For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗು ನಿರೀಕ್ಷೆಯಲ್ಲಿ ನೇಹಾ ದೂಪಿಯಾ-ಅಂಗದ್ ಬೇಡಿ ದಂಪತಿ

  |

  ಬಾಲಿವುಡ್ ನಟಿ ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ ಬಹಳ ಖುಷಿಯಲ್ಲಿದ್ದಾರೆ. ಏಕಂದ್ರೆ, ಈ ತಾರಾ ದಂಪತಿ ಎರಡನೇ ಮಗು ಪಡೆಯುತ್ತಿದ್ದಾರೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

  ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ ದಂಪತಿಗೆ ಅದಾಗಲೇ ಒಂದು ಹೆಣ್ಣು ಮಗು ಇದೆ. 2018ರಲ್ಲಿ ಚೊಚ್ಚಲ ಮಗುವಿಗೆ ನೇಹಾ ಜನ್ಮ ನೀಡಿದ್ದರು. ಈಗ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ.

  19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದೆ: ನೋವಿನ ಕಥೆ ಬಿಚ್ಚಿಟ್ಟ ಲೇಡಿ ಗಾಗಾ19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದೆ: ನೋವಿನ ಕಥೆ ಬಿಚ್ಚಿಟ್ಟ ಲೇಡಿ ಗಾಗಾ

  ಗರ್ಭಿಣಿ ಫೋಟೋ ಹಂಚಿಕೊಂಡಿರುವ ನೇಹಾ ಮತ್ತು ಅಂಗದ್ 'ನಮ್ಮ ಮನಗೆ ಹೊಸ ಅತಿಥಿ ಆಗಮನವಾಗುತ್ತಿದೆ' ಎಂದು ಖುಷಿ ಹಂಚಿಕೊಂಡಿದ್ದಾರೆ. ಸೋಮವಾರ ಸರ್ಪ್ರೈಸ್ ಸುದ್ದಿ ನೀಡಿದ್ದಕ್ಕೆ ನೇಹಾ-ಅಂಗದ್ ದಂಪತಿಗೆ ಅಭಿಮಾನಿಗಳು, ನೆಟ್ಟಿಗರು ಶುಭಾಶಯ ಕೋರುತ್ತಿದ್ದಾರೆ.

  2018ರ ಮೇ ತಿಂಗಳು ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ ವಿವಾಹವಾದರು. ನವೆಂಬರ್ 18, 2020ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಈಗ ಎರಡನೇ ಮಗುವನ್ನು ಸ್ವಾಗತಿಸಲು ಕಾಯುತ್ತಿದ್ದಾರೆ.

  ಮೈತುಂಬ ವಿವಾದಗಳಿದ್ದರೂ ದರ್ಶನ್ ಸ್ಟಾರ್ ಗಿರಿ ಮಂಕಾಗದಿರಲು ಇಲ್ಲಿವೆ ಕಾರಣಗಳು | Filmibeat Kannada

  2020ರಲ್ಲಿ ರಿಲೀಸ್ ಆದ "ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್" ಸಿನಿಮಾದಲ್ಲಿ 38 ವರ್ಷದ ಅಂಗದ್ ಬೇಡಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನೇಹಾ ದೂಪಿಯಾ 2018ರಲ್ಲಿ ಕಾಜೋಲ್ ಅಭಿನಯದ ಬಂದಿದ್ದ "ಹೆಲಿಕಾಪ್ಟರ್ ಈಲಾ" ಸಿನಿಮಾದಲ್ಲಿ ಕೊನೆದಾಗಿ ನಟಿಸಿದ್ದರು.

  English summary
  Bollywood actress Neha Dhupia, Angad Bedi to become parents again, announce second pregnancy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X