ಯೂಟ್ಯೂಬ್ ನಲ್ಲಿ ನಂ1 ಟ್ರೆಂಡಿಂಗ್ ಆದ 'ಪದ್ಮಾವತಿ' ಮೊದಲ ಹಾಡು
ಬಾಲಿವುಡ್ ಸಿನಿಮಾಭಿಮಾನಿಗಳು ಸದ್ಯ 'ಪದ್ಮಾವತಿ' ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾದ ಬರುವಿಕೆಗೆ ಮುಂಚೆ ಚಿತ್ರದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಮಾತ್ರವಲ್ಲದೆ ಈ ಹಾಡು ಈಗ ಯೂಟ್ಯೂಬ್ ನಲ್ಲಿ ನಂ1 ಟ್ರೆಂಡಿಂಗ್ ಹಾಡಾಗಿದೆ.
ರಾಣಿ 'ಪದ್ಮಾವತಿ' ಆಗಿರುವ ದೀಪಿಕಾ ಪಡುಕೋಣೆ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಿಜ ಹೇಳಬೇಕು ಅಂದರೆ ಈ ಹಾಡನ್ನು ನೋಡುತ್ತಿದ್ದರೆ ಮೈ ಜುಮ್ ಎನಿಸುತ್ತದೆ. ಪ್ರತಿ ಬಾರಿ ತಮ್ಮ ಸಿನಿಮಾಗಳಲ್ಲಿ ಅದರಲ್ಲಿಯೂ ಹಾಡುಗಳಲ್ಲಿ ಮಾಯಾ ಪ್ರಪಂಚವನ್ನು ಸೃಷ್ಟಿಸುವ ನಿರ್ದೇಶಕ ಸಂಜಯ್ ಲೀಲಾ ಬಂಸಾಲಿ ಈಗ ಮತ್ತೆ ಅದ್ಭುತವನ್ನು ಮಾಡಿದ್ದಾರೆ.

ಚಿತ್ರಕ್ಕೆ ಬಂಸಾಲಿ ಅವರೇ ಸಂಗೀತ ನೀಡಿದ್ದು, ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಹಾಡಿನಲ್ಲಿ ಬಳಸಿರುವ ಸೆಟ್ ಹಾಗೂ ಕಸ್ಟೂಮ್ ಕಣ್ಣಿಗೆ ಹಬ್ಬದಂತೆ ಇದೆ. ಇನ್ನು ಚಿತ್ರದಲ್ಲಿ ಶಾಹಿದ್ ಕಪೂರ್ 'ಮಹಾರಾವಲ್ ರತನ್ ಸಿಂಗ್' ಮತ್ತು ರಣ್ವೀರ್ ಸಿಂಗ್ 'ಅಲಾವುದ್ದೀನ್ ಖಿಲ್ಜಿ' ಅವತಾರ ಎತ್ತಿದ್ದಾರೆ. ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ 'ಪದ್ಮಾವತಿ' ಸಿನಿಮಾ ಡಿಸೆಂಬರ್ 1ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ.


Click it and Unblock the Notifications











