»   » ಬಾಲಿವುಡ್ ಬೆಚ್ಚಿಬೀಳಿಸಿದ ಅಮೀರ್ ಖಾನ್ ಹೇಳಿಕೆ

ಬಾಲಿವುಡ್ ಬೆಚ್ಚಿಬೀಳಿಸಿದ ಅಮೀರ್ ಖಾನ್ ಹೇಳಿಕೆ

Posted By:
Subscribe to Filmibeat Kannada

ತನ್ನ ಮಹತ್ವಾಕಾಂಕ್ಷೆಯ 'ಪಿಕೆ' ಚಿತ್ರ ಪ್ರಚಾರಕ್ಕೆ ಊರೆಲ್ಲಾ ಸುತ್ತುತ್ತಿರುವ ಬಾಲಿವುಡ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಿಂದಿ ಚಿತ್ರರಂಗದ ಬಗ್ಗೆ ಬೇಸರದ ಮಾತನ್ನಾಡಿದ್ದಾರೆ.

ಇದರ ಜೊತೆಗೆ ದಕ್ಷಿಣ ಭಾರತದ ಚಿತ್ರೋದ್ಯಮದ ಬಗ್ಗೆ ಹೆಮ್ಮೆಯ ಮಾತನ್ನಾಡಿರುವ ಅಮೀರ್ ಖಾನ್, ಇಲ್ಲಿ ಇರುವಷ್ಟು ಒಗ್ಗಟ್ಟು ನಮ್ಮ ಹಿಂದಿ ಚಿತ್ರರಂಗದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಬಹುಷಃ ಕನ್ನಡ ಚಿತ್ರೋದ್ಯಮದಲ್ಲಿನ ಈಗಿನ ರಾಜಕೀಯ, ಗುಂಪುಗಾರಿಕೆಯ ಬಗ್ಗೆ ಅಮೀರ್ ಖಾನಿಗೆ ಸರಿಯಾದ ಮಾಹಿತಿ ಇಲ್ಲವೇನೋ?

ಹೈದರಾಬಾದಿನಲ್ಲಿ ಇತ್ತೀಚೆಗೆ ಪಿಕೆ ಚಿತ್ರದ ಪ್ರಚಾರಕ್ಕೆ ತೆರಳಿದ್ದಾಗ 'ನನಗೆ ಚಿತ್ರದ ಸೋಲು ಗೆಲುವಿನ ಬಗ್ಗೆ ಚಿಂತೆಯಿಲ್ಲ, ನನಗೆ ಚಿಂತೆ ಇರುವುದು ನಮ್ಮ ಬಾಲಿವುಡ್ ಮಂದಿಯ ಮೇಲೆ' ಎಂದು ಅಮೀರ್ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಬಾಲಿವುಡ್ ಹೊರತು ಪಡಿಸಿ ಭಾರತ ಚಿತ್ರೋದ್ಯಮದಲ್ಲಿ ಒಗ್ಗಟ್ಟು ಇದೆ. ಆದರೆ ಬಾಲಿವುಡ್ ನಲ್ಲಿ ಅದಿಲ್ಲ. ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರಿಂದ ಹಿಡಿದು ಎಲ್ಲರದ್ದೂ ಅವರು ನಡೆದಿದ್ದೇ ದಾರಿ.

ಹಿಂದಿ ಚಿತ್ರರಂಗದಲ್ಲಿ ಸಾಮಾನ್ಯ ಕಾರ್ಮಿಕರದ್ದೂ ಸಂಘಟನೆಗಳಿರುತ್ತದೆ. ಸೆಟ್ ನಲ್ಲಾಗಲಿ ಅಥವಾ ಚಿತ್ರೀಕರಣದ ನಂತರವಾಗಲಿ ಒಂದು ತಂಡವಾಗಿ ಕೆಲಸ ಮಾಡುವ ಪದ್ದತಿ ನಮ್ಮಲ್ಲಿ ಇಲ್ಲ ಎಂದು ಅಮೀರ್ ಖಾನ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಬಾಲಿವುಡ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಟಾಪ್ ಪಂಕ್ತಿಯ ನಟರಲ್ಲಿ ಅಮೀರ್ ಖಾನ್ ಮೊದಲಿಗರೇನೋ? ಒಟ್ಟಿನಲ್ಲಿ ಅಮೀರ್ ಈ ಹೇಳಿಕೆಗೆ ಬಾಲಿವುಡ್ ಜಗಲಿಯಲ್ಲಿ ಈಗಾಗಲೇ ಹಸಿಬಿಸಿ ಚರ್ಚೆ ಆರಂಭವಾಗಿದೆ.

ದಕ್ಷಿಣದ ಚಿತ್ರೋದ್ಯಮದ ಬಗ್ಗೆಯೂ ಅಮೀರ್ ಮಾತನ್ನಾಡಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನಮ್ಮಲ್ಲಿ ಇದು ಸಾಧ್ಯವೇ ಆಗುತ್ತಿಲ್ಲ

ಬಾಲಿವುಡ್ ನಲ್ಲಿರುವ ಈ ಸಮಸ್ಯೆ ಇಂದು, ನಿನ್ನೆಯದಲ್ಲ. ಹತ್ತಾರು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳುವ ಆಸಕ್ತಿ ನಮ್ಮಲ್ಲಿ ಯಾರಿಗೂ ಇಲ್ಲ ಎನ್ನುವುದು ಅಮೀರ್ ಖಾನ್ ಬೇಸರದ ಮಾತು.

ದಕ್ಷಿಣದ ಚಿತ್ರೋದ್ಯಮದ ಬಗ್ಗೆ ಗೌರವವಿದೆ

ದಕ್ಷಿಣದಲ್ಲಿರುವ ಒಗ್ಗಟ್ಟು, ಶಿಸ್ತನ್ನು ನೋಡಿ ಬಾಲಿವುಡ್ ನವರು ಕಲಿಯಬೇಕಿದೆ. ಚಿತ್ರೀಕರಣದಿಂದ ಹಿಡಿದು, ಚಿತ್ರ ಬಿಡುಗಡೆ, ನಂತರದ ಚಿತ್ರ ಪ್ರಚಾರಕ್ಕೆ ಇಲ್ಲಿನ ಕಲಾವಿದರು ಸ್ಪಂಧಿಸುವುದರ ನನಗೆ ಹೆಮ್ಮೆಯಿದೆ. ನಮ್ಮಲ್ಲೂ ಅದು ಆಗಬೇಕಿದೆ.

ಮೊದಲು ತೆಂಡೂಲ್ಕರ್ ಅವರಿಗೆ ಚಿತ್ರ ತೋರಿಸುವೆ

ಎಂದಿನಂತೆ ನನ್ನ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತುರರಾಗಿದ್ದಾರೆ. ನಾನು ಮೊದಲು ಸಚಿನ್ ತೆಂಡೂಲ್ಕರ್ ಅವರಿಗೆ ಚಿತ್ರವನ್ನು ತೋರಿಸುವ ಆಸಕ್ತಿಯಿದೆ. ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡುತ್ತೇನೆ - ಅಮೀರ್ ಖಾನ್.

ಸಲ್ಲು, ಶಾರೂಖ್ ಗೂ ಚಿತ್ರ ಪ್ರದರ್ಶನ

ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಅವರಿಗೂ ವಿಶೇಷ ಪ್ರದರ್ಶನ ಆಯೋಜಿಸುತ್ತಿದ್ದೇವೆ. ಅವರಿಬ್ಬರು ಮತ್ತು ಸಚಿನ್ ಚಿತ್ರ ವೀಕ್ಷಿಸಿದ ನಂತರ ಅವರುಗಳು ಯಾವ ಪ್ರಮಾಣಪತ್ರ ನೀಡಲಿದ್ದಾರೆ ಎನ್ನುವ ಕುತೂಹಲ ನನ್ನಲ್ಲಿದೆ.

ಇದೇ ಶುಕ್ರವಾರ ಪಿಕೆ ಬಿಡುಗಡೆ

ರಾಜಕುಮಾರ್ ಹಿರಾನಿ ನಿರ್ದೇಶನದ ಪಿಕೆ ಚಿತ್ರ ಇದೇ ಶುಕ್ರವಾರ (ಡಿ 19) ಬಿಡುಗಡೆಯಾಗುತ್ತಿದೆ. ಅಮೀರ್ ಖಾನ್, ಅನುಕ್ಷಾ ಶರ್ಮಾ, ಬೊಮನ್ ಇರಾನಿ, ಸಂಜಯ್ ದತ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ವಿದು ವಿನೋದ್ ಚೋಪ್ರಾ, ರಾಜಕುಮಾರ್ ಹಿರಾನಿ, ಸಿದ್ದಾರ್ಥ್ ರಾಯ್ ನಿರ್ಮಿಸುತ್ತಿದ್ದಾರೆ.

English summary
No Unity at all in Bollywood industry, said Mr. Perfectionist Aamir Khan during his upcoming movie PK promotion in Hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada