For Quick Alerts
  ALLOW NOTIFICATIONS  
  For Daily Alerts

  'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯಲ್ಲಿ ತಯಾರಾಗಿರುವ 'ಬೆಲ್ ಬಾಟಮ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಥ್ರಿಲ್ ಹೆಚ್ಚಿಸಿರುವ ಬೆಲ್ ಬಾಟಮ್ ಸಿನಿಮಾ ಆಗಸ್ಟ್ 19 ರಂದು ವರ್ಲ್ಡ್‌ವೈಡ್ ರಿಲೀಸ್ ಆಗುತ್ತಿದೆ.

  80ರ ದಶಕದ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚಿದ್ದು, ಭಾರತ ಸ್ಪೈ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಬಿಟ್ಟರೆ ಬೆಲ್ ಬಾಟಮ್ ಟ್ರೈಲರ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದು ಇಂದಿರಾ ಗಾಂಧಿ ಪಾತ್ರ. ಹೌದು, ಬೆಲ್ ಬಾಟಮ್ ಸಿನಿಮಾದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರವಿದ್ದು, ಬಾಲಿವುಡ್ ಖ್ಯಾತ ನಟಿಯೊಬ್ಬರು ನಿರ್ವಹಿಸಿದ್ದಾರೆ.

  ಆಗಸ್ಟ್ ಚಿತ್ರೋತ್ಸವ: 'ಬೆಲ್ ಬಾಟಮ್' ರೋಚಕತೆ, 'ಭುಜ್' ದೇಶಪ್ರೇಮಆಗಸ್ಟ್ ಚಿತ್ರೋತ್ಸವ: 'ಬೆಲ್ ಬಾಟಮ್' ರೋಚಕತೆ, 'ಭುಜ್' ದೇಶಪ್ರೇಮ

  ತೆರೆಮೇಲೆ ಥೇಟ್ ಇಂದಿರಾ ಗಾಂಧಿಯಂತೆ ಕಾಣಿಸಿಕೊಂಡಿರುವ ಈ ನಟಿ ಯಾರೆಂದು ಗುರುತಿಸುವಲ್ಲಿ ನೆಟ್ಟಿಗರು ವಿಫಲವಾಗಿದ್ದಾರೆ. ಬೆಲ್ ಬಾಟಮ್ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರುವುದು ಯಾರೆಂದು ಒಂದು ಕ್ಷಣ ಗೊಂದಲಕ್ಕೆ ಒಳಗಾಗಿದ್ದಾರೆ.

  ಅಂದ್ಹಾಗೆ, ಅಕ್ಷಯ್ ಕುಮಾರ್ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರುವುದು ನಟಿ ಲಾರಾ ದತ್ತಾ. ಇದು ಲಾರಾ ದತ್ತಾ ಎಂದು ತಿಳಿದ ಮೇಲೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ''ಇದು ಲಾರಾ ದತ್ತಾ ಎಂದು ಕಂಡುಹಿಡಿಯಲು ಸಾಧ್ಯವಿಲ್ಲ. ಇಷ್ಟೊಂದು ಮೇಕ್ ಓವರ್ ಮಾಡಿಕೊಂಡ್ರಾ?'' ಎಂದು ಸರ್ಪ್ರೈಸ್ ವ್ಯಕ್ತಪಡಿಸಿದ್ದಾರೆ.

  ಲಾರಾ ದತ್ತಾ ಮೇಕ್ ಓವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರೊಬ್ಬರು, ''ಮುಂಚಿತವಾಗಿಯೇ ಮೇಕಪ್‌ ಮ್ಯಾನ್‌ಗೆ ರಾಷ್ಟ್ರ ಪ್ರಶಸ್ತಿ ಕೊಡಿ, ಅದು ಲಾರಾ ದತ್ತಾ ಎಂದು ಯಾರಾದರೂ ಗುರುತಿಸಿದರಾ? ಅದ್ಭುತ ಕೆಲಸ'' ಎಂದಿದ್ದಾರೆ.

  ಮತ್ತೊಬ್ಬರು ಟ್ವೀಟ್ ಮಾಡಿ, ''ಇದು ನಮ್ಮ ಮಿಸ್ ಯೂನಿವರ್ಸ್ ಲಾರಾ ದತ್ತಾ? ನಿಜಕ್ಕೂ ಅದ್ಭುತ. ಈ ಚಿತ್ರಕ್ಕಾಗಿ ಕಾಯುತ್ತಿದ್ದೇನೆ'' ಎಂದಿದ್ದಾರೆ.

  Netizens Fail To Recognise Lara Dutta In Bell Bottom Trailer

  ''ಬೆಲ್ ಬಾಟಮ್ ಟ್ರೈಲರ್‌ನಲ್ಲಿ ಲಾರಾ ದತ್ತಾ ಅವರನ್ನು ನಿಜಕ್ಕೂ ಗುರುತಿಸಲು ಆಗಲ್ಲ. ಅವರ ಧ್ವನಿ, ಅವರ ಅಭಿನಯ, ಎಲ್ಲವೂ ಗಮನಾರ್ಹ'' ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

  ಬೆಲ್ ಬಾಟಮ್ ಚಿತ್ರಕ್ಕೆ ಸ್ಕ್ರಿಪ್ಟ್ ಕೇಳದ ಸಹಿ ಹಾಕಿದ್ದೆ ಎಂದು ನಟಿ ಲಾರಾ ದತ್ತಾ, ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ. ''ನಾನು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದೇನೆ. ಇಂದಿರಾ ಗಾಂಧಿ ಪಾತ್ರ ಎಂದು ನನಗೆ ಹೇಳಿದಾಗ, ನಾನು ಸ್ಕ್ರಿಪ್ಟ್ ಕೇಳದೆಯೇ ಓಕೆ ಎಂದಿದ್ದೆ. ಭಾರತದ ಅಪ್ರತಿಮೆ ಮಹಿಳೆಯ ಪಾತ್ರ ನಿರ್ವಹಿಸಬೇಕು ಅಂದಾಗ ಅದಕ್ಕೆ ಅಗತ್ಯವೆನಿಸುವ ತಯಾರಿ ಮತ್ತು ಜವಾಬ್ದಾರಿ ನನಗಿತ್ತು'' ಎಂದು ತಿಳಿಸಿದರು.

  "ಈ ಚಿತ್ರಕ್ಕಾಗಿ ಹೆಚ್ಚು ಸಮಯ ಕಳೆದಿದ್ದೇನೆ. ಇಂದಿರಾ ಪಾತ್ರಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಬೇಕಾಯಿತು. ಇದು ಜೀವಮಾನದ ಒಂದು ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ಇಂತಹ ಅವಕಾಶ ನನಗೆ ನೀಡಿದ್ದಕ್ಕಾಗಿ ಕೃತಜ್ಞಳಾಗಿದ್ದೇನೆ'' ಎಂದು ಲಾರಾ ದತ್ತಾ ಹೇಳಿದರು.

  ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಿಸಿದ್ದು, 80ರ ದಶಕದಲ್ಲಿ ನಡೆಯುವ ಸ್ಪೈ ಥ್ರಿಲ್ಲರ್ ಕಥೆ ಹೊಂದಿದೆ. ವಿಮಾನ ಅಪಹರಣಕಾರರ ಬೆನ್ನಟ್ಟಿ ಹೊರಡುವ ಭಾರತದ ಸ್ಪೈ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಇದು ಬ್ಲಾಕ್ ಬಸ್ಟರ್ ಸಿನಿಮಾ ಆಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಷಯ್ ಕುಮಾರ್ ಪತ್ನಿ ಪಾತ್ರದಲ್ಲಿ ವಾಣಿ ಕಪೂರ್ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಹುಮಾ ಖುರೇಶಿ ನಟಿಸಿದ್ದಾರೆ. ರಂಜಿತ್ ಎಂ ತಿವಾರಿ ನಿರ್ದೇಶಿಸಿದ್ದಾರೆ.

  2018ರಲ್ಲಿ ಬಿಡುಗಡೆಯಾದ 'ವೆಲ್‌ಕಮ್ ಟು ನ್ಯೂಯಾರ್ಕ್' ಚಿತ್ರದಲ್ಲಿ ಕೊನೆಯದಾಗಿ ಲಾರಾ ದತ್ತಾ ನಟಿಸಿದ್ದರು. ಈ ಸಿನಿಮಾ ಬಳಿಕ ಬೆಲ್ ಬಾಟಮ್ ಚಿತ್ರ ಕೈಗೆತ್ತಿಕೊಂಡಿದ್ದರು. 2003ರಲ್ಲಿ 'ಅಂದಾಜ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ಲಾರಾ ದತ್ತಾ 'ಮಸ್ತಿ', 'ನೋ ಎಂಟ್ರಿ', 'ಭಾಗಮ್ ಭಾಗ್', 'ಪಾಟ್ನರ್', 'ಹೌಸ್‌ಫುಲ್', 'ಚಲೋ ದಿಲ್ಲಿ', 'ಡಾನ್ 2', 'ಸಿಂಗ್ ಈಸ್ ಬ್ಲಿಂಗ್' ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ.

  2000ನೇ ವರ್ಷದಲ್ಲಿ 'ಮಿಸ್ ಇಂಡಿಯಾ' ಹಾಗೂ 'ಮಿಸ್ ಯೂನಿವರ್ಸ್' ಪ್ರಶಸ್ತಿಗೆ ಪಾತ್ರರಾಗಿದ್ದರು. 2011ರಲ್ಲಿ ಭಾರತೀಯ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಜೊತೆ ಮದುವೆಯಾದರು.

  English summary
  Netizens fail to recognise 'miss universe' Lara Dutta in Bell Bottom trailer. actually, she played Indira Gandhi role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X