For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಿಚಾರಣೆಗೆ ಅರ್ಜುನ್ ರಾಮ್‌ಪಾಲ್ ಹಾಜರು

  |

  ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ರಾಮ್‌ಪಾಲ್ ಸೋಮವಾರ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾದರು.

  ನವೆಂಬರ್ 13 ರಂದು ಅರ್ಜುನ್ ರಾಮ್‌ಪಾಲ್ ಅವರನ್ನು ಎನ್‌ಸಿಬಿ ವಿಚಾರಣೆ ಮಾಡಿತ್ತು. ಇಂದು ಮತ್ತೆ ವಿಚಾರಣೆ ಮಾಡಲಾಗುತ್ತಿದ್ದು, ಅರ್ಜುನ್ ರಾಮ್‌ಪಾಲ್ ಅನ್ನು ಬಂಧಿಸುವ ಸಾಧ್ಯತೆಯೂ ಇದೆ.

  ಡ್ರಗ್ಸ್ ಪ್ರಕರಣದಲ್ಲಿ ನಟರನ್ನು ಬಂಧಿಸಿಲ್ಲ ಏಕೆ: ಇಂದ್ರಜಿತ್ ಲಂಕೇಶ್ ಪ್ರಶ್ನೆಡ್ರಗ್ಸ್ ಪ್ರಕರಣದಲ್ಲಿ ನಟರನ್ನು ಬಂಧಿಸಿಲ್ಲ ಏಕೆ: ಇಂದ್ರಜಿತ್ ಲಂಕೇಶ್ ಪ್ರಶ್ನೆ

  ನವೆಂಬರ್ ನಲ್ಲಿ ಅರ್ಜುನ್ ರಾಮ್‌ಪಾಲ್ ಮನೆಗೆ ಎನ್‌ಸಿಬಿ ಅವರು ದಾಳಿ ಮಾಡಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಕೆಲವರು ನೀಡಿದ ಹೇಳಿಕೆ ಮೇಲೆ ಅರ್ಜುನ್ ರಾಮ್‌ಪಾಲ್ ಹಾಗೂ ಅವರ ಪತ್ನಿ ಮೆಹರ್ ಜಸಿಯಾ ಗೆ ಎನ್‌ಸಿಬಿ ಹೆಗಲೇರಿದೆ.

  ತಿಂಗಳ ಹಿಂದೆ ಅರ್ಜುನ್ ರಾಮ್‌ಪಾಲ್ ಪತ್ನಿ ಮೆಹರ್ ಜಸಿಯಾರ ಸಹೋದರನನ್ನು ಎನ್‌ಸಿಬಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿತ್ತು. ಅದಾದ ನಂತರವೇ ಅರ್ಜುನ್ ರಾಮ್‌ಪಾಲ್ ಮನೆ ಮೇಲೆ ಎನ್‌ಸಿಬಿ ದಾಳಿ ಮಾಡಿತ್ತು.

  ಇಂದು ಮಧ್ಯಾಹ್ನ ಅರ್ಜುನ್ ರಾಮ್‌ಪಾಲ್ ಎನ್‌ಸಿಬಿ ಎದುರು ಹಾಜರಾಗಿದ್ದು. ಇಂದು ಅರ್ಜುನ್ ರಾಮ್‌ಪಾಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಡ್ರಗ್ಸ್ ಕೇಸ್: ಎನ್‌ಸಿಬಿ ಪ್ರಶ್ನೆಗಳಿಗೆ ಉತ್ತರಿಸಿದ ಕರಣ್ ಜೋಹರ್ಡ್ರಗ್ಸ್ ಕೇಸ್: ಎನ್‌ಸಿಬಿ ಪ್ರಶ್ನೆಗಳಿಗೆ ಉತ್ತರಿಸಿದ ಕರಣ್ ಜೋಹರ್

  ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್‌ನ ಡ್ರಗ್ಸ್‌ ಪ್ರಕರಣ ಹೊರಗೆ ಬಂದಿದ್ದು, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ , ಮಹೇಶ್ ಭಟ್ ಇನ್ನೂ ಹಲವಾರು ಮಂದಿ ಸ್ಟಾರ್‌ಗಳನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ.

  English summary
  NCB questioning Actor Arjun Rampal for second time in drug case. In November NCB raided Arjun Rampal's house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X