For Quick Alerts
  ALLOW NOTIFICATIONS  
  For Daily Alerts

  ಭಾರತದ ಸೂಪರ್ ಹೀರೋ ಕ್ರಿಶ್‌ಗೆ ಇವರೇ ನಾಯಕಿ

  |

  ಹಾಲಿವುಡ್‌ ಗೆ ಹೋಲಿಸಿದರೆ ಅತಿಮಾನುಷ ಶಕ್ತಿಯುಳ್ಳ ಸೂಪರ್ ಹೀರೋ ಸಿನಿಮಾಗಳು ಭಾರತದಲ್ಲಿ ತುಸು ಕಡಿಮೆ. ಸಾಮಾನ್ಯ ಕತೆಯ ಸಿನಿಮಾಗಳಲ್ಲೇ ನಮ್ಮ ನಾಯಕರು ಸೂಪರ್ ಹೀರೋಗಳಿಗೆ ಕಡಿಮೆ ಇಲ್ಲದಂತೆ ಸಾಹಸ ಮಾಡುತ್ತಾರೆ ಎಂಬುದು ಬೇರೆ ವಿಷಯ ಬಿಡಿ!

  ಭಾರತದಲ್ಲಿ ಸದ್ಯಕ್ಕೆ ಹಿಟ್ ಆಗಿರುವ ಸೂಪರ್ ಹೀರೋ ಕ್ರಿಶ್. ಈ ನಡುವೆ ಬೇರೆ ಸೂಪರ್ ಹೀರೋ ಸೃಷ್ಟಿಸುವ ಪ್ರಯತ್ನಗಳಾಯಿತಾದರೂ ಸಫಲವಾಗಲಿಲ್ಲ. ಹಾಗಾಗಿ ಕ್ರಿಶ್ ಸರಣಿ ಯಾವುದೇ ದೊಡ್ಡ ಸ್ಪರ್ಧೆ ಇಲ್ಲದೆ ಮುಂದುವರೆಯುತ್ತಿದೆ.

  ಕ್ರಿಶ್ ಸರಣಿಯ ನಾಲ್ಕನೇ ಸಿನಿಮಾ ಯೋಜನೆ ತಯಾರಾಗಿದ್ದು, ಕೆಲವೇ ತಿಂಗಳುಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಎದುರು ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಬಹುತೇಕ ತೆರೆ ಬಿದ್ದಿದೆ.

  ಕೃತಿ ಸನೊನ್ ಬಹಳಾ ಬ್ಯುಸಿ

  ಕೃತಿ ಸನೊನ್ ಬಹಳಾ ಬ್ಯುಸಿ

  ಈ ಮೊದಲು ಕೃತಿ ಸನೊನ್ ಕ್ರಿಶ್ ಗೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಹೊಸ ವರದಿಗಳ ಪ್ರಕಾರ ಕಿಯಾರಾ ಅಡ್ವಾಣಿ ಕ್ರಿಶ್ ಸಿನಿಮಾದ ನಾಯಕಿ ಆಗಲಿದ್ದಾರಂತೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಚಿತ್ರತಂಡದ ಪ್ರಮುಖರೊಬ್ಬರು, 'ಕೃತಿ ಸೆನನ್ ನಮ್ಮ ಮೊದಲ ಆಯ್ಕೆ ಆಗಿತ್ತು, ಆದರೆ ಆಕೆಯ ಶೆಡ್ಯೂಲ್ ಬಹುವಾಗಿ ಬುಕ್ ಆಗಿವೆ ಹಾಗಾಗಿ ನಾವು ಬೇರೆ ನಟಿಯನ್ನು ಹುಡುಕಲೇ ಬೇಕಾಯಿತು' ಎಂದಿದ್ದಾರೆ.

  ಅಧಿಕೃತ ಘೋಷಣೆ ಆಗಲಿದೆ

  ಅಧಿಕೃತ ಘೋಷಣೆ ಆಗಲಿದೆ

  'ಕಿಯಾರಾ ಅಡ್ವಾಣಿ ಸುಂದರಿ ಮಾತ್ರವಲ್ಲದೆ, ಒಳ್ಳೆಯ ನಟಿ ಸಹ. ಜೊತೆಗೆ ಹೃತಿಕ್ ರೋಷನ್ ಜೊತೆಗೆ ಸ್ಕ್ರೀನ್ ಮೇಲೆ ಅದ್ಭುತವಾಗಿ ಕಾಣಲಿದ್ದಾರೆ ಆಕೆ. ಹಾಗಾಗಿ ಕಿಯಾರಾ ನಮ್ಮ ಆಯ್ಕೆ ಆಗಿದೆ, ಕೆಲವು ಔಪಚಾರಿಕತೆಗಳ ನಂತರ ಅಧಿಕೃತ ಘೋಷಣೆ ಆಗಲಿದೆ' ಎಂದಿದ್ದಾರೆ ಅವರು.

  ಸಿನಿಮಾದಲ್ಲಿ ಇರಲಿದ್ದಾರೆ ಇಬ್ಬರು ನಾಯಕಿಯರು

  ಸಿನಿಮಾದಲ್ಲಿ ಇರಲಿದ್ದಾರೆ ಇಬ್ಬರು ನಾಯಕಿಯರು

  ಸಿನಿಮಾದಲ್ಲಿ ಇಬ್ಬರು ನಾಯಕಿಯರಿಲಿದ್ದಾರಂತೆ. ಕಿಯಾರಾ ಜೊತೆಗೆ ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಕ್ರಿಶ್ 4 ಸಿನಿಮಾವನ್ನು ಯಥಾವತ್ತು ರಾಕೇಶ್ ರೋಶನ್ ನಿರ್ದೇಶಿಸಲಿದ್ದು, ಅವರದ್ದೇ ಹೋಮ್ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗಲಿದೆ.

  ಕಿಯಾರಾ-ಕೃತಿ ಅವರ ಮುಂದಿನ ಸಿನಿಮಾಗಳು

  ಕಿಯಾರಾ-ಕೃತಿ ಅವರ ಮುಂದಿನ ಸಿನಿಮಾಗಳು

  ಕಿಯಾರಾ ಅಡ್ವಾಣಿ ಪ್ರಸ್ತುತ ಜುಗ್‌ ಜುಗ್ ಜಿಯೋ, ಭೂಲ್‌ ಭುಲಯ್ಯಾ 2, ಶೇರ್‌ಶಾಹ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಕೃತಿ ಸೆನನ್, ಬಚ್ಚನ್ ಪಾಂಡೆ, ಮೀಮಿ, ಫರ್ಜಿ, ಲುಕಾ ಚುಪಿ 2, ಸೆಕೆಂಡ್ ಇನ್ನಿಂಗ್ಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Not Kriti Sanon, Bollywood actress Kiara Advani will be acting in Krrish 4 as heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X