For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಭೇಟಿಯಾಗಿ ಕನಸು ನನಸಾಯಿತು ಎಂದಿದ್ದೇಕೆ ಒಲಿಂಪಿಯನ್ ಮೀರಾ ಬಾಯಿ ಚಾನು?

  |

  ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿರುವ ವೇಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಡೀ ದೇಶವೇ ಮೀರಾ ಸಾಧನೆಯನ್ನು ಕೊಂಡಾಡುತ್ತಿದೆ. ಬೆಳ್ಳಿ ಗೆದ್ದು ಸಂಭ್ರಮಿಸುತ್ತಿರುವ ಮೀರಾ ಅವರ ಜೀವನ ತೆರೆಮೇಲೆ ಬರಲು ತಯಾರಾಗುತ್ತಿದೆ. ಇತ್ತೀಚಿಗಷ್ಟೆ ಮೀರಾ ಬಾಯಿ ಜೀವನವನ್ನು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬೆಳ್ಳಿ ಸುಂದರಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದ ಮೀರಾ ಬಳಿಕ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ಸಲ್ಮಾನ್ ಖಾನ್ ಒಲಿಂಪಿಯನ್ ಮೀರಾ ಬಾಯಿ ಚಾನು ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮೀರಾ ಬಾಯಿ ಚಾನು ಅವರನ್ನು ಹಗ್ ಮಾಡಿರುವ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸಿನಿಮಾ ಆಗುತ್ತಿದೆ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಮೀರಾ ಬಾಯಿ ಚಾನು ಜೀವನಸಿನಿಮಾ ಆಗುತ್ತಿದೆ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಮೀರಾ ಬಾಯಿ ಚಾನು ಜೀವನ

  ಮೀರಾ ಬಾಯಿ ಅವರನ್ನು ಖುದ್ದು ಭೇಟಿಯಾಗಿ ಕೆಲವು ಸಮಯ ಮಾತುಕತೆ ನಡೆಸಿ ಹೆಮ್ಮೆಯ ಆಟಗಾರ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಮೀರಾ ಜೊತೆಗಿನ ಫೋಟೋ ಶೇರ್ ಮಾಡಿ, "ಬೆಳ್ಳಿ ಪದಕ ವಿಜೇತೆ ಮೀರಾ ಬಾಯಿ ಚಾನು ಅವರನ್ನು ಭೇಟಿಯಾಗಿದ್ದು ಸುಂದರವಾಗಿತ್ತು. ಯಾವಾಗಲೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.

  ಅಂದಹಾಗೆ ಮೀರಾ ಬಾಯಿ ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ. ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಬೇಕು ಎನ್ನುವುದು ಅವರ ಬಹುದಿನಗಳ ಕನಸಂತೆ. ಇದೀಗ ಬೆಳ್ಳಿ ಗೆದ್ದು ಸಂಭ್ರಮಿಸುತ್ತಿರುವ ಮೀರಾ ನೆಚ್ಚಿನ ನಟ ಸಲ್ಮಾನ್ ಅವರನ್ನು ಭೇಟಿಯಾಗುವ ಮೂಲಕ ಅವರ ಕನಸು ನನಸಾಗಿದೆ.

  ಇನ್ನು ಸಲ್ಮಾನ್ ಖಾನ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮೀರಾ, ''ತುಂಬಾ ಧನ್ಯವಾದಗಳು ಸಲ್ಮಾನ್ ಖಾನ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಕನಸು ನನಸಾಗಿದೆ" ಎಂದು ಬರೆದುಕೊಂಡಿದ್ದಾರೆ. ಈ ಹಿಂದೆಯೇ ಮೀರಾ ಸಲ್ಮಾನ್ ಖಾನ್ ಅವರ ಅಭಿಮಾನಿ ಎನ್ನುವುದನ್ನು ಬಹಿರಂಗ ಪಡಿಸಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಮೀರಾ ಸಲ್ಮಾನ್ ಖಾನ್ ಅಭಿಮಾನಿ ಎನ್ನುವ ವಿಚಾರವನ್ನು ಬೆಚ್ಚಿಟ್ಟಿದ್ದರು.

  ಮುಂಬೈನಲ್ಲಿರುವ ಮೀರಾ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದಾರೆ. ಮೀರಾ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿನ್, ಮೀರಾ ಬಾಯಿ ಚಾನು ಅವರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಮಣಿಪುರದಿಂದ ಟೋಕಿಯೋ ವರೆಗಿನ ನಿಮ್ಮ ಪಯಣ ಸ್ಫೂರ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.

  Olympian Mirabai Chanu meets Bollywood Actor Salman Khan in Mumbai

  ಮೀರಾ ಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆ.ಜಿ ವಿಭಾಗದ ಸ್ನ್ಯಾಚ್ ನಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಬಳಿಕ 87 ಕೆ.ಜಿ ವೇಟ್ ಲಿಫ್ಟ್ ಮಾಡುವ ಮೂಲಕ 2ನೇ ಸ್ಥಾನ ಪಡೆದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಕ್ರೀಡಾಪಟು ಮೀರಾ ಆಗಿದ್ದಾರೆ.

  ಇನ್ನು ಮೀರಾ ಬಾಯಿ ಜೀವನ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಮಣಿಪುರ ಮೂಲದ ಸಿನಿಮಾ ನಿರ್ಮಾಣ ಸಂಸ್ಥೆ ಮೀರಾ ಬಾಯಿ ಚಾನು ಜೀವನವನ್ನು ತೆರೆಮೇಲೆ ತರಲು ಮುಂದಾಗಿದೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಮೀರಾ ಬಾಯಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದು, ಮೀರಾ ಕುಟುಂಬ ಒಪ್ಪಂದಕ್ಕೆ ಸಹಿ ಮಾಡಿದೆ.

  ಚಿತ್ರದ ಕಥೆ ಮತ್ತು ಸಂಭಾಷೆಯನ್ನು ಮನೌಬಿ ಎಂ ಎಂ ಬರೆದಿದ್ದಾರೆ. ಓಸಿ ಮೀರಾ ಎನ್ನುವವರು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೀರಾ ಬಾಯಿ ಚಾನು ಜೀವನ ಮತ್ತು ಕ್ರೀಡಾ ಬದುಕನ್ನು ಅನಾವರಣ ಮಾಡಲಾಗುತ್ತೆ. ಚಾನು ಬಾಲ್ಯ, ಹಳ್ಳಿಯ ಜೀವನ, ಚಾನು ವೇಟ್ ಲಿಫ್ಟಿಂಗ್ ತರಬೇತಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಹಾಗೂ ಟೋಕಿಯೋ ಒಲಿಂಪಿಕ್ಸ್ ಹೀಗೆ ಮೀರಾ ಸಂಪೂರ್ಣ ಪಯಣ ಇರಲಿದೆ ಎಂದು ಸಿನಿಮಾ ತಂಡ ಬಹಿರಂಗ ಪಡಿಸಿದೆ.

  English summary
  Olympian Mirabai Chanu meets Bollywood Actor Salman Khan in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X