For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಸುಶಾಂತ್ ಸಿಂಗ್ ಆಪ್ತ ಗೆಳೆಯನನ್ನು ವಶಕ್ಕೆ ಪಡೆದ ಎನ್‌ಸಿಬಿ

  |

  ಸುಶಾಂತ್ ಸಿಂಗ್ ಸಾವಿನ ನಂತರ ಜಗಜ್ಜಾಹೀರಾದ ಬಾಲಿವುಡ್ ಡ್ರಗ್ಸ್ ಪ್ರಕರಣ ಹಲವು ನಟ-ನಟಿಯರನ್ನು ವಿಚಾರಣೆಗೆ ಒಳಪಡುವಂತೆ, ಕೆಲವರು ಜೈಲಿಗೆ ಸೇರುವಂತೆಯೂ ಮಾಡಿತು. ಪ್ರಕರಣದ ತನಿಖೆ ಈಗಲೂ ನಡೆಯುತ್ತಿದ್ದು, ಸುಶಾಂತ್ ರ ಸ್ನೇಹಿತನೊಬ್ಬನನ್ನು ಎನ್‌ಸಿಬಿ ವಶಕ್ಕೆ ಪಡೆದಿದೆ.

  ಸುಶಾಂತ್ ಸಿಂಗ್ ಸಂಬಂಧಿ ಮೆಲೆ ಗುಂಡಿನ ಧಾಳಿ | Filmibeat kannada

  ಸುಶಾಂತ್ ಸಿಂಗ್ ಸ್ನೇಹಿತನಾಗಿದ್ದ ರಿಶಿಕೇಶ್ ಪವಾರ್ ಗೆ ಎನ್‌ಸಿಬಿಯು ಈ ಹಿಂದೆಯೂ ಹಲವು ಸಮನ್ಸ್ ಗಳನ್ನು ನೀಡಿತ್ತು, ಆದರೆ ಯಾವುದೇ ಸಮನ್ಸ್ ಗೆ ಉತ್ತರ ನೀಡದಿದ್ದ ರಿಶಿಕೇಶ್ ಪವಾರ್ ಎನ್‌ಸಿಬಿ ಕೈಗೆ ಸಿಗದೆ ನಾಪತ್ತೆಯಾಗಿದ್ದ. ಇದೀಗ ಎನ್‌ಸಿಬಿ ಅಧಿಕಾರಿಗಳು ರಿಶಿಖೇಶ್ ಅನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

  ಸುಶಾಂತ್ ಮನೆಗೆಲಸ ನಿರ್ವಾಹಕ ದೀಪೇಶ್ ಸಾವಂತ್ ಬಂಧನವಾದಾಗ ರಿಶಿಕೇಶ್ ಪವಾರ್ ಹೆಸರು ಹೊರಗೆ ಬಂದಿತ್ತು. ಸುಶಾಂತ್ ಹಾಗೂ ರಿಶಿಕೇಶ್ ಇಬ್ಬರೂ ಸೇರಿ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದರು. ಇಬ್ಬರ ನಡುವೆ ಹಣಕಾಸು ವ್ಯವಹಾರವೂ ಇತ್ತು.

  ದೀಪೇಶ್ ಸಾವಂತ್ ಹೇಳಿರುವಂತೆ, ತಾನು ಸುಶಾಂತ್ ಬಳಿ ಉದ್ಯೋಗಗಕ್ಕೆ ಸೇರುವ ಮೊದಲು ಸುಶಾಂತ್ ಗೆ ರಿಶಿಕೇಶ್ ಪವಾರ್ ಮಾದಕ ದ್ರವ್ಯ ಕೊಂಡು ನೀಡುತ್ತಿದ್ದನಂತೆ.

  ತನಗೆ ಸಮನ್ಸ್ ನೀಡಿದಾಗ ರಿಶಿಕೇಶ್ ಸಾವಂತ್ ಮುಂಬೈ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದರು. ಆದರೆ ಆತನ ಅರ್ಜಿ ರದ್ದಾದ ನಂತರ ರಿಶಿಕೇಶ್ ತಲೆಮರೆಸಿಕೊಂಡಿದ್ದ.

  ಕಳೆದ ವರ್ಷ ಜೂನ್ 14 ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದು, ಆ ನಂತರ ತೆರೆದುಕೊಂಡ ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ, ಆಕೆಯ ಸಹೋದರ, ಸುಶಾಂತ್ ಮನೆ ಗೆಲಸದವರು ಹಾಗೂ ಇನ್ನೂ ಕೆಲವರನ್ನು ಬಂಧಿಸಲಾಗಿತ್ತು. ರಿಯಾ ಹಾಗೂ ಆಕೆಯ ಸಹೋದರ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

  English summary
  Narcotics Control Bureau (NCB) has detained Sushant Singh Rajput's friend, assistant director Rishikesh Pawar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X