For Quick Alerts
  ALLOW NOTIFICATIONS  
  For Daily Alerts

  ಹಿಂದಿ ಬರಲ್ಲ ಎಂದು ಅವಮಾನಕ್ಕೊಳಗಾಗಿದ್ದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೋರಾ ಫತೇಹಿ

  |

  ಬಾಲಿವುಡ್ ನ ಸ್ಟಾರ್ ಡಾನ್ಸರ್ ನೋರಾ ಫತೇಹಿ ಯಾರಿಗೆ ತಾನೆ ಇಷ್ಟ ಇಲ್ಲ. ನೋರಾ ಡಾನ್ಸ್ ಗೆ ಫಿದಾ ಆಗದವರೇ ಇಲ್ಲ. ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳಿಗೆ ಜಬರ್ದಸ್ತ್ ಹೆಜ್ಜೆ ಹಾಕಿರುವ ನೋರಾ ಇಂದು ಬಾಲಿವುಡ್ ನ ಟಾಪ್ ಡಾನ್ಸರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

  ಅಂದಹಾಗೆ ನೋರಾ ಮೂಲತಹ ಭಾರತದವರಲ್ಲ. ಕೆನಡಾ ಮೂಲದ ಈ ದಿಲ್ಬರ್ ವಾಲಿ ಲಡ್ಕಿ ಭಾರತಕ್ಕೆ ಎಂಟ್ರಿ ಕೊಟ್ಟು, ಬಾಲಿವುಡ್ ಎಂಬ ಸಮುದ್ರದಲ್ಲಿ ತನ್ನ ನೆಲೆಕಂಡುಕೊೆಂಡಿದ್ದೇ ಒಂದು ಸಾಹಸ. ಬಾಲಿವುಡ್ ನಲ್ಲಿ ಮಿಂಚಬೇಕು, ಶಾರುಖ್ ಖಾನ್ ಅವರನ್ನು ಭೇಟಿ ಮಾಡಬೇಕು ಎಂಬ ದೊಡ್ಡ ಕನಸನ್ನು ಹೊತ್ತು ಕೆನಡಾದಿಂದ ಭಾರತಕ್ಕೆ ಫ್ಲೈಟ್ ಹತ್ತಿ ಬಂದ ನೋರಾಗೆ ಬಾಲಿವುಡ್ ಮಾಡಿದ್ದು ಅವಮಾನ, ಗೇಲಿ. ಮುಂದೆ ಓದಿ...

  ಕಣ್ಣೀರಿಟ್ಟ ನೋರಾ ಫತೇಹಿ

  ಕಣ್ಣೀರಿಟ್ಟ ನೋರಾ ಫತೇಹಿ

  ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ನೋರಾ ಭಾರತಕ್ಕೆ ಬಂದ ಪ್ರಾರಂಭದಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಗಳಗಳನೆ ಅತ್ತಿದ್ದಾರೆ. ಹಿಂದಿ ಬರಲ್ಲ ಎಂದು ಅವಮಾನಕ್ಕೊಳಗಾದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

  ಹಿಂದಿ ಬರಲ್ಲ ಎಂದು ಅಣಕಿಸುತ್ತಿದ್ದರು

  ಹಿಂದಿ ಬರಲ್ಲ ಎಂದು ಅಣಕಿಸುತ್ತಿದ್ದರು

  ಬಾಲಿವುಡ್ ಗೆ ಮರುಳಾಗಿ ಭಾರತಕ್ಕೆ ಬಂದ ನೋರಾಗೆ ಪ್ರಾರಂಭದಲ್ಲಿ ದೊಡ್ಡ ಆಘಾತವೇ ಎದುರಾಗಿತ್ತು. ಇಲ್ಲಿ ಹಿಂದಿ ಬಂದರಿಗೆ ಮಾತ್ರ ಪ್ರಾಮುಖ್ಯತೆ ಎನ್ನುವುದು ಆಡಿಷನ್ ಗಳನ್ನು ನೀಡಿದ ಬಳಿಕ ಅರಿತುಕೊಂಡರು. ಕೆನಡಾದವರಾಗಿದ್ದರಿಂದ ನೋರಾಗೆ ಹಿಂದಿ ಭಾಷೆಯ ಬಗ್ಗೆ ಗಂಧಗಾಳಿ ಗೊತ್ತಿರಲಿಲ್ಲ. ನೋರಾ ಹಿಂದಿ ಕೇಳಿ ಬಾಲಿವುಡ್ ಮಂದಿ ಬಿದ್ದು ನಗುತ್ತಿದ್ದರಂತೆ. ಗೇಲಿ ಮಾಡುತ್ತಿದ್ದರಂತೆ ಇದರಿಂದ ಮಾನಸಿಕವಾಗಿ ತುಂಬಾ ನೊಂದುಹೋಗಿದ್ದೆ ಎಂದು ನೋರಾ ಹೇಳಿದ್ದಾರೆ.

  ನೋರಾಗೆ ದೊಡ್ಡ ಸವಾಲಾಗಿತ್ತು ಹಿಂದಿ ಭಾಷೆ

  ನೋರಾಗೆ ದೊಡ್ಡ ಸವಾಲಾಗಿತ್ತು ಹಿಂದಿ ಭಾಷೆ

  ಬಾಲಿವುಡ್ ಗೆ ಎಂಟ್ರಿ ಕೊಟ್ಟು ಐಷಾರಾಮಿ ಜೀವನ ನಡೆಸಬಹುದು ಎಂದು ಕೊಂಡಿದ್ದ ನೋರಾ ಕನಸು ಹಿಂದಿ ಭಾಷೆಯಿಂದ ನುಚ್ಚುನೂರಾಯಿತು. ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶದಿಂದ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಬಂದಿದ್ದ ನೋರಾಗಿ ದೊಡ್ಡ ಸವಾಲಾಗಿದ್ದು ಹಿಂದಿ ಭಾಷೆ.

  ಹಿಂದಿ ಕಲಿಯಲು ಪ್ರಾರಂಭಿಸಿದ್ದ ನೋರಾ

  ಹಿಂದಿ ಕಲಿಯಲು ಪ್ರಾರಂಭಿಸಿದ್ದ ನೋರಾ

  ಹಿಂದಿ ಭಾಷೆಯ ಮಹತ್ವ ಅರಿತ ನೋರಾ ಹಿಂದಿ ಕಲಿಯಲು ಪ್ರಾರಂಭ ಮಾಡುತ್ತಾರೆ. ಅನೇಕ ತಿಂಗಳುಗಳ ಕಾಲ ಹಿಂದಿ ಕಲಿಯಲುತ್ತಾರೆ. ಆದರೂ ನೋರಾ ಮಾತನಾಡುವುದನ್ನು ನೋಡಿ ಬಾಲಿವುಡ್ ನ ಅನೇಕ ಮಂದಿ ಅಣಕಿಸುತ್ತಿದ್ದರು. ನೋರಾ ಎದುರಿಗೆಯೇ ಹೈ ಪೈ ಹೊಡೆದು ನಗುತ್ತಿದ್ದರು ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

  ಜಗತ್ತಿನ ಬೇರೆ ಬೇರೆ ದೇಶಗಳಿಂದ ಆಡಿಷನ್ ಗೆ ಬರುತ್ತಿದ್ದರು

  ಜಗತ್ತಿನ ಬೇರೆ ಬೇರೆ ದೇಶಗಳಿಂದ ಆಡಿಷನ್ ಗೆ ಬರುತ್ತಿದ್ದರು

  ನಾನು ಹೋದಮೇಲಾದರು ನಗಬಹುದಿತ್ತು, ಆದರೆ ನನ್ನ ಮುಖಕ್ಕೆ ಹೊಡೆದ ಹಾಗೆ ನಗುತ್ತಿದ್ದರು, ಆಡಿಕೊಳ್ಳುತ್ತಿದ್ದರು ಎಂದು ಕಣ್ಣೀರಿಟ್ಟಿದ್ದಾರೆ. ಪ್ರಾರಂಭದಲ್ಲಿ ಆಡಿಷನ್ ಗೆ ಹೋದಾಗ ಸಾವಿರಾರು ಜನರಿರುತ್ತಿದ್ದರು. ಜಗತ್ತಿನ ಬೇರೆ ಬೇರೆ ಕಡೆಯಿಂದ ಆಡಿಷನ್ ಗೆ ಬರುತ್ತಿದ್ದರು. ಅವರೆಲ್ಲರ ಜೊತೆ ಸ್ಪರ್ಧಿಸಿ ಅವಕಾಶ ಗಿಟ್ಟಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು ಎನ್ನುವದನ್ನು ನೋರಾ ಬಹಿರಂಗ ಪಡಿಸಿದ್ದಾರೆ.

  ಸೂಪರ್ ಹಿಟ್ ಹಾಡುಗಳಿಗೆ ನೋರಾ ಡಾನ್ಸ್

  ಸೂಪರ್ ಹಿಟ್ ಹಾಡುಗಳಿಗೆ ನೋರಾ ಡಾನ್ಸ್

  ಅವಮಾನಗಳನ್ನು ಮೆಟ್ಟಿನಿಂತು ಸುಮಾರು ಐದಾರು ವರ್ಷಗಳ ಬಳಿಕ ನೋರಾ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಸೂಪರ್ ಹಾಡಿಗಳಿಗೆ ಮಸ್ತ್ ಹೆಜ್ಜೆ ಹಾಕಿದ್ದಾರೆ. ಇಂದು ನೋರಾ ಡಾನ್ಸ್ ನೋಡಲು ಇಡೀ ಭಾರತ ಕಾಯುತ್ತಿದೆ. ಓ ಸಾಕಿ ಸಾಕಿ, ದಿಲ್ಬರ್, ಗರ್ಮಿ, ಕಾಮಾರಿಯಾ ಸೇರಿದಂತೆ ಸಾಕಷ್ಟು ಐಟಂ ಹಾಡುಗಳಿಗೆ ನೋರಾ ಸೊಂಟ ಬಳುಕಿಸಿದ್ದಾರೆ.

  ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada
  ಅವಮಾನ ಜಾಗದಲ್ಲಿ ಗೆದ್ದು ತೋರಿದ ನಟಿ

  ಅವಮಾನ ಜಾಗದಲ್ಲಿ ಗೆದ್ದು ತೋರಿದ ನಟಿ

  ಸದ್ಯ ನೋರಾ ಬಳಿ ಎರಡು ಸಿನಿಮಾಗಳಿವೆ. ಡಾನ್ಯ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇಂದು ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನೋರಾ ಅವರನ್ನು ಅಂದು ಅವಮಾನ ಮಾಡಿದ್ದ ಜಾಗದಲ್ಲೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಶ್ರಮ, ಸಾಧಿಸುವ ಛಲ ಇದ್ದರೆ ಏನು ಏನುಬೇಕಾದರು ಗೆಲ್ಲಬಹುದು ಎನ್ನುವುದಕ್ಕೆ ನೋರಾ ಉತ್ತಮ ಉದಾಹರಣೆ.

  English summary
  Famous dancer and Actress Nora Fatehi tears while recalling her Struggling days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X