿಗೆ ದೂರು ನೀಡಿದ ರಿಯಾ!ಸುಶಾಂತ್ ಸಾವಿಗೆ ಸಹೋದರಿ ಕಾರಣ: ಸಾಕ್ಷ್ಯದೊಂದಿಗೆ ದೂರು ನೀಡಿದ ರಿಯಾ!

    ದೀಪೇಶ್ ಹಾಗೂ ಮಿರಾಂಡಾಗೆ ಹಣ ಕೊಟ್ಟಿದ್ದಕ್ಕೆ ಬಂಧನ

    ದೀಪೇಶ್ ಹಾಗೂ ಮಿರಾಂಡಾಗೆ ಹಣ ಕೊಟ್ಟಿದ್ದಕ್ಕೆ ಬಂಧನ

    ರಿಯಾ ಚಕ್ರವರ್ತಿಯನ್ನು ಬಂಧಿಸುವುದಕ್ಕೆ ಎನ್‌ಸಿಬಿ ಕೊಟ್ಟಿರುವ ಕಾರಣ; ಸುಶಾಂತ್‌ನ ನೌಕರರಾದ ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ದೀಪೇಶ್‌ ಅವರುಗಳು ಸುಶಾಂತ್‌ ಗಾಗಿ ಗಾಂಜಾ ಕೊಳ್ಳಲು ರಿಯಾ ಹಣ ಕೊಡುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದಾರಂತೆ ಎನ್‌ಸಿಬಿ. ರಿಯಾ ಗಾಂಜಾ ಆಗಲಿ ಮತ್ಯಾವುದೇ ಡ್ರಗ್ಸ್ ಸೇವನೆ ಮಾಡಿದ್ದಾರೆಂಬ ಬಗ್ಗೆ ಯಾವುದೇ ಉಲ್ಲೇಖ ಬಂಧನ ವಾರೆಂಟ್‌ನಲ್ಲಿ ಇಲ್ಲ.

    ತನಿಖೆಯಿಂದ ಹಿಂದೆ ಸರಿದ ಇಡಿ!?

    ತನಿಖೆಯಿಂದ ಹಿಂದೆ ಸರಿದ ಇಡಿ!?

    ಎನ್‌ಸಿಬಿ, ಇಡಿ ಹಾಗೂ ಸಿಬಿಐ, ಮೂರು ಕೇಂದ್ರ ತನಿಖಾ ಸಂಸ್ಥೆಗಳು ರಿಯಾ ವಿರುದ್ಧ ತನಿಖೆ ನಡೆಸುತ್ತಿವೆ. ಮೊದಲು ತನಿಖೆ ಪ್ರಾರಂಭಿಸಿದ್ದ ಇಡಿ ಈಗ ತನಿಖೆಯಿಂದ ಬಹುತೇಕ ಹಿಂದೆ ಸರಿದಿದೆ. ಸುಶಾಂತ್ ಖಾತೆಯಿಂದ 15 ಕೋಟಿ ವರ್ಗಾವಣೆ ಆಗಿದೆ ಎಂಬ ಆರೋಪದ ಮೇಲೆ ತನಿಖೆ ಪ್ರಾರಂಭಿಸಿದ್ದ ಇಡಿ, ಸುಶಾಂತ್ ಖಾತೆಯಲ್ಲಿ ಅಷ್ಟು ಹಣ ಇರಲೇ ಇಲ್ಲ ಎಂಬ ಸತ್ಯದ ಗೊತ್ತಾದ ಮೇಲೆ ಸುಮ್ಮನಾಗಿದೆ.

    ಭಾರತಕ್ಕೆ ಅಭಿನಂದನೆಗಳು, ಮಧ್ಯಮ ವರ್ಗದ ಕುಟುಂಬವನ್ನು ಸರ್ವನಾಶ ಮಾಡಿದ್ರಿ: ರಿಯಾ ತಂದೆಯ ಆಕ್ರೋಶಭಾರತಕ್ಕೆ ಅಭಿನಂದನೆಗಳು, ಮಧ್ಯಮ ವರ್ಗದ ಕುಟುಂಬವನ್ನು ಸರ್ವನಾಶ ಮಾಡಿದ್ರಿ: ರಿಯಾ ತಂದೆಯ ಆಕ್ರೋಶ

    English summary
    NCB today arrested Rhea Chakrabortyi for giving money to Sushant's workers to buy marijuana for Sushant.
    Wednesday, September 9, 2020, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X